For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮೂರು ದಿನ ಸಿಸಿಬಿ ವಶಕ್ಕೆ ರಾಗಿಣಿ-ಸಂಜನಾ

  |

  ಮಾದಕ ವಸ್ತು ಮಾರಾಟಗಾರರೊಂದಿಗೆ ನಂಟು, ಮಾದಕ ವಸ್ತು ಸೇವಿಸಲು ಉತ್ತೇಜನೆ ಆರೋಪದ ಮೇಲೆ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ರಾಗಿಣಿ ಹಾಗೂ ಸಂಜನಾರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ.

  ಸೆಪ್ಟೆಂಬರ್ 4 ರಂದು ಬಂಧನಕ್ಕೆ ಒಳಗಾಗಿದ್ದ ರಾಗಿಣಿಯನ್ನು ಐದು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿತ್ತು. ಇಂದಿಗೆ ಐದು ದಿನಗಳ ಅವಧಿ ಮುಗಿದ ಕಾರಣ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನಟಿ ಸಂಜನಾರನ್ನು ಸೆಪ್ಟೆಂಬರ್ 8 ರಂದು ಬಂಧಿಸಿದ್ದರು.

  ಸಂಜನಾ ಜೊತೆ ಶಾಸಕ ಜಮೀರ್ ಶ್ರೀಲಂಕಾ ಪ್ರವಾಸ ಆರೋಪ: ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್

  ವಿಚಾರಣೆ ಪೂರ್ಣಗೊಳ್ಳದ ಕಾರಣ ಸಿಸಿಬಿ ಕಸ್ಟಡಿ ಅವಧಿಯನ್ನು ಮುಂದುವರೆಸುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಅಂತೆಯೇ ನ್ಯಾಯಾಲಯವು ಇನ್ನೂ ಮೂರು ದಿನಗಳ ಕಾಲ ರಾಗಿಣಿ ಹಾಗೂ ಸಂಜನಾರನ್ನು ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

  ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ

  ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ

  ಮೂರು ದಿನಗಳ ಕಾಲ ಸಿಸಿಬಿ ವಶದಲ್ಲಿರುವ ರಾಗಿಣಿ, ಸಿಸಿಬಿಯಿಂದ ಇನ್ನಷ್ಟು ವಿಚಾರಣೆಗೆ ಒಳಪಡಲಿದ್ದಾರೆ. ಮೂರು ದಿನಗಳ ಸಿಸಿಬಿ ಕಸ್ಟಡಿ ಅವಧಿ ಮುಗಿದ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸುವ ಸಾಧ್ಯತೆ ಇದೆ.

  ಕೂದಲು, ರಕ್ತದ ಮಾದರಿ ತೆಗೆದುಕೊಳ್ಳಲಾಗಿದೆ

  ಕೂದಲು, ರಕ್ತದ ಮಾದರಿ ತೆಗೆದುಕೊಳ್ಳಲಾಗಿದೆ

  ಇಂದು ನಟಿ ರಾಗಿಣಿ ಹಾಗೂ ನಟಿ ಸಂಜನಾ ಅವರ ಕೂದಲೂ, ರಕ್ತದ ಮಾದರಿಗಳನ್ನು ಪರೀಕ್ಷೆಗೆಂದು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇಬ್ಬರೂ ನಟಿಯರು ಮಾದಕ ವಸ್ತು ಸೇವನೆ ಮಾಡಿದ್ದರೇ ಇಲ್ಲವೆ ಎಂಬುದು ಪರೀಕ್ಷಾ ವರದಿಗಳಿಂದ ಗೊತ್ತಾಗಲಿದೆ.

  ಸಂಜನಾ ಗೆ ಮದುವೆ ಆಗಿದ್ಯಾ? ಯಾರಿದು ವೈದ್ಯ ಅಜೀಜ್?

  ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಟಿಯರು

  ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಟಿಯರು

  ಸಿಸಿಬಿ ವಶದಲ್ಲಿರುವ ಸಂಜನಾ ಹಾಗೂ ರಾಗಿಣಿ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಂದೇ ಕೊಠಡಿಯಲ್ಲಿ ಇರಿಸಲಾಗಿದೆ. ಇಬ್ಬರೂ ತಮ್ಮ ಹಳೆಯ ವೈಷಮ್ಯ ಮರೆತು ಆತ್ಮೀಯತೆಯಿಂದ ಇದ್ದಾರೆ ಎನ್ನಲಾಗುತ್ತಿದೆ.

  'ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲ, ನನ್ನ ಬಕ್ರಾ ಮಾಡಿದ್ದೀರಾ'- ಸಂಜನಾ ಗಲ್ರಾನಿ

  ಅಯ್ಯೋ ಪಾಪ, ಕೋರ್ಟ್ ಮುಂದೆ ನಡೆಯಲಿಲ್ಲ Ragini ಆಟ..! | oneindia Kannada
  ಹಲವರ ಬಂಧನ ಆಗಿದೆ

  ಹಲವರ ಬಂಧನ ಆಗಿದೆ

  ರಾಗಿಣಿ-ಸಂಜನಾ ಸೇರಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ರಾಗಿಣಿ ಆಪ್ತ ರವಿಶಂಕರ್, ಸಂಜನಾ ಆಪ್ತ ರಾಹುಲ್ ಸಹ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಿದೇಶಿ ಡ್ರಗ್ ಪೆಡ್ಲರ್ ಸೈಮನ್ ಎಂಬಾತನನ್ನೂ ಸಹ ಬಂಧಿಸಲಾಗಿದೆ.

  English summary
  Actress Sanjana Galrani and Ragini Dwivedi's CCB custody extended for three more days. Both were arrested in Drug link case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X