»   » ಮಾಧ್ಯಮದ ಮುಂದೆ ಜೈಲಿನ ಅನುಭವ ಬಿಚ್ಚಿಟ್ಟ ಸಂಜಯ್ ದತ್

ಮಾಧ್ಯಮದ ಮುಂದೆ ಜೈಲಿನ ಅನುಭವ ಬಿಚ್ಚಿಟ್ಟ ಸಂಜಯ್ ದತ್

Posted By:
Subscribe to Filmibeat Kannada

ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅವರು ಇಂದು (ಫೆಬ್ರವರಿ 25) ರಿಲೀಸ್ ಆಗಿದ್ದಾರೆ. ಪುಣೆಯ ಯರವಾಡ ಜೈಲಿನಿಂದ ಬೆಳಗ್ಗೆ ಬಿಡುಗಡೆಗೊಂಡಿದ್ದು. ಪತ್ನಿ, ಮಕ್ಕಳು ಮತ್ತು ಕುಟುಂಬಸ್ಥರು ಬರಮಾಡಿಕೊಂಡಿದ್ದಾರೆ.

ಜೈಲಿನಿಂದ ಹೊರಬಂದ ನಟ ಸಂಜಯ್ ದತ್ ನೇರವಾಗಿ ಮುಂಬೈಗೆ ಪ್ರಯಾಣ ಬೆಳೆಸಿ, ತದನಂತರ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಮರೈನ್ ಲೈನ್ಸ್ ನಲ್ಲಿರುವ ತಮ್ಮ ತಾಯಿ ದಿವಂಗತ ನಟಿ ನರ್ಗಿಸ್ ದತ್ ಅವರ ಸಮಾಧಿಗೆ ಅಂತಿಮ ನಮನ ಸಲ್ಲಿಸಿದರು.[ಯೆರವಾಡ ಜೈಲಿನಿಂದ ಸಂಜಯ್ ದತ್ ಬಿಡುಗಡೆ]

ಆನಂತರ ಪತ್ಮಿ ಮಾನ್ಯತಾ ಹಾಗೂ ಮಕ್ಕಳ ಜೊತೆ ತಮ್ಮ ಆತ್ಮೀಯ ಸ್ನೇಹಿತರೊಬ್ಬರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಜೈಲಿನಿಂದ ಬಿಡುಗಡೆ ಆದ ಬಳಿಕ ನಟ ಸಂಜಯ್ ದತ್ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದರು. ನಟ ಸಂಜಯ್ ದತ್ ಪತ್ರೀಕಾಗೋಷ್ಠಿಯಲ್ಲಿ ಏನು ಹೇಳಿದರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...[ಸಂಜಯ್ ದತ್ ಕೈಗೆ ಬಾಂಬ್ ನೀಡಿರಲಿಲ್ಲ: ಅಬು ಸಲೇಂ]

23 ವರ್ಷಗಳ ಬಳಿಕ ಬಿಡುಗಡೆ

'ಇವತ್ತಿನ ದಿನ ನನಗೆ ಅತ್ಯಂತ ಸಂತೋಷದ ದಿನ. ಇವತ್ತು ನನ್ನ ಪಾಲಿಗೆ ಸ್ವಾತಂತ್ರ್ಯ ಸಿಕ್ಕಿದೆ, ಸುಮಾರು 23 ವರ್ಷಗಳ ಬಳಿಕ ನಾನು ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ. ಇವತ್ತು ನಾನೊಬ್ಬ ಸೆಲೆಬ್ರಿಟಿಯಾಗಿದ್ದರೂ ಕೂಡ ನನ್ನ ಬಿಡುಗಡೆಗೆ ಯಾವುದೇ ರೀತಿಯಲ್ಲಿ ಸಹಕಾರಿಯಾಗಲಿಲ್ಲ'.

42 ತಿಂಗಳ ಸೆರೆವಾಸ ಅಂತ್ಯ

'ನನ್ನನ್ನು ನಾನು ಮುಕ್ತನಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯುತ್ತದೆ. ನಾನು ಭಾರತದಲ್ಲಿ ಹುಟ್ಟಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಇನ್ನು ಮುಂದೆಯೂ ನಾನು ಭಾರತದಲ್ಲಿಯೇ ಇದ್ದು, ಇಲ್ಲಿಯೇ ಅಂತ್ಯ ಕಾಣುತ್ತೇನೆ' ಎಂದು ಸಂಜು ಬಾಬಾ ನುಡಿದರು. ಈ ಸಂದರ್ಭದಲ್ಲಿ ತಮ್ಮ ತಂದೆಯವರನ್ನು ಕೂಡ ನೆನಪಿಸಿಕೊಂಡರು.

ಪತ್ನಿ ಮಾನ್ಯತಾ ಬಗ್ಗೆ

'ನನ್ನ ಪತ್ನಿ ಮಾನ್ಯತಾ ನಾನಿಲ್ಲದೇ, ತುಂಬಾ ಕಷ್ಟ ಪಟ್ಟಿದ್ದಾಳೆ, ಆಕೆ ನನ್ನ ಬೆಟರ್ ಹಾಪ್ ಅಲ್ಲ ಬೆಸ್ಟ್ ಹಾಫ್. ನಾನು ಜೈಲಿನಲ್ಲಿ ಇರೋದು ಮುಖ್ಯ ಅಲ್ಲ. ಅಲ್ಲಿ ನನ್ನನ್ನ ಎಲ್ಲರೂ ಚೆನ್ನಾಗಿ ನೋಡಿಕೊಂಡರು. ನನಗೆ ಎಲ್ಲರೂ ಗೌರವ ಕೊಡುತ್ತಿದ್ದರು. ಆದರೆ ಹೊರಗಡೆ ನನ್ನ ಪತ್ನಿ ಸಮಾಜವನ್ನು ಎದುರಿಸಲು ತುಂಬಾ ಕಷ್ಟಪಟ್ಟಿದ್ದಾಳೆ ಎಂದು ಪತ್ನಿಯ ಬಗ್ಗೆ ಸಂಜು ಬಾಬಾ ಮಾತನಾಡಿದ್ದಾರೆ.

ಖುಷಿಯಲ್ಲಿ 4 ದಿನ ನಿದ್ದೆ ಇಲ್ಲ

ಬಿಡುಗಡೆ ಆಗುತ್ತಿರುವ ಖುಷಿಯಲ್ಲಿ ನಾನು ಜೈಲಿನಲ್ಲಿ ನಾಲ್ಕು ದಿನಗಳಿಂದ ನಿದ್ದೆ ಮಾಡಿಲ್ಲ. ಅಂತೂ ಬಿಡುಗಡೆ ಆಗುತ್ತಿದ್ದೇನೆ ಎಂದು ತುಂಬಾ ಖುಷಿಯಲ್ಲಿದ್ದೆ' ಎಂದು ಸಂಜು ಬಾಬಾ ನುಡಿದಿದ್ದಾರೆ.

ಜೈಲಿನ ಅನುಭವ ಬಿಚ್ಚಿಟ್ಟ ಸಂಜು ಬಾಬಾ

'ಜೈಲಿನಿಂದ ಬಿಡುಗಡೆ ಆದ ಬಳಿಕ ನಟ ಸಂಜಯ್ ದತ್ ಅವರು ಸುದ್ದಿಗೋಷ್ಠಿಯಲ್ಲಿ ಜೈಲಿನ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಜೈಲಿನ ಬಗ್ಗೆ ತುಂಬಾ ಗೌರವಪೂರ್ವಕವಾಗಿ ಮಾತಾಡಿದ್ದಾರೆ. 'ಅಲ್ಲಿ ನನಗೆ ಎಲ್ಲಾ ಅಧಿಕಾರಿಗಳು ತುಂಬಾ ಗೌರವ ಕೊಡುತ್ತಿದ್ದರು, ನನಗೆ ಯಾರು ತೊಂದರೆ ಕೊಡುತ್ತಿರಲಿಲ್ಲ, ಎಲ್ಲರೂ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದರು' ಎಂದು ನಟ ಸಂಜಯ್ ದತ್ ನುಡಿದಿದ್ದಾರೆ.

ಜೈಲಿನಲ್ಲಿ ಕೆಲಸ ಮಾಡಿದ ಸಂಜು ಬಾಬಾ

'ನಾನು ಜೈಲಿನಲ್ಲಿ ಸುಮ್ಮನೆ ಕುಳಿತಿರುತ್ತಿರಲಿಲ್ಲ, ಅಲ್ಲಿ ರೇಡಿಯೋ ಜಾಕಿ ಆಗಿ ಕೆಲಸ ಮಾಡಿದೆ. ಜಾಕಿಯಾಗಿ ನನ್ನ ಸಿನಿಮಾ ಜೀವನವನ್ನೇ ಎಲ್ಲರ ಜೊತೆ ಹಂಚಿಕೊಂಡೆ. ಜೊತೆಗೆ ಪೇಪರ್ ಕ್ರಾಪ್ಟ್ ಮಾಡಿ ಪೇಪರ್ ಬ್ಯಾಗ್ ಮಾಡೋದನ್ನ ಕಲಿತುಕೊಂಡೆ. ಅದನ್ನು ನಾನೀಗ ತುಂಬಾ ಚೆನ್ನಾಗಿ ಮಾಡುತ್ತೇನೆ. ಯಾರಿಗಾದ್ರೂ ಪ್ಲ್ಯಾಸ್ಟಿಕ್ ಬ್ಯಾಗ್ ಬೇಡ ಪೇಪರ್ ಬ್ಯಾಗ್ ಬೇಕು ಅಂದ್ರೆ ನನ್ನನ್ನು ಸಂಪರ್ಕಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

440 ರೂ ಸಂಪಾದನೆ ಮಾಡಿದ ಸಂಜಯ್

ಜೈಲಿನಲ್ಲಿ ಕೆಲಸ ಮಾಡಿದ್ದಕ್ಕಾಗಿ ನನಗೆ ಸ್ಯಾಲರಿ ನೀಡಿದ್ದು, 440 ರೂಪಾಯಿ ಸಂಪಾದಿಸಿದ್ದೇನೆ. ಇದೀಗ ಅದನ್ನು ನನ್ನ ಪತ್ನಿ ಮಾನ್ಯತಾ ಅವರಿಗೆ ನೀಡುತ್ತೇನೆ ಎಂದು ಸಂಜು ಬಾಬಾ ನುಡಿದಿದ್ದಾರೆ.

ಮಾಧ್ಯಮಕ್ಕೆ ಮನವಿ

'ನಾನು ಭಯೋತ್ಪಾದಕರ ಕಡೆಯವನಲ್ಲ, 1993ರಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಲ್ಲಿ ನಾನು ಅರೆಸ್ಟ್ ಆಗಿದ್ದಲ್ಲ, ಟಾಡಾ ಕೇಸ್ ನಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡ ಕೇಸ್ ನಲ್ಲಿ ಬಂಧಿಸಿದ್ದು, ದಯವಿಟ್ಟು ನನ್ನನ್ನು ಭಯೋತ್ಪಾದಕ ಎಂದು ಬಿಂಬಿಸಬೇಡಿ' ಎಂದು ಸಂಜಯ್ ದತ್ ಅವರು ಮಾಧ್ಯಮಕ್ಕೆ ವಿನಂತಿ ಮಾಡಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಬಗ್ಗೆ ಸಂಜು ಮಾತು

ಇನ್ನು ಮುಂದೆ ಸಿನಿಮಾ ವೃತ್ತಿ ಜೀವನವನ್ನು ಮುಂದುವರಿಸುತ್ತೇನೆ ಎಂದ ಸಂಜಯ್ ದತ್, ನಟ ಸಲ್ಮಾನ್ ಖಾನ್ ಬಗ್ಗೆ 'ಸಲ್ಮಾನ್ ಖಾನ್ ನನ್ನ ಚೋಟಾ ಭಾಯ್ ಇದ್ದ ಹಾಗೆ. ಅವನು ಈಗ ಸಿನಿಮಾ ಕ್ಷೇತ್ರದಲ್ಲಿ ತುಂಬಾ ಎತ್ತರಕ್ಕೆ ಏರಿದ್ದಾರೆ. ಅವರು ಇನ್ನು ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ.

ಆಮ್ ಆದ್ಮಿ ಸಂಜು ಬಾಬಾ

ಒಬ್ಬ ಸಾಮಾನ್ಯ ಮನುಷ್ಯ ರೀತಿಯಲ್ಲಿ ಎಲ್ಲರ ಜೊತೆ ಮಾತಾಡಿದ ನಟ ಸಂಜಯ್ ದತ್ ಅವರು ಇಂದು ಜೈಲಿನಿಂದ ಬಿಡುಗಡೆ ಆಗಿದ್ದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸನ್ನಡತೆ ಆಧಾರದಲ್ಲಿ ಸಂಜಯ್ ಅವರಿಗೆ ಬಿಡುಗಡೆ ಆಗಿದ್ದು, ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಬಿಡುಗಡೆ ಆಗಿದ್ದಾರೆ. ಕುಟುಂಬದವರ ಬೆಂಬಲದಿಂದಾಗಿ ನಾನು ಇಂದು ಬಿಡುಗಡೆ ಆಗಿದ್ದೇನೆ ಎಂದ ಸಂಜು, ಇನ್ನು ಮುಂದೆ ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯುವೆ ಎಂದಿದ್ದಾರೆ.

English summary
Bollywood actor Sanjay Dutt, who was released from Pune's Yerwada jail earlier during the day, is addressing the media. Below are the highlights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada