twitter
    For Quick Alerts
    ALLOW NOTIFICATIONS  
    For Daily Alerts

    ಜನವರಿ 26ಕ್ಕೆ 'ಸಂಗೀತ ಸಂತೆ'ಯ ಮೊದಲ ಸಂಚಿಕೆ 'ಪ್ರೇಮೋತ್ಸವ'

    |

    ಹಳೆಯ ಮತ್ತು ಹೊಸ ಚಿತ್ರಗೀತೆಗಳನ್ನು ಅಂದಿನ ರೇಡಿಯೋ ಫ್ಲೇವರ್ ನಲ್ಲಿ ಕೇಳೋ ಅವಕಾಶ ಸಿಕ್ಕರೆ ಹೇಗಿರುತ್ತೆ? ಅದರಲ್ಲೂ.. ನಿಮ್ಮ ಮೆಚ್ಚಿನ ಆ ಹಾಡುಗಳನ್ನು, ಅದನ್ನು ಬರೆದ ಸಾಹಿತಿಯೊಂದಿಗೋ.. ಸಂಗೀತ ನೀಡಿದ ಸಂಗೀತ ನಿರ್ದೇಶಕರ ಜೊತೆಗೋ...ಮೂಲಗೀತೆಯನ್ನು ಹಾಡಿದ ಗಾಯಕರೊಂದಿಗೋ ಅಥವಾ ಆ ಗೀತೆಗೆ ನಟಿಸಿದನಾಯಕ, ನಾಯಕಿಯರೊಂದಿಗೋ ಕುಳಿತು ಕೇಳೋ ಅನುಭವ ಹೇಗಿದ್ದೀತು? ಆ ಕಲ್ಪನೆಯೇ ಅದ್ಭುತ ಅಲ್ವಾ? ಹೌದು... ಈ ಕಲ್ಪನೆ ಮತ್ತು ಕನಸನ್ನು ಸಾಕಾರಗೊಳಿಸಲೆಂದೇ ಸಿದ್ಧವಾಗಿದೆ ಸಂಗೀತ ಸಂತೆ.

    ಸಂಗೀತಾಭಿಮಾನಿಗಳು ಇಷ್ಟಪಟ್ಟಿರುವ ಚಿತ್ರಗೀತೆಗಳನ್ನು ಕಲಾಸಾಧಕರ ಜೊತೆಯಲ್ಲೇ ಕುಳಿತು ಕೇಳುವ ಸುಂದರ ಕಲ್ಪನೆಯೇ ಈ ಸಂಗೀತ ಸಂಜೆ. ತಮ್ಮ ಹಾಡುಗಳಿಂದ ನಮ್ಮ ಮನ ತಂಪಾಗಿಸಿದ ಆ ಕಲಾಸಾಧಕರಿಗೂ ಈ ಕಾರ್ಯಕ್ರಮ ಗೌರವಾರ್ಪಣೆ ಹಾಗೂ ಕೇಳುಗರಿಗೂ ಒಂದು ಸಾರ್ಥಕ ಸಂಗೀತ ಸಂಜೆಯಲ್ಲಿ ಮಿಂದ ಭಾವ ಇಡೀ ರಾಜ್ಯಾದ್ಯಂತ ಹಬ್ಬಿಹರಡಲಿದೆ.

    ಪ್ರತಿ ತಿಂಗಳೂ ಒಂದೊಂದು ಊರು, ಒಂದೊಂದು ಕಲಾಸಾಧಕನಿಗೆ ಗೀತನಮನ.. ಸಂಗೀತಾಸಕ್ತರ ಮೆಚ್ಚಿನ ಚಿತ್ರಗೀತೆಗಳ ಚಿತ್ರಮಂಜರಿಯೇ ಈ ಸಂಗೀತ ಸಂತೆ. ಈ ಸಂಗೀತ ಸಂತೆಯ ಮೊದಲ ಸಂಚಿಕೆಯ ಹೆಸರು 'ಪ್ರೇಮೋತ್ಸವ'.

    sangeetha santhe 1st episode premotsava

    ಜನವರಿ 26, ಅದು ಗಣರಾಜ್ಯದಿನ ಮಾತ್ರ ಅಲ್ಲ.. ಮಲ್ಲಿಗೆ ಕವಿ.. ಪ್ರೇಮಕ್ಕೆ ಅನ್ವರ್ಥನಾಮವಾಗಿರೋ ಕೆ.ಎಸ್.ನರಸಿಂಹಸ್ವಾಮಿಗಳ ಜನ್ಮಸ್ಮರಣೆಯ ದಿನವೂ ಹೌದು... ಹಾಗೆಯೇ ಜನವರಿ ತಿಂಗಳು ಅಂದ್ರೆ ಅದು ಪ್ರೇಮಕವಿ ಕೆ.ಕಲ್ಯಾಣ್ ಹುಟ್ಟಿದ ತಿಂಗಳೂ ಹೌದು. ಇವರಿಬ್ಬರ ಜನ್ಮದಿನದ ಬೆನ್ನಲ್ಲೇ ಅಂಬೆಗಾಲಿಟ್ಟು ಬರುತ್ತಿದೆ ಫೆಬ್ರವರಿ ಹದಿನಾಲ್ಕು, ಪ್ರೇಮಿಗಳ ದಿನ. ಪ್ರೇಮೋತ್ಸವ ಆಚರಿಸೋಕೆ ಇದಕ್ಕಿಂತ ಇನ್ಯಾವ ಕಾರಣ ಬೇಕು?

    ಸಭ್ಯ ಪ್ರೇಮಿಗಳ ಪಾಲಿನ ಸ್ವರ್ಗ, ಹಿರಿಯ ಕಿರಿಯರೆಲ್ಲರ ನೆಚ್ಚಿನ ಹಸಿರುತಾಣ ಬೆಂಗಳೂರಿನ ಬಸವನಗುಡಿಯ ಕಹಳೆ ಬಂಡೆಯ ನಡುವೆ ಪ್ರೇಮಗೀತೆಗಳು ತೇಲಿ ಬರಲಿವೆ. ಹೌದು, ಪ್ರೇಮೋತ್ಸವಕ್ಕೆ ಇಲ್ಲೇ ಮುಹೂರ್ತ! ಕೆ ಎಸ್ ನರಸಿಂಹ ಸ್ವಾಮಿಗಳು ಮತ್ತು ಕೆ.ಕಲ್ಯಾಣ್ ಸಾಹಿತ್ಯದ ನಿಮ್ಮ ಮೆಚ್ಚಿನ ಚಿತ್ರಗೀತೆಗಳನ್ನು ಕೇಳೋಕೆ ಜನವರಿ 26ರ ಸಂಜೆ 5.30ಕ್ಕೆ ಬಸವನಗುಡಿಯ ಕಹಳೆ ಬಂಡೆಗೆ ಸಂಗೀತಾಸಕ್ತರನ್ನು ಆಹ್ವಾನಿಸುತ್ತೇವೆ. ಚಿತ್ರಗೀತೆಗಳ ನಡುವೆ, ಹತ್ತು ಹಲವು ಸ್ವಾರಸ್ಯಕರ ಮಾತುಗಳು, ಕಲ್ಯಾಣ್ ಅವರೊಂದಿಗೆ ಸಂವಾದ, ವಿಶಿಷ್ಟ ಪ್ರೇಮಿಗಳಿಗೊಂದು ಪ್ರೇಮನಮನ .. ಎಲ್ಲವೂ ಇರುತ್ತದೆ..

    ಅಂದ್ಹಾಗೆ, ಇದು ವೀರಲೋಕ ಪ್ರತಿಷ್ಠಾನ ಹಾಗೂ ಸತ್ವಃ ಮೀಡಿಯಾ ಜಂಟಿ ಸಾರಥ್ಯದಲ್ಲಿ ಪ್ರಾರಂಭವಾಗುತ್ತಿರುವ ಮಹತ್ವಾಕಾಂಕ್ಷೆಯ ಸಂಗೀತ ಅಭಿಯಾನ. ನಾಡು ಕಂಡ ಶ್ರೇಷ್ಠ ಸಂಗೀತ ನಿರ್ದೇಶಕರು, ಗೀತಸಾಹಿತಿಗಳು, ಗಾಯಕ/ಗಾಯಕಿಯರು ಹಾಗೂ ಇನ್ನಿತರ ಕಲಾಸಾಧಕರಿಗೆ ಅವರ ಗೀತೆಗಳ ಮೂಲಕವೇ ಗೌರವ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಇದು. ಇದರ ಜೊತೆಗೇ ಈ ದಿಗ್ಗಜರ ಗೀತೆಗಳನ್ನು ನಾಡಿನ ಮೂಲೆ ಮೂಲೆಗೂ ಹೊಸತೊಂದು ರೀತಿಯಲ್ಲಿ ತಲುಪಿಸುವ ಉದ್ದೇಶ ಸಂಗೀತ ಸಂತೆ ಕಾರ್ಯಕ್ರಮದ್ದು.

    ಮೂಲಗೀತೆಗಳ ಘನತೆಗೆ ಕುಂದು ಬಾರದಂತೆ ಯುವ ಗಾಯಕ ಗಾಯಕಿಯರು ವೇದಿಕೆಯಲ್ಲಿ ಗಾನಸುಧೆ ಬೀರಿದರೆ, ಆ ಹಾಡಿನ ಹಿಂದಿನ ಸ್ವಾರಸ್ಯಕರ ಘಟನೆಗಳನ್ನು, ಹಾಡು ಹುಟ್ಟಿದ ಸಮಯವನ್ನು ನಿರೂಪಕರು ಬಿಚ್ಚಿಡುತ್ತಾರೆ. ಸಾಧಕರ ಸಮ್ಮುಖದಲ್ಲೇ ಅವರ ಗೀತೆಗಳನ್ನು ಪ್ರೇಕ್ಷಕರು ಕೇಳಲು ಒಂದು ಸದವಕಾಶ ಇದಾಗಿರುತ್ತದೆ. ಚಿತ್ರಗೀತೆಗಳೂ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯ ಪ್ರತಿನಿಧಿಗಳೆಂದು ಭಾವಿಸಿರುವ ನಾವು ಸದಭಿರುಚಿಯ ಹಾಗೂ ಜನಪ್ರಿಯ ಗೀತೆಗಳನ್ನು ಕರ್ತೃಗಳಿಂದ ಪ್ರೇಕ್ಷಕರಿಗೆ ತಲುಪಿಸುವ ಕೊಂಡಿಯಾಗಿ ಕಾರ್ಯ ನಿರ್ವಹಿಸಲಾಗುತ್ತೆ.

    English summary
    Sangeetha santhe 1st episode premotsava will stars from january 26th at basavanagudi bull temple.
    Wednesday, January 23, 2019, 13:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X