»   » 'ಮಮ್ಮಿ...save me' ಚಿತ್ರದಲ್ಲಿ ಪ್ರಿಯಾಂಕಾಗೆ ಹೆಲ್ಪ್ ಮಾಡೋರು ಇವರೇ.!

'ಮಮ್ಮಿ...save me' ಚಿತ್ರದಲ್ಲಿ ಪ್ರಿಯಾಂಕಾಗೆ ಹೆಲ್ಪ್ ಮಾಡೋರು ಇವರೇ.!

By: ಸುನೀಲ್
Subscribe to Filmibeat Kannada

ಹಾರರ್ ಮತ್ತು ಥ್ರಿಲ್ಲರ್‌ ಸಿನಿಮಾಗಳು ಹಾಲಿವುಡ್‌ನಲ್ಲಿ ಮಾತ್ರ ಅಲ್ಲ, ಸ್ಯಾಂಡಲ್ ‌ವುಡ್‌ ನಲ್ಲೂ ಹೆಚ್ಚಾಗುತ್ತಿದೆ. ಅಂದಹಾಗೆ ಹಾರರ್ ಮತ್ತು ಥ್ರಿಲ್ಲರ್‌ ಸಿನಿಮಾಗಳ ಪಟ್ಟಿಗೆ ಈಗ ಹೊಸದಾಗಿ ಸೇರ್ಪಡೆ ಆಗಿರುವುದು 'ಮಮ್ಮಿ...save me'.

22 ವರ್ಷದ ಲೋಹಿತ್ ಕಥೆ-ಚಿತ್ರಕಥೆ ಬರೆದು, ನಿರ್ದೇಶನ ಮಾಡಿರುವ 'ಮಮ್ಮಿ...save me' ಶೀಘ್ರದಲ್ಲಿ ತೆರೆ ಮೇಲೆ ಬರುತ್ತಿದೆ. ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಸತ್ಯ ಘಟನೆ ಆಧಾರಿತ ಎಂದು ಯುವ ನಿರ್ದೇಶಕ ಟ್ರೈಲರ್‌ನಲ್ಲೇ ಹೇಳಿದ್ದಾರೆ.

'ಮಮ್ಮಿ...save me' ಸಿನಿಮಾದಲ್ಲಿ ಪ್ರಿಯಾಂಕ ರವರನ್ನು ಹೊರತುಪಡಿಸಿದರೇ 7-8 ಪಾತ್ರಧಾರಿಗಳು ಮಾತ್ರ ಕಾಣಿಸಿಕೊಳ್ಳುತ್ತಾರಂತೆ. ಅದರಲ್ಲಿ, ಪ್ರಿಯಾಂಕ ಮತ್ತು ಅವರ ಮಗಳನ್ನು ದೆವ್ವದಿಂದ ಪಾರುಮಾಡುವ, ಕಷ್ಟದಲ್ಲಿ ಹೆಚ್ಚಾಗಿ ಸಹಾಯ ಮಾಡುವ ಪ್ರಧಾನ ಪಾತ್ರದಲ್ಲಿ ನಟ ಸಂದೀಪ್ ಕಾಣಿಸಿಕೊಂಡಿದ್ದಾರೆ. ['ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ]

sandeep-plays-prominent-role-in-priyanka-upendra-starrer-mummy-save-me

ಈ ಹಿಂದೆ 'ಬಾಯ್‌ಫ್ರೆಂಡ್‌', 'ಅಂಬಾರಿ', 'ಸೈನೆಡ್', 'ರಾಜಧಾನಿ', 'ಉಗ್ರಂ', 'ಯಾರೇ ಕೂಗಾಡಲಿ' ಸಿನಿಮಾಗಳಲ್ಲಿ ನಟಿಸಿದ್ದ ಸಂದೀಪ್‌ ರವರು 'ಮಮ್ಮಿ...save me' ಚಿತ್ರದಲ್ಲಿ ಪಾಸಿಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಪತಿಯ ಸ್ನೇಹಿತನಾಗಿ ಸಂದೀಪ್ ನಟಿಸಿದ್ದಾರೆ.

ಚಿಕ್ಕವಯಸ್ಸಿನಿಂದಲೇ ಸಿನಿಮಾ ಮಾಡುವ ಕನಸು ಹೊತ್ತಿದ್ದ ಸಂದೀಪ್‌, 'ನಿನಾಸಂ'ನಲ್ಲಿ ಒಂದು ವರ್ಷ ಟ್ರೈನಿಂಗ್‌ ಮುಗಿಸಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವರು. [ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

sandeep-plays-prominent-role-in-priyanka-upendra-starrer-mummy-save-me

ಯುವ ನಿರ್ದೇಶಕ ಲೋಹಿತ್ ಕತೆ ಹೇಳೋಕೆ ಬಂದಾಗ, ಅವರ ವಯಸ್ಸು ನೋಡಿ, ''ಆಕ್ಷನ್ ಕಟ್‌ ಹೇಗೋ ಹೇಳ್ತಿಯಾ'' ಅಂತ ಕೇಳಿದ್ದ ಸಂದೀಪ್‌, ಒಂದೇ ದಿನಕ್ಕೆ ಕಾನ್‌ಫಿಡೆಂಟ್ ಆಗಿ ಅವರೇ ಮೆಚ್ಚುಗೆ ವ್ಯಕ್ತಪಡಿಸಿದರಂತೆ.

ನಾಯಕಿ ಪ್ರಧಾನ ಚಿತ್ರವಾಗಿದ್ದರೂ, 'ಮಮ್ಮಿ...save me' ಚಿತ್ರದಲ್ಲಿ ರೆಗ್ಯುಲರ್‌ ಪಾತ್ರಕ್ಕಿಂತ ವಿಭಿನ್ನ ಪಾತ್ರದಲ್ಲಿ ಸಂದೀಪ್‌ ರವರೇ ಪ್ರಮುಖವಾಗಿ ಮಿಂಚಲಿದ್ದಾರಂತೆ.

ಹಾರರ್ ಸಿನಿಮಾ ಮಾಡುವವರಿಗೆ ವಿಚಿತ್ರ ಅನುಭವ ಕಾಮನ್‌ ಆದ್ರೂ ಸಂದೀಪ್‌ಗಂತೂ ಯಾವುದೇ ದೆವ್ವ ಕಾಟ ಕೊಟ್ಟಿಲ್ಲ ಅಂತಾರೆ.

'ಮಮ್ಮಿ...save me' ಚಿತ್ರದಲ್ಲಿ ದೆವ್ವವೇ ಒಂದು ಮುಖ್ಯ ಪಾತ್ರವಾಗಿದ್ದು, ದೆವ್ವದ ಗ್ರಾಫಿಕ್ಸ್ ಗಾಗಿ ಸುಮಾರು 30 ಲಕ್ಷ ವೆಚ್ಚ ಮಾಡಲಾಗಿದೆ. ಯಾವುದೇ ಹಾಲಿವುಡ್‌ ಹಾರರ್ ಸಿನಿಮಾಗಳಿಗಿಂತ 'ಮಮ್ಮಿ...save me' ಕಡಿಮೆಯೇನಿಲ್ಲ ಎನ್ನುತ್ತಾರೆ ಸಂದೀಪ್‌.

English summary
Kannada Actor Sandeep has played a prominent role in Kannada Actress Priyanka Upendra starrer Kannada Movie 'Mummy Save Me', Directed by Lohith.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada