Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕರ್ನಾಟಕದ ಹೊಸ ಕ್ರಶ್ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಾಯಕಿಗೆ ಲಕ್ಕೋ ಲಕ್ಕು
ಒಂದು ಸಿನಿಮಾ ಹಿಟ್ ಆದ್ರೆ ಆ ಚಿತ್ರದ ನಾಯಕ, ನಾಯಕಿ ಮತ್ತು ನಿರ್ದೇಶಕರಿಗೆ ಅದೃಷ್ಟದ ಬಾಗಿಲು ತೆಗೆಯುತ್ತೆ. ಅದರಲ್ಲೂ ಕಮರ್ಷಿಯಲ್ ಆಗಿ ಸಕ್ಸಸ್ ಆಯ್ತು ಅಂದ್ರೆ ಮುಗಿತು, ಅವರ ಹಿಂದೆ ಗಾಂಧಿನಗರ ಓಡೋಡಿ ಬರುತ್ತೆ.
ಕೆಲವೊಮ್ಮೆ ಸಿನಿಮಾದ ದೊಡ್ಡ ಹಿಟ್ ಆದ್ರೂ ಆ ಹೀರೋ, ಹೀರೋಯಿನ್ ಗೆ ಯಾವ ಅವಕಾಶಗಳು ಸಿಗಲ್ಲ. ಈ ವಿಷ್ಯದಲ್ಲಿ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾದ ನಾಯಕಿಗೆ ಬಂಪರ್ ಲಾಟರಿ ಹೊಡೆದಿದೆ. 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಅದ್ಯಾಗೇ ಖ್ಯಾತಿ ಪಡೆದುಕೊಂಡರೋ, ಅದೇ ರೀತಿ ಈಗ ಕೆಮಿಸ್ಟ್ರಿ ಆಫ್ ಕರಿಯಪ್ಪ ನಾಯಕಿಯೂ ಸದ್ದು ಮಾಡ್ತಿದ್ದಾರೆ.
'ಕೆಮಿಸ್ಟ್ರಿ' ಕರಿಯಪ್ಪನ ಆಟ-ಪಾಠ ನೀವು ನೋಡದಿದ್ರೆ ವೇಸ್ಟಪ್ಪಾ.!
ಮೊದಲ ನೋಟದಲ್ಲೇ ಸ್ಯಾಂಡಲ್ ವುಡ್ ಅಭಿಮಾನಿಗಳ ಮನಗೆದ್ದು ಸಂಜನಾ ಆನಂದ್, ಈಗ ಚಂದವನದ ಹೊಸ ಕ್ರಶ್ ಎಂದರೂ ತಪ್ಪಾಗಲಾರದು. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಕ್ಲಾಸಿಕ್ ಲುಕ್ ನೋಡಿ ಫಿದಾ ಆದ ಗಾಂಧಿನಗರ ಈಗ ಸಂಜನಾ ಕೈಯಲ್ಲಿ ದೊಡ್ಡ ಪ್ರಾಜೆಕ್ಟ್ ಗಳನ್ನ ಇಡುತ್ತಿದ್ದಾರೆ. ಸದ್ಯಕ್ಕೆ ನಾಲ್ಕೈದು ಸಿನಿಮಾಗಳಿಗೆ ನಾಯಕಿಯಾಗುವ ಅವಕಾಶ ಪಡೆದುಕೊಂಡಿದ್ದಾರೆ ಈ ಚೆಲುವೆ. ಅಷ್ಟಕ್ಕೂ ಆ ಚಿತ್ರಗಳು ಯಾವುದು? ಮುಂದೆ ಓದಿ....

ಅಜಯ್ ರಾವ್ ಗೆ ನಾಯಕಿ
ಚಂಚನ್ ಆಚಾರ್, ತಬಲ ನಾಣಿ ಅಭಿನಯದ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಸಂಜನಾ ಆನಂದ್ ಗೆ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿದೆ. ಮೊದಲ ಸಿನಿಮಾ ಹಿಟ್ ಆದ್ಮೇಲೆ ಹೊಸ ಹೊಸ ಪ್ರಾಜೆಕ್ಟ್ ಗಳು ಒಲಿದು ಬರ್ತಿದೆ. ಅಜಯ್ ರಾವ್ ಅಭಿನಯದ ಇನ್ನು ಹೆಸರಿಡದ ಚಿತ್ರಕ್ಕೆ ಸಂಜನಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ಸಲಗ ಜೊತೆಯಾದ ಸಂಜನಾ
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಚೊಚ್ಚಲ ಬಹುನಿರೀಕ್ಷೆಯ ಚಿತ್ರ ಸಲಗ ಇದೇ ವಾರ ಆರಂಭವಾಗುತ್ತಿದೆ. ಪ್ರಿ-ಪ್ರೊಡಕ್ಷನ್ ಹಂತದಲ್ಲೇ ಭಾರಿ ಸದ್ದು ಮಾಡುತ್ತಿದ್ದ ಈ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಕಾಡ್ತಿತ್ತು. ಇದೀಗ ಸಲಗಕ್ಕೆ ನಾಯಕಿಯಾಗಿ ಸಂಜನಾ ಕಾಣಿಸಿಕೊಳ್ಳುತ್ತಿದ್ದಾರೆ.
'ಸಲಗ'ನ ಜೊತೆಯಾದ ನಟಿ ಸಂಜನಾ ಆನಂದ್

ಕ್ಷತ್ರಿಯಗೆ ಜೋಡಿ ಈ ಸಂಜನಾ
ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕ್ಷತ್ರಿಯ ಸಿನಿಮಾಗೆ ಕೂಡ ಸಂಜನಾ ನಾಯಕಿಯಾಗಲಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾ ಸೆಟ್ಟೇರಿತ್ತು. ಅನಿಲ್ ಮಂಡ್ಯ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.
'ಕ್ಷತ್ರಿಯ' ಚಿರಂಜೀವಿ ಸರ್ಜಾಗೆ ಸಹೋದರ ಧ್ರುವ ಸರ್ಜಾ ಸಾಥ್

ಕುಷ್ಕದಲ್ಲಿ ನಟನೆ
ವಿಕ್ರಮ್ ಯೋಗಾನಂದ್ ಆಕ್ಷನ್ ಕಟ್ ಹೇಳುತ್ತಿರುವ ಕುಷ್ಕ ಸಿನಿಮಾದಲ್ಲೂ ಸಂಜನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಗುರುಪ್ರಸಾದ್ ಕಾಣಿಸಿಕೊಂಡಿದ್ದಾರೆ.

ಹನಿಮೂನ್ ಸೀರಿಸ್
ಈ ನಡುವೆ ಶಿವರಾಜ್ ಕುಮಾರ್ ಮಗಳು ನಿವೇದಿತಾ ನಿರ್ಮಾಣದಲ್ಲಿ ಮೂಡಿಬರಲಿರುವ ವೆಬ್ ಸೀರಿಸ್ 'ಹನಿಮೂನ್'ನಲ್ಲೂ ಸಂಜನಾ ನಟಿಸುತ್ತಿದ್ದಾರೆ. ಸಿನಿಮಾಗಳ ಜೊತೆ ವೆಬ್ ಸೀರಿಸ್ ಮಾಡುತ್ತಿರುವುದು ಕೂಡ ಗಮನ ಸೆಳೆಯುತ್ತಿದೆ.