»   » ಸಂಗೊಳ್ಳಿ ರಾಯಣ್ಣ ಬಿಡುಗಡೆ ದಿನ ದರ್ಶನ್ ಎಲ್ಲಿದ್ದರು?

ಸಂಗೊಳ್ಳಿ ರಾಯಣ್ಣ ಬಿಡುಗಡೆ ದಿನ ದರ್ಶನ್ ಎಲ್ಲಿದ್ದರು?

Posted By:
Subscribe to Filmibeat Kannada
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ಈಗ ಅಮೋಘ ಯಶಸ್ಸು ಪಡೆದು ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿರುವುದು ಎಲ್ಲರಿಗೂ ಗೊತ್ತು. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಭಾರಿ ಎನ್ನಬಹುದಾದ ರು. 15 ಕೋಟಿಗು ಅಧಿಕ ಗಳಿಕೆ ಸಂಗ್ರಹಿಸಿರುವ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸಫಲವಾಗಿದೆ. ನಾಲ್ಕೇ ದಿಗಳಲ್ಲಿ ರು. 15 ಕೋಟಿಗೂ ಅಧಿಕ ಗಳಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಅದಿರಲಿ, ಆ ಚಿತ್ರ ಬಿಡುಗಡೆಯಾದ ದಿನ ಚಿತ್ರದ ನಾಯಕ ನಟ, 'ರಾಯಣ್ಣ' ಪಾತ್ರಧಾರಿ ದರ್ಶನ್ ಎಲ್ಲಿದ್ದರು ಗೊತ್ತೇ? ಅವರ ತೋಟದ ಮನೆಯಲ್ಲಿದ್ದರು. ಮೈಸೂರಿನ ಅವರ ಫಾರ್ಮ್ ಹೌಸ್ ನಲ್ಲಿ ಖುಷಿಯಾಗಿ ಓಡಾಡಿಕೊಂಡಿದ್ದ ದರ್ಶನ್ ಅವರಿಗೆ ಚಿತ್ರ ನೋಡಿದ ಅಭಿಮಾನಿಗಳು ಹಾಗೂ ಪರಿಚಿತರು ಸತತವಾಗಿ ಫೋನ್ ಕಾಲ್ ಮಾಡುತ್ತಿದ್ದರು. 125ಕ್ಕೂ ಹೆಚ್ಚು ಫೋನ್ ಕಾಲಗಳು ಹಾಗೂ ಅಸಂಖ್ಯಾತ ಎಸ್ ಎಂಎಸ್ ಗಳು ಅಂದು ದರ್ಶನ್ ಮೊಬೈಲ್ ತಲುಪಿದ್ದವು.

ತಮ್ಮ ಮೊಬೈಲ್ ಅನ್ನು ಇಡೀ ದಿನವೂ ಚಾರ್ಜ್ ಹಾಕಿಯೇ ಇಟ್ಟಿದ್ದರಂತೆ ದರ್ಶನ್. ಕಾರಣ, ಅಂದು ಮೊಬೈಲ್ ಮೂಲಕ ಬಂದ ಅಸಂಖ್ಯಾತ ಪ್ರತಿಕ್ರಿಯೆಗಳಿಗೆ ದರ್ಶನ್, ಸ್ವತಃ ಉತ್ತರ ನೀಡಿದರು. ಸಾಕಷ್ಟು ಜನರ ಜೊತೆ ಫೋನಿನಲ್ಲಿ ಮಾತನಾಡಿದರು. ಎಸ್ಎಂಎಸ್ ಗಳಿಗೆ ಉತ್ತರ ನೀಡಿದರು. ಎಲ್ಲರಿಂದಲೂ ಬಂದ ಪ್ರತಿಕ್ರಿಯೆ ಮಾತ್ರ ಒಂದೇ ಆಗಿತ್ತಂತೆ. ಅದು "ಸಂಗೊಳ್ಳಿ ರಾಯಣ್ಣ' ಚಿತ್ರ ಚೆನ್ನಾಗಿದೆ. ಜೊತೆಗೆ ನಿಮ್ಮ ಅಭಿನಯವೂ ಸೂಪರ್..."

ತಮ್ಮ ಮೊಬೈಲಿಗೆ ಹರಿದುಬಂದ ಸಂದೇಶಗಳು ಹಾಗೂ ಕಾಲ್ ಗಳನ್ನು ಸ್ವತಃ ಅಟೆಂಡ್ ಮಾಡಿದ ದರ್ಶನ್, ಈ ಬಗ್ಗೆ ನೇರವಾಗಿ ತಮಗೇ ತಲುಪಿರುವ ಮಾಹಿತಿಯಿಂದ ಖುಷಿಯಾದರಂತೆ. ಸಾಕಷ್ಟು ಕಾಲ್ ಗಳು ಹಾಗೂ ಸಂದೇಶಗಳ ಮೂಲಕ ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯ ಬಂದಿದ್ದರಿಂದ ಸಹಜವಾಗಿಯೇ ಮೊದಲೇ ಇದ್ದ ಆತ್ಮವಿಶ್ವಾಸ ಇನ್ನೂ ಹೆಚ್ಚಾಗಿದ್ದನ್ನು ದರ್ಶನ್ ಹೇಳಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
The day, Sangolli Rayanna movie released (01 November 2012), the Hero of the movie and Challenging Star Darshan was at his Farm House to enjoy the day. He told that many fans and familiar persons called him and shared the good opinion for the movie. 
 
Please Wait while comments are loading...