For Quick Alerts
  ALLOW NOTIFICATIONS  
  For Daily Alerts

  ಪುಟ್ಟ ಕಂದನನ್ನು ಪ್ರೀತಿಯಿಂದ ಬರಮಾಡಿಕೊಂಡ ಸ್ಯಾಂಡಲ್ ವುಡ್

  |
  ಪುಟ್ಟ ಕಂದನನ್ನು ಪ್ರೀತಿಯಿಂದ ಬರಮಾಡಿಕೊಂಡ ಸ್ಯಾಂಡಲ್ ವುಡ್. | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಈಗ ಅಪ್ಪ ಅಮ್ಮನಾಗಿದ್ದಾರೆ. ಅವರ ಬದುಕಿನಲ್ಲಿ ಪುಟ್ಟ ಕಂದಮ್ಮನ ಆಗಮನವಾಗಿದೆ. ಯಶ್ ದಂಪತಿಗೆ ಇದೀಗ ಸ್ಯಾಂಡಲ್ ವುಡ್ ಶುಭ ಹಾರೈಸಿದೆ.

  ನಟ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಗೆ ಮುದ್ದಾದ ಹೆಣ್ಣು ಮಗು ಹುಟ್ಟಿದೆ. ಇಂದು ಬೆಳಗ್ಗೆ 6.20ರ ಸುಮಾರಿಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಇಡೀ ಕುಟುಂಬದ ಈಗ ಖುಷಿಯಲ್ಲಿದೆ.

  ಯಶ್ ಆಸೆ ಈಡೇರಿತು : ಸಂತಸ ಹಂಚಿಕೊಂಡ ರಾಕಿಂಗ್ ಕುಟುಂಬ

  ಈ ಸಂತಸದ ಕ್ಷಣದಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದ ಅನೇಕರು ಯಶ್ ಹಾಗೂ ರಾಧಿಕಾಗೆ ಶುಭಾಶಯ ತಿಳಿಸಿದ್ದಾರೆ. ಸುದೀಪ್ ಪತ್ನಿ ಪ್ರಿಯಾ ಸುದೀಪ್, ನಟಿ ರಾಗಿಣಿ ದ್ವಿವೇದಿ, ರಶ್ಮಿಕಾ ಮಂದಣ್ಣ, ನಿರ್ದೇಶಕ ಶಶಾಂಕ್, ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್ ವಿಶ್ ಮಾಡಿದ್ದಾರೆ. ಮುಂದೆ ಓದಿ...

  ದೇವರ ಆಶೀರ್ವಾದ ಇರಲಿ - ಪ್ರಿಯಾ ಸುದೀಪ್

  ''ತಂದೆ ತಾಯಿಯಾದ ಯಶ್ ಹಾಗೂ ರಾಧಿಕಾರಿಗೆ ನನ್ನ ಶುಭ ಹಾರೈಕೆ. ನಿಮ್ಮ ಪುಟ್ಟ ಮಗಳು ನಿಮ್ಮ ಜೀವನದ ಒಂದು ಸುಂದರ ಭಾಗ ಆಗಲಿದ್ದಾಳೆ. ನಿಮಗೆ ದೇವರ ಆಶೀರ್ವಾದ ಇರಲಿ'' ಎಂದು ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ವಿಶ್ ಮಾಡಿದ್ದಾರೆ.

  ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು - ಶಶಾಂಕ್

  ''ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು!! 'ಮುಂಗಾರು ಮಳೆ'-'ಮೊಗ್ಗಿನ ಮನಸ್ಸು' ಚಿತ್ರಗಳನ್ನು ನಿರ್ಮಿಸಿದ್ದು ಒಂದೇ ಸಂಸ್ಥೆ. ಈ ಚಿತ್ರಗಳಿಗೆ ದುಡಿದ ಕಲಾವಿದರು ತಂತ್ರಜ್ಞರು ಯಶಸ್ಸಿನ ಶಿಖರವನ್ನೇರಿದರು ಮತ್ತು ತದನಂತರ ಅವರೆಲ್ಲರಿಗೂ ಹುಟ್ಟಿದ ಮಗು ಹೆಣ್ಣು! ಯೋಗರಾಜ್ ಭಟ್, ಜಿ. ಗಂಗಾಧರ್, ಗಣೇಶ್, ಎಸ್ ಕೃಷ್ಣ ,ಶಶಾಂಕ್ ಇದೀಗ, ಯಶ್-ರಾಧಿಕಾ ಪಂಡಿತ್!'' ಎಂದು ನಿರ್ದೇಶಕ ಶಶಾಂಕ್ ಟ್ವೀಟ್ ಮಾಡಿದ್ದಾರೆ.

  ತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿ

  ಪವನ್ ಒಡೆಯರ್ ಶುಭ ಹಾರೈಕೆ

  ನಿರ್ದೇಶಕ ಪವನ್ ಒಡೆಯರ್ ಸಹ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಯಶ್ ಹಾಗೂ ರಾಧಿಕಾ ಜೋಡಿಗೆ ವಿಶ್ ಮಾಡಿದ್ದಾರೆ. ಈ ಹಿಂದೆ ಯಶ್ ಅವರ 'ಗೂಗ್ಲಿ' ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದರು.

  ರಾಗಿಣಿ, ರಶ್ಮಿಕಾ ವಿಶ್

  ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡುವ ಮೂಲಕ ತಮ್ಮ ಶುಭಾಶಯ ತಿಳಿಸಿದರು. ''ನಿಮ್ಮಿಬ್ಬರನ್ನು ನೋಡಿ ನನಗೆ ತುಂಬ ಖುಷಿಯಾಗಿದೆ. ಆ ದೇವರು ಆರೋಗ್ಯ ಖುಷಿ ನೀಡಲಿ'' ಎಂದಿದ್ದಾರೆ ರಶ್ಮಿಕಾ.

  ರಾಜಕುಮಾರಿ ಬಂದಳು - ಸಂತೋಷ್ ಆನಂದ್ ರಾಮ್

  ''ನಮ್ಮ ರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಮೇಡಂಗೆ ನನ್ನ ಶುಭ ಹಾರೈಕೆ. ನಿಮ್ಮ ಬಾಳಿನಲ್ಲಿ ಈಗ ರಾಣಿಯ ಆಗಮನವಾಗಿದೆ.'' ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ವಿಶ್ ಮಾಡಿದ್ದಾರೆ. ಈ ಹಿಂದೆ ಯಶ್ ಹಾಗೂ ರಾಧಿಕಾ ಜೊತೆಗೆ ಸಂತೋಷ್ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನು ನಿರ್ದೇಶನ ಮಾಡಿದ್ದರು.

  English summary
  watch video : Sandalwood stars wishes for Radhika Pandith and Yash. Kannada actress Radeeka Pandith give birth to baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X