For Quick Alerts
  ALLOW NOTIFICATIONS  
  For Daily Alerts

  ಗೆಳೆಯನ ವಿರುದ್ಧ ದೂರು ದಾಖಲಿಸಿದ ಸಂಜನಾ ಗಲ್ರಾನಿ

  |

  ತಮ್ಮ ಅಣ್ಣ ಎಂದು ಪ್ರೀತಿಯಿಂದ ಹೇಳಿಕೊಂಡಿದ್ದವರ ವಿರುದ್ಧವೇ ನಟಿ ಸಂಜನಾ ಗಲ್ರಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಸಂಜನಾ ಗಲ್ರಾನಿಯ ಆತ್ಮಿಯ ಸ್ನೇಹಿತನಾಗಿದ್ದ ರಾಹುಲ್ ಥೋನ್ಸೆ ವಿರುದ್ಧ ಸಂಜನಾ ಗಲ್ರಾನಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಹೂಡಿಕೆಗೆಂದು ಹಣ ಪಡೆದುಕೊಂಡ ರಾಹುಲ್ ಥೋನ್ಸೆ ಹಣವನ್ನು ಮರಳಿಸಿಲ್ಲ ಎಂದು ದೂರಿದ್ದಾರೆ.

  ರಾಹುಲ್ ಥೋನ್ಸೆ ಮಾತ್ರವೇ ಅಲ್ಲದೆ ರಾಮಕೃಷ್ಣ ಹಾಗೂ ರಾಗೇಶ್ವರಿ ಎಂಬುವರ ವಿರುದ್ಧವೂ ಸಂಜನಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ತನಿಖೆ ನಡೆಸುವಂತೆ ಇಂದಿರಾ ನಗರ ಪೊಲೀಸರಿಗೆ ಸೂಚನೆ ನೀಡಿದೆ.

  ತಾವು ಗೋವಾ ಹಾಗೂ ಕೊಲಂಬೊಗಳಲ್ಲಿ ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್ ಎಂದು ಹೇಳಿಕೊಂಡಿದ್ದ ರಾಹುಲ್ ಥೋನ್ಸೆ ಸಂಜನಾರ ಗೆಳೆತನ ಸಂಪಾದಿಸಿದ್ದ. ಕ್ಯಾಸಿನೋಗಳಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭವಾಗುತ್ತದೆ ಎಂದು ಹೇಳಿ ಸಂಜನಾರಿಂದ ಮೂರು ವರ್ಷಗಳ ಹಿಂದೆ ಹಣ ಪಡೆದಿದ್ದ. ಆ ಸಮಯದಲ್ಲಿ ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ರಾಗೇಶ್ವರಿ ಅವರ ಖಾತೆಗಳಿಗೆ ಸಂಜನಾ ಹಣ ಹಾಕಿದ್ದರು.

  ಹೂಡಿಕೆಯ ಲಾಭಾಂಶ ನೀಡದ ರಾಹುಲ್ ಥೋನ್ಸೆ, ನೀಡಿದ್ದ ಹಣವನ್ನೂ ವಾಪಸ್ ನೀಡುತ್ತಿಲ್ಲ. ನನ್ನ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಹುಲ್ ಥೋನ್ಸೆ ಬಳಸಿಕೊಂಡಿದ್ದಾರೆ. ಆ ಮೂಲಕ ನನ್ನ ಘನತೆಗೆ ಪೆಟ್ಟುಕೊಟ್ಟಿದ್ದಾರೆ ಎಂದು ಸಂಜನಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

  ದೂರು ದಾಖಲಿಸಿಕೊಂಡಿರುವ ಪೊಲೀಸರು, ಮೂವರು ಆರೋಪಿಗಳ ವಿರುದ್ಧ, ಐಪಿಸಿ ಸೆಕ್ಷನ್ 120 ಬಿ, 107, 354, 406, 420, 506ರ ಅಡಿ ಕೇಸು ದಾಖಲಿಸಿದ್ದಾರೆ.

  ಕಳೆದ ವರ್ಷ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗ ರಾಹುಲ್ ಥೋನ್ಸೆ ಸಹ ಬಂಧನಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ರಾಹುಲ್ ಥೋನ್ಸೆ ನನ್ನ ಅಣ್ಣನಿದ್ದಂತೆ ಎಂದು ಸಂಜನಾ ಗಲ್ರಾನಿ ಹೇಳಿದ್ದರು. ಆದರೆ ಈಗ ಅಣ್ಣನ ವಿರುದ್ಧವೇ ವಂಚನೆ ದೂರು ನೀಡಿದ್ದಾರೆ.

  ಕೆಲವು ದಿನಗಳ ಹಿಂದೆ ಸುದ್ದಿಯಲ್ಲಿದ್ದ ಸಂಜನಾ ಗಲ್ರಾನಿ, ಟ್ಯಾಕ್ಸಿ ಡ್ರೈವರ್ ಒಬ್ಬರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಟ್ಯಾಕ್ಸಿ ಡ್ರೈವರ್ ನಿಗದಿತ ಸ್ಥಳಕ್ಕೆ ಕರೆದುಕೊಂಡು ಹೋಗದೆ ಇದ್ದಾಗ 'ಪ್ಯಾನಿಕ್ ಕಾಲ್' ಮಾಡಿ ಪೊಲೀಸರು ಸ್ಥಳಕ್ಕೆ ಬರುವಂತೆ ಮಾಡಿದ್ದರು. ಧಾವಂತದಲ್ಲಿ ಸ್ಥಳಕ್ಕೆ ಬಂದ ಪೊಲೀಸರಿಗೆ ಅಪಹರಣವಾಗಿಲ್ಲ, ನಾವು ಸುರಕ್ಷಿತವಾಗಿದ್ದೇವೆ ಎಂದಿದ್ದರು. ಅದಕ್ಕೂ ಮುನ್ನ ಕಾರಿನ ಏಸಿ ಏರಿಸದೇ ಇರುವುದಕ್ಕೆ ಡ್ರೈವರ್ ಜೊತೆ ಜಗಳವಾಡಿದ್ದರು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಡ್ರೈವರ್ ಸಹ ಸಂಜನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.

  English summary
  Actress Sanjana Galrani gave complaint against her friend Rahul Thonse. She said Rahul took money to invest in Casino business and now not returning the money.
  Wednesday, October 20, 2021, 13:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X