For Quick Alerts
  ALLOW NOTIFICATIONS  
  For Daily Alerts

  ವಂದನಾ ಜೈನ್ ಜೊತೆ ಗಲಾಟೆ ಪ್ರಕರಣ: ಸಂಜನಾ ಗಲ್ರಾನಿ ಸ್ಪಷ್ಟನೆ?

  |

  ನಿರ್ಮಾಪಕಿ ವಂದನಾ ಜೈನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ನಟಿ ಸಂಜನಾ ಗಲ್ರಾನಿ ಸ್ಪಷ್ಟನೆ ನೀಡಿದ್ದಾರೆ. ಯುಬಿ ಸಿಟಿ ಬಳಿಯಿರುವ ಬಾರ್ ಒಂದರಲ್ಲಿ ಡಿಸೆಂಬರ್ 24 ರಂದು ವಂದನಾ ಮತ್ತು ಸಂಜನಾ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.

  ''ಸಂಜನಾ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ'' ಎಂದು ವಂದನಾ ಜೈನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಬಾರ್ ನಲ್ಲಿ ಕುಡಿದು ಗಲಾಟೆ: ನಟಿ ಸಂಜನಾ ವಿರುದ್ಧ ದೂರು ನೀಡಿದ ಬಾಲಿವುಡ್ ನಿರ್ಮಾಪಕಿಬಾರ್ ನಲ್ಲಿ ಕುಡಿದು ಗಲಾಟೆ: ನಟಿ ಸಂಜನಾ ವಿರುದ್ಧ ದೂರು ನೀಡಿದ ಬಾಲಿವುಡ್ ನಿರ್ಮಾಪಕಿ

  ಇದೀಗ, ಈ ಬಗ್ಗೆ ಸಂಜನಾ ಗಲ್ರಾನಿ ಸ್ಪಷ್ಟನೆ ನೀಡಿದ್ದಾರೆ. ''ಯಾವುದೇ ಗಲಾಟೆ ಮಾಡಿಲ್ಲ. ನಾನು ಮತ್ತು ನನ್ನ ಸ್ನೇಹಿತೆ ಕೆಲವು ವಿಚಾರಕ್ಕೆ ವಾಗ್ವಾದ ಮಾಡಿದ್ದು ನಿಜ. ಸ್ನೇಹಿತರು ಅಂದ್ಮೇಲೆ ಸಣ್ಣ ಪುಟ್ಟ ವಿಚಾರಕ್ಕೆ ಮಾತಿಗೆ ಮಾತು ಆಗಿದೆ. ಇದನ್ನು ಇಷ್ಟು ದೊಡ್ಡದಾಗಿ ಬಿಂಬಿಸುವುದು ಬೇಡ. ಸೆಲೆಬ್ರಿಟಿಗಳು ಅಂದ್ಮೇಲೆ ನಮಗೂ ಖಾಸಗಿ ಜೀವನ ಇದೆ. ಇದರಿಂದ ಯಾವ ಪ್ರಚಾರವೂ ನಮಗೆ ಬೇಕಿಲ್ಲ. ನಾನು ನಮ್ಮ ಮನೆಯಲ್ಲಿ ಆರಾಮಾಗಿ ಇದ್ದೇನೆ. ಅವರ ಮನೆಯಲ್ಲಿ ವಂದನಾ ಆರಾಮಗಿ ಇದ್ದಾರೆ'' ಎಂದು ಸ್ಪಷ್ಟ ಪಡಿಸಿದ್ದಾರೆ.

  ಈ ಬಗ್ಗೆ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಈ ಬಗ್ಗೆ ಮಾತನಾಡಿದ್ದು ''ಸಂಜನಾ ನನ್ನ ಜೊತೆ ಗಲಾಟೆ ಮಾಡಿದ್ದಾರೆ ಎಂದು ವಂದನಾ ಜೈನ್ ಅವರು ದೂರು ನೀಡಿದ್ದಾರೆ. ಸದ್ಯಕ್ಕೆ ಎನ್.ಸಿ ದೂರು ದಾಖಲಿಸಿದ್ದೇವೆ. ಕೋರ್ಟ್ ಗೆ ಹಾಜರಾಗಬೇಕು. ತನಿಖೆ ಆದೇಶ ಬಂದ್ರೆ ಸತ್ಯ ಏನು ಎಂಬುದು ಹೊರಗೆ ಬರುತ್ತೆ'' ಎಂದು ತಿಳಿಸಿದ್ದಾರೆ.

  English summary
  Kannada actress Sanjana Galrani has clarified about Vandana Jain Controversy. vandana register complaint against sanjana in cubbon park police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X