»   » ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳಿಂದ ಕಾಟ: ಗುಡುಗಿದ ನಟಿ ಸಂಗೀತಾ ಭಟ್

ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳಿಂದ ಕಾಟ: ಗುಡುಗಿದ ನಟಿ ಸಂಗೀತಾ ಭಟ್

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣಗಳು ದಿನದಿಂದ ದಿನಕ್ಕೆ ತುಂಬಾ ಪವರ್ ಫುಲ್ ಆಗುತ್ತಿರಬಹುದು. ಆದ್ರೆ, ಅದರಿಂದ ಸೃಷ್ಟಿ ಅಗುತ್ತಿರುವ ಅವಾಂತರಗಳು ಒಂದೆರಡಲ್ಲ. ಅದರಲ್ಲೂ, ಅಶ್ಲೀಲ ಚಿತ್ರಗಳ ಮೂಲಕ ಹೆಣ್ಮಕ್ಕಳಿಗೆ ಕಿಡಿಗೇಡಿಗಳು ಕೊಡುತ್ತಿರುವ ಕಿರುಕುಳಕ್ಕೆ ಕಡಿವಾಣ ಬೀಳುತ್ತಿಲ್ಲ. ಇದರಿಂದ ಸಿನಿಮಾ ನಟಿಯರು ಕೂಡ ಹೊರತಾಗಿಲ್ಲ.

'ಎರಡನೇ ಸಲ', 'ದಯವಿಟ್ಟು ಗಮನಿಸಿ' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸಂಗೀತಾ ಭಟ್ ಗೆ ಕಿಡಿಗೇಡಿಯೊಬ್ಬ ಫೇಸ್ ಬುಕ್ ನಲ್ಲಿ 'ನಗ್ನ ಚಿತ್ರ ಕಳುಹಿಸು' ಎಂದು ಪೀಡಿಸುತ್ತಿದ್ದಾನಂತೆ. ಈ ಬಗ್ಗೆ ನಟಿ ಸಂಗೀತಾ ಭಟ್ ಫೇಸ್ ಬುಕ್ ನಲ್ಲಿ ಗುಡುಗಿದ್ದಾರೆ. ಮುಂದೆ ಓದಿರಿ...

ಸಂಗೀತ ಭಟ್ ಗೆ ಬರುತ್ತಿವೆ ಅಸಭ್ಯ ಮೆಸೇಜ್ ಗಳು

'Preethidsz' ಎಂಬ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ''ನಗ್ನ ಚಿತ್ರ ಹಾಗೂ ಬಿಕಿನಿ ಧರಿಸಿರುವ ಫೋಟೋ ಕಳುಹಿಸು'' ಎಂದು ಪ್ರತಿ ನಿತ್ಯ ನಟಿ ಸಂಗೀತಾ ಭಟ್ ರವರಿಗೆ ಅಸಭ್ಯ, ಅಶ್ಲೀಲ ಮೆಸೇಜ್ ಗಳು ಬರ್ತಿದ್ಯಂತೆ.

ಫೇಸ್ ಬುಕ್ ನಲ್ಲಿ ಕೋಪಗೊಂಡ ಸಂಗೀತಾ ಭಟ್

''ನಟಿಯರು ****, ನಿನ್ನ ಬಿಕಿನಿ ಫೋಟೋಗಳು, ನಗ್ನ ಚಿತ್ರಗಳನ್ನು ನನಗೆ ಕಳುಹಿಸು' ಎಂದು ನನಗೆ Preethidsz ಎಂಬ ಅಕೌಂಟ್ ನಿಂದ ಮೆಸೇಜ್ ಗಳು ಬರುತ್ತಿವೆ. ಈ ವ್ಯಕ್ತಿಯನ್ನು ನಾನು ಬ್ಲಾಕ್ ಮಾಡಿದ್ದೇನೆ. ಈ ಬಗ್ಗೆ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಿರ್ವಾಹಕರಿಗೆ ದೂರು ಸಲ್ಲಿಸಿದ್ದೇನೆ'' ಎಂದು ಫೇಸ್ ಬುಕ್ ನಲ್ಲಿ ನಟಿ ಸಂಗೀತಾ ಭಟ್ ಬರೆದುಕೊಂಡಿದ್ದಾರೆ.

ಅದು ಹುಡುಗಿಯೋ.? ಹುಡುಗನೋ.?

'Preethidsz' ಎಂಬ ಹೆಸರಿರುವ ಅಕೌಂಟ್ ನಲ್ಲಿ ಹುಡುಗಿಯೊಬ್ಬಳ ಪ್ರೊಫೈಲ್ ಫೋಟೋ ಇದೆ. ''ಒಂದು ಹುಡುಗಿ ಇನ್ನೊಂದು ಹುಡುಗಿಗೆ ಇಂತಹ ಮೆಸೇಜ್ ಗಳನ್ನು ಕಳುಹಿಸಲು ಹೇಗೆ ಸಾಧ್ಯ.?'' ಎಂಬ ಅನುಮಾನ ಕೂಡ ವ್ಯಕ್ತಪಡಿಸುತ್ತಾರೆ ನಟಿ ಸಂಗೀತಾ ಭಟ್.

ಅದು ಫೇಕ್ ಅಕೌಂಟ್ ಇರಬಹುದಾ.?

''ಈ ಅಕೌಂಟ್ ರಿಯಲ್ಲೋ ಅಥವಾ ಫೇಕೋ ಎಂಬುದು ನನಗೆ ಗೊತ್ತಿಲ್ಲ. ಆದ್ರೆ, ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಬೇಕು. ನಟಿಯರ ಜೊತೆ ಈ ರೀತಿ ವರ್ತಿಸುವುದು ಸರಿ ಅಲ್ಲ. ನಾವು ಕೂಡ ಮನುಷ್ಯರೇ'' ಎಂದು ಸಂಗೀತಾ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.

English summary
Kannada Actress Sangeetha Bhat gets annoyed with Unknown person who is asking her to send Naked pics in Facebook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada