twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಂಡಲ್ ವುಡ್ ನಲ್ಲಿ 'T-10' ಕ್ರಿಕೆಟ್ ಟೂರ್ನಿ

    By Bharath Kumar
    |

    ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಗಾಗಿ ಕಾಯುತ್ತಿರುವ ಕನ್ನಡ ಕಲಾಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಸಿಸಿಎಲ್ ಮಾದರಿಯಲ್ಲಿಯೇ ಸ್ಯಾಂಡಲ್ ವುಡ್ ನಲ್ಲೊಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗುತ್ತಿದೆ. ಈ ಟೂರ್ನಿಯಲ್ಲಿ ನಮ್ಮ ಚಂದನವನದ ತಾರೆಯರು ಆಟವಾಡಲಿದ್ದಾರೆ.

    'T-10' ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, 10 ಓವರ್ ಗಳ ಪಂದ್ಯಗಳಾಗಿರುತ್ತೆ. ಕೇವಲ ಸಿನಿಮಾ ತಾರೆಯರು ಮಾತ್ರವಲ್ಲದೇ, ಕರ್ನಾಟಕ ಕ್ರಿಕೆಟ್ ತಂಡವನ್ನ ಪ್ರತಿನಿಧಿಸಿದ್ದ ಆಟಗಾರರು ಕೂಡ ಆಡಲಿದ್ದಾರೆ. ಈಗಾಗಲೇ ರಾಜ್ ಕಪ್, ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕನ್ನಡ ಸೆಲೆಬ್ರಿಟಿಗಳು ಆಡಿದ್ದಾರೆ. ಈಗ 'ಕೆಸಿಸಿ ಟಿ 10' (ಕನ್ನಡ ಚಲನಚಿತ್ರ ಕಪ್) ಎಂಬ ಟೂರ್ನಿಗೆ ಮುನ್ನುಡಿ ಬರೆದಿದ್ದಾರೆ.

    ಈ ಬಗ್ಗೆ ಕಿಚ್ಚ ಸುದೀಪ್ ಮತ್ತು ಕನ್ನಡ ಕೆಲ ನಿರ್ದೇಶಕರು, ನಿರ್ಮಾಪಕರು ಸುದ್ದಿಗೋಷ್ಠಿ ನಡೆಸಿ ಪಂದ್ಯಾವಳಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ. ಮುಂದೆ ಓದಿ....

    ಒಟ್ಟು ಆರು ತಂಡಗಳು ಆಡಲಿವೆ

    ಒಟ್ಟು ಆರು ತಂಡಗಳು ಆಡಲಿವೆ

    ಏಪ್ರಿಲ್ 7 ಮತ್ತು 8 ರಂದು ನಡೆಯಲಿರುವ ‘ಕೆಸಿಸಿ ಟಿ 10' (ಕನ್ನಡ ಚಲನಚಿತ್ರ ಕಪ್) ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗಿಯಾಗಲಿವೆ. ತಂಡದಲ್ಲಿ ಯಾವೆಲ್ಲ ಆಟಗಾರರು ಆಡಲಿದ್ದಾರೆ ಎಂಬುದು ಇನ್ನು ಅಂತಿಮವಾಗಿಲ್ಲ.

    ಮಾರ್ಚ್ 10ರಂದು ಟೂರ್ನಿಗೆ ಚಾಲನೆ

    ಮಾರ್ಚ್ 10ರಂದು ಟೂರ್ನಿಗೆ ಚಾಲನೆ

    ಮಾರ್ಚ್ 10ರಂದು ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಂದು ತಂಡಗಳ ಹೆಸರು ಮತ್ತು ಯಾವ್ಯಾವ ತಂಡಗಳಲ್ಲಿ ಯಾವ ಯಾವ ಆಟಗಾರರು ಇರಲಿದ್ದಾರೆ ಎಂಬ ವಿಷಯಗಳು ಬಹಿರಂಗವಾಗಲಿದೆ. ಒಂದು ತಂಡದಲ್ಲಿ 12 ಮಂದಿ ಇರಲಿದ್ದು, ಆಟಗಾರರ ಆಯ್ಕೆಗೆ ವಿಶೇಷವಾದ ನಿಯಮಗಳನ್ನು ರೂಪಿಸಲಾಗಿದೆ. ಲಕ್ಕಿ ಡಿಪ್ ಮೂಲಕ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ.

    ಸುದೀಪ್ ಬ್ಯಾಟಿಂಗ್ ಬಗ್ಗೆ ಇಂಗ್ಲೆಂಡ್ ಆಟಗಾರನಿಂದ ಕಾಮೆಂಟ್.!ಸುದೀಪ್ ಬ್ಯಾಟಿಂಗ್ ಬಗ್ಗೆ ಇಂಗ್ಲೆಂಡ್ ಆಟಗಾರನಿಂದ ಕಾಮೆಂಟ್.!

    ವರ್ಷಕ್ಕೆ ಎರಡು ಬಾರಿ ಕೆಸಿಸಿ

    ವರ್ಷಕ್ಕೆ ಎರಡು ಬಾರಿ ಕೆಸಿಸಿ

    ವರ್ಷಕ್ಕೆ ಎರಡು ಬಾರಿ ಕೆಸಿಸಿ ಟೂರ್ನಮೆಂಟ್ ಆಯೋಜಿಸುವ ಗುರಿ ಇರಿಸಲಾಗಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಎರಡನೇ ಸೀಸನ್ ಪಂದ್ಯಾವಳಿಗಳು ಆರಂಭಗೊಳ್ಳಲಿವೆ ಎಂದು ಸುದೀಪ್ ತಿಳಿಸಿದ್ದಾರೆ.

    ಸುದೀಪ್ ಕೂಡ ಆಡಲಿದ್ದಾರೆ

    ಸುದೀಪ್ ಕೂಡ ಆಡಲಿದ್ದಾರೆ

    ಅಂದ್ಹಾಗೆ, ಕಿಚ್ಚ ಸುದೀಪ್ ಸಾರಥ್ಯದಲ್ಲಿ ಇಷ್ಟೊಂದು ಸಿದ್ದತೆಗಳು ನಡೆಯುತ್ತಿದೆ. ಸುದೀಪ್ ಆಡ್ತಾರೋ ಇಲ್ವೋ ಎಂಬ ಕುತೂಹಲ ಕಾಡುತ್ತಿದೆಯಾ.? ಸುದೀಪ್ ಈ ಕೂಟದ ಮಾರ್ಗದರ್ಶಿಯಾಗಿದ್ದು, ಜೊತೆಗೆ ಒಂದು ತಂಡದ ನಾಯಕನಾಗಿ ಆಟವಾಡಲಿದ್ದಾರೆ.

    ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!

    ಸಮಿತಿಯಲ್ಲಿ ಯಾರು ಇದ್ದಾರೆ

    ಸಮಿತಿಯಲ್ಲಿ ಯಾರು ಇದ್ದಾರೆ

    ಕೆಸಿಸಿಯ ಆಂತರಿಕ ಸಮಿತಿಯಲ್ಲಿ ಕೃಷ್ಣ ಎಸ್, ಶ್ರೀಕಾಂತ್ ಕೆ.ಪಿ, ಇಂದ್ರಜಿತ್ ಲಂಕೇಶ್, ನಂದ ಕಿಶೋರ್, ಮಂಜುನಾಥ್, ಶೆಣೈ ಇದ್ದಾರೆ. ಪರಾಮರ್ಶೆ ಸಮಿತಿಯಲ್ಲಿ ಸೂರಪ್ಪ ಬಾಬು, ಶೇಖರ್ ಚಂದ್ರು, ನಾಗೇಂದ್ರ ಪ್ರಸಾದ್, ಡಿಫರೆಂಟ್ ಡ್ಯಾನಿ, ಇಮ್ರಾನ್ ಸರ್ದಾರಿಯಾ, ಕೆಂಪರಾಜು, ಅರ್ಜುನ್ ಜನ್ಯ ಇದ್ದಾರೆ. ಶಿಸ್ತಿನ ಸಮಿತಿಯಲ್ಲಿ ರಾಜೇಂದ್ರ ಸಿಂಗ್ ಬಾಬು, ತಂಡದವರಿದ್ದಾರೆ.

    ದೀಪಿಕಾ ನೆಚ್ಚಿನ ಕ್ರಿಕೆಟಿಗ ಯುವರಾಜ್ ಅಲ್ಲ, ಕೊಹ್ಲಿನೂ ಅಲ್ಲ, ಮತ್ಯಾರು?ದೀಪಿಕಾ ನೆಚ್ಚಿನ ಕ್ರಿಕೆಟಿಗ ಯುವರಾಜ್ ಅಲ್ಲ, ಕೊಹ್ಲಿನೂ ಅಲ್ಲ, ಮತ್ಯಾರು?

    ರಜನಿಕಾಂತ್ ಗೆ ಈ ಮೂರು ಜನ ಕ್ರಿಕೆಟಿಗರು ಅಂದ್ರೆ ಅಚ್ಚುಮೆಚ್ಚುರಜನಿಕಾಂತ್ ಗೆ ಈ ಮೂರು ಜನ ಕ್ರಿಕೆಟಿಗರು ಅಂದ್ರೆ ಅಚ್ಚುಮೆಚ್ಚು

    English summary
    Actor-director Sudeep has decided to start a new cricket tournament for Kannada film industry exclusively and the tournament which is called as Karnataka Chalanachitra Cricket Cup-10 is all set to be launched next month.
    Sunday, March 4, 2018, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X