»   » ನಂಬಲಾಗದ ಸ್ಯಾಂಡಲ್ ವುಡ್ ನ ಭಲೇ ಜೋಡಿ

ನಂಬಲಾಗದ ಸ್ಯಾಂಡಲ್ ವುಡ್ ನ ಭಲೇ ಜೋಡಿ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ಅದೆಷ್ಟೋ ನಟ ನಟಿಯರು ಜೋಡಿಯಾಗಿಲ್ಲ. ಜೋಡಿಗಳು ಅಂದ್ರೆ ಸುಮ್ಮನೆ ಆಕ್ಟ್ ಮಾಡೋ ಹೀರೋ ಹೀರೋಯಿನ್ ಗಳಷ್ಟೇ ಅನ್ಕೋಬೇಡಿ. ಹಾಗಂತ ಹೇಳಿ ನಿರ್ಮಾಪಕ ನಿರ್ದೇಶಕರನ್ನ ನಿಮ್ಮ ಮುಂದೆ ತಂದು ಬೋರು ಹೊಡೆಸೋದಿಲ್ಲ.

ರಮ್ಯಾ-ಪುನೀತ್ ಜೋಡಿ ಸೂಪರ್, ರಾಗಿಣಿ-ಕಿಚ್ಚ ಜೋಡಿ ಸೂಪರ್, ದರ್ಶನ್-ರಕ್ಷಿತಾ ಜೋಡಿ ಸೂಪರ್ ಅನ್ನೋ ನಾವು ಹೀಗೊಂದು ಜೋಡಿ ಇದ್ರೆ ಸೂಪರ್ ಅಲ್ವಾ ಅಂತ ಯೋಚಿಸೋಕೆ ಹೋಗಿರೋದಿಲ್ಲ. ಅದನ್ನ ಹೋಲಿಕೆ ಮಾಡಿ ನೋಡಿದಾಗ ಮಾತ್ರ ವಾವ್ ಅನ್ನಿಸೋದು.

ರವಿಚಂದ್ರನ್ ಗೆ ರಮ್ಯಕೃಷ್ಣಾನೇ ಸೂಪರ್ ಅಂದ್ಕೊಂಡ ನಾವು ಇನ್ನೊಂದು ಆಪ್ಷನ್ ಹುಡುಕೋದೇ ಇಲ್ಲ. ಆದರೆ ಓಹ್ ಹೌದಲ್ವಾ ಇವ್ರೂ ಪೇರ್ ಆದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತಹಾ ವಾವ್ ಜೋಡಿಗಳನ್ನ ಇವತ್ತು ನಿಮ್ಮ ಮುಂದೆ ಇಡ್ತಾ ಇದ್ದೀವಿ. ಅಂತಹಾ ನಾವು ನೋಡದ ಯೋಚನೆ ಮಾಡದ ಜೋಡಿಗಳ್ಯಾರು ಅಂತ ಅಚ್ಚರಿಪಡದೆ ಇಲ್ ನೋಡಿ.

ದರ್ಶನ್-ರಾಗಿಣಿ

ಯಾವ ಯಾಂಗಲ್ ನಿಂದ ನೋಡಿದ್ರೂ ಇದು ಸೂಪರ್ ಜೋಡಿ. ಹೈಟು ಪರ್ಸನಾಲಿಟಿಯಲ್ಲಂತೂ ಕಿಚ್ಚ ಸುದೀಪ್ ಗಿಂತ ರಾಗಿಣಿ ಪರ್ಫೆಕ್ಟ್ ಮ್ಯಾಚಿಂಗ್ ಅನ್ನಿಸೋದು ಚಾಲೆಂಜಿಂಗ್ ಸ್ಟಾರ್ ಗೆ. ಆದ್ರೆ ಇಲ್ಲೀವರೆಗೂ ಚಾಲೆಂಜಿಂಗ್ ಸ್ಟಾರ್-ರಾಗಿಣಿ ಒಂದಾಗಿ ನಟಿಸಿಲ್ಲ.

ಕ್ರೇಜಿಸ್ಟಾರ್-ಕ್ರೇಜಿಕ್ವೀನ್

ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸ್ಯಾಂಡಲ್ ವುಡ್ ಕ್ರೇಜಿಕ್ವೀನ್ ಜೊತೆಗೆ 'ಒಡಹುಟ್ಟಿದವಳು' ಚಿತ್ರದಲ್ಲಿ ನಟಿಸಿದ್ದರು. ಪ್ರೇಕ್ಷಕರು ಈ ಜೋಡಿಯನ್ನು ಮರೆತುಹೋಗಿದೆ. ಕ್ರೇಜಿಸ್ಟಾರ್ ರವಿಮಾಮ-ಕ್ರೇಜಿಕ್ವೀನ್ ರಕ್ಷಿತಾ ಮತ್ತೊಮ್ಮೆ ಜೋಡಿಯಾದ್ರೆ ಆ ರೋಮ್ಯಾನ್ಸ್ ಮತ್ಯಾವ ಜೋಡಿ ಕೊಡೋಕೇ ಸಾಧ್ಯ ಹೇಳಿ.

ಉಪೇಂದ್ರ-ರಾಧಿಕಾ ಪಂಡಿತ್

ಕನ್ನಡದ ಟಿಪಿಕಲ್ ಟ್ಯಾಲೆಂಟೆಡ್ ನಟ ರಿಯಲ್ ಸ್ಟಾರ್ ಉಪ್ಪಿಗೆ ರಾಧಿಕಾ ಪಂಡಿತ್ ಜೋಡಿಯಾದ್ರೆ ಸೂಪರ್ ಅಲ್ವಾ. ಉಪ್ಪಿ ಆಕ್ಟಿಂಗ್ ಜೊತೆಗೆ ಡೈರೆಕ್ಷನ್ ಇದ್ರಂತೂ ಇನ್ನೂ ಸೂಪರ್. ಯಾಕಂದ್ರೆ ರಾಧಿಕಾ ಪಂಡಿತ್ ಆಕ್ಟಿಂಗ್ ವಿಷಯದಲ್ಲಿ ಯಾರಿಗೂ ಕಮ್ಮಿ ಇಲ್ಲ.

ಪ್ರೇಮ್-ರಮ್ಯ

ಲಕ್ಕಿ ಕ್ವೀನ್-ಲವ್ಲಿಸ್ಟಾರ್ ಆ ಜೋಡಿಯನ್ನ ಕಲ್ಪಿಸಿಕೊಂಡ್ರೇ ಥ್ರಿಲ್ಲಿಂಗ್. ಪ್ರೇಮ್ ಗೆ ರಮ್ಯಾ ಜೋಡಿಯಾದ್ರೆ ಅದೊಂಥರಾ ಇಂಟರೆಷ್ಟಿಂಗ್ ಪೇರ್. ಇವರಿಬ್ಬರೂ 'ಜೊತೆಜೊತೆಯಲಿ' ಮತ್ತೊಮ್ಮೆ ಕಾಣಿಸಿಕೊಂಡರೆ ಸೂಪರ್ ಅಲ್ವಾ. ಸ್ಯಾಂಡಲ್ ವುಡ್ ಸೂಪರ್ ಹ್ಯಾಂಡ್ಸಮ್-ಸೂಪರ್ ಬ್ಯೂಟಿ ಈ ಇಬ್ಬರನ್ನ ಲವ್ಲೀ ಜೋಡಿ ಅಂಥ ಎಲ್ಲರೂ ಹೇಳೋದ್ರಲ್ಲಿ ಅನುಮಾನವೇ ಇಲ್ಲ.

ಪುನೀತ್-ರಾಧಿಕಾ ಕುಮಾರಸ್ವಾಮಿ

ಪವರ್ ಸ್ಟಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಜೋಡಿಯಾದ್ರೆ ವಾವ್ ಅನ್ನಹುದು. ಇಬ್ಬರೂ ಅದ್ಭುತ ಡಾನ್ಸರ್. ಈ ಇಬ್ಬರ ಹೈಟು ವೈಟು ಸಖತ್ ಮ್ಯಾಚಿಂಗ್. ಅಭಿನಯದಲ್ಲೂ ಸೂಪರ್ ಆದ್ರೆ ಯಾವಾಗ್ ಜೋಡಿಯಾಗ್ತಾರೋ ಗೊತ್ತಿಲ್ಲ.

ಸುದೀಪ್-ರಾಧಿಕಾ ಪಂಡಿತ್

ಇವರಿಬ್ಬರೂ ಒಂಥರಾ ಅಭಿನಯ ಸಾಧಕರು. ಸತತ ಮೂರು ರಾಜ್ಯ ಪ್ರಶಸ್ತಿ ಪಡೆದಿರೋ ಹ್ಯಾಟ್ರಿಕ್ ಹೀರೋಯಿನ್ ರಾಧಿಕಾ ಪಂಡಿತ್. ನಾಲ್ಕು ಫಿಲಂಫೇರ್ ಪಡೆದಿರೋ ಕಿಚ್ಚ ಸುದೀಪ್ ಇವರಿಬ್ಬರೂ ಒಂದಾದ್ರೆ ಅಭಿನಯದ ಹಬ್ಬ ಖಂಡಿತ.

English summary
Here is the list of most incredible pair in Sandalwood. Still now these pair are not team up in movies. Darshan-Ragini, Crazy Star-Crazy Queen, Upendra-Radhika Pandit, Puneeth-Radhika Kumaraswamy and many more pairs are treat to fans, if they act togather.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada