For Quick Alerts
  ALLOW NOTIFICATIONS  
  For Daily Alerts

  Big News: ಕೆಜಿಎಫ್ ಚಾಪ್ಟರ್ 2 ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ಸಂಜಯ್ ದತ್

  |

  ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮತ್ತೆ ಆರಂಭವಾಗಿದೆ. ಅನಾರೋಗ್ಯಕ್ಕೆ ತುತ್ತಾದ ಕಾರಣ ಸಂಜಯ್ ಅವರಿಲ್ಲದೇ ಚಿತ್ರೀಕರಣ ಶುರು ಮಾಡಿದೆ ಚಿತ್ರತಂಡ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸಂಜಯ್ ದತ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದೇಶಕ್ಕೆ ಸಹ ಹೋಗಿ ಬಂದಿದ್ದಾರೆ.

  ಇತ್ತೀಚಿಗೆ ಅವರ ಫೋಟೋಗಳನ್ನು ನೋಡಿದ್ರೆ ದೈಹಿಕವಾಗಿ ದತ್ ಬಳಲಿದ್ದಾರೆ ಎನ್ನುವುದು ತಿಳಿಯಬೇಕಾದ ವಿಚಾರ. ಹಾಗಾದ್ರೆ, ಕೆಜಿಎಫ್ ಚಾಪ್ಟರ್ 2 ಸಿನಿಮಾ ಕಥೆ ಏನು? ದತ್ ಬರೋವರೆಗೂ ಕಾದು ಶೂಟಿಂಗ್ ಮಾಡ್ತಾರಾ ಅಥವಾ ಸಂಜಯ್ ದತ್ ಇಲ್ಲದೇನೆ ಚಿತ್ರೀಕರಣ ಮುಗಿಸ್ತಾರಾ ಎಂಬ ಅನುಮಾನಗಳು ಬಲವಾಗಿ ಕಾಡುತ್ತಿದೆ. ಈ ಎಲ್ಲ ಅನುಮಾನ, ಕುತೂಹಲಕ್ಕೂ ಈಗ ಸ್ವತಃ ಸಂಜಯ್ ದತ್ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

  'KGF-2' ಮೇಕಿಂಗ್ ಫೋಟೋಗಳು: ಉಡುಪಿಯ ಕಡಲ ತೀರದಲ್ಲಿ ರಾಕಿ ಭಾಯ್-ರೀನಾ

  ಮಂಗಳೂರಿನಲ್ಲಿ ಕೆಜಿಎಫ್!

  ಮಂಗಳೂರಿನಲ್ಲಿ ಕೆಜಿಎಫ್!

  ಈಗಾಗಲೇ ಮಂಗಳೂರು ಸುತ್ತಾಮುತ್ತ ಚಾಪ್ಟರ್ 2 ಚಿತ್ರೀಕರಣ ಆರಂಭವಾಗಿದೆ. ಅದಕ್ಕೂ ಮುಂಚೆ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಿದ್ದರು. ಮಂಗಳೂರಿನಲ್ಲಿ ನಟ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ನಡುವಿನ ಭಾಗದ ಚಿತ್ರೀಕರಣ ನಡೆದಿದೆ. ಅದರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದವು.

  ನವೆಂಬರ್‌ಗೆ ಸಂಜಯ್ ದತ್ ಎಂಟ್ರಿ

  ನವೆಂಬರ್‌ಗೆ ಸಂಜಯ್ ದತ್ ಎಂಟ್ರಿ

  ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡಿರುವ ಸಂಜಯ್ ದತ್ ಚಿತ್ರೀಕರಣಕ್ಕೆ ಮರಳಲು ಸಜ್ಜಾಗಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ ಸ್ವತಃ ಸಂಜಯ್ ದತ್ ಹೇಳಿದ್ದಾರೆ. ತಮ್ಮ ನೆಚ್ಚಿನ ಹೇರ್‌ ಸ್ಟೈಲಿಸ್ಟ್ ಬಳಿ ಹೇರ್ ಕಟ್ ಮಾಡಿಸಿರುವ ಸಂಜಯ್ ದತ್, ಈ ವೇಳೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೆಜಿಎಫ್ ಕುರಿತು ಸ್ಪಷ್ಟನೆ ನೀಡಿದ್ದಾರೆ.

  'ಕೆಜಿಎಫ್-2' ಸಿನಿಮಾದ ಬಗ್ಗೆ ಅಪ್ ಡೇಟ್ ನೀಡಿದ ಪ್ರಶಾಂತ್ ನೀಲ್: ಉಡುಪಿ ಬಳಿಕ ಎಲ್ಲಿ ನಡೆಯಲಿದೆ ಚಿತ್ರೀಕರಣ?

  ಅಧೀರ ಪಾತ್ರಕ್ಕಾಗಿ ದತ್ ತಯಾರಿ

  ಅಧೀರ ಪಾತ್ರಕ್ಕಾಗಿ ದತ್ ತಯಾರಿ

  ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕಾಗಿ ಸಂಜಯ್ ದತ್ ಪೂರ್ವ ತಯಾರಿ ಸಹ ನಡೆಸಿದ್ದಾರೆ. ದೈಹಿಕವಾಗಿ ಫಿಟ್ ಆಗುವುದರ ಜೊತೆಗೆ ಹೇರ್‌ ಸ್ಟೈಲ್ ಹಾಗೂ ಗಡ್ಡವನ್ನು ಸಹ ಚಿತ್ರಕ್ಕಾಗಿ ಬಿಟ್ಟಿದ್ದಾರೆ. ಈ ಬಗ್ಗೆ ಖುದ್ದು ದತ್ ಅವರೇ ವಿಡಿಯೋದಲ್ಲಿ ಹೇಳಿದ್ದಾರೆ.

  ಜೇಮ್ಸ್ ಚಿತ್ರದ ಶೂಟಿಂಗ್ ಗಾಗಿ ಹೊಸಪೇಟೆಗೆ ಪುನೀತ್ ರಾಜಕುಮಾರ್ | Filmibeat Kannada
  ಸಂಜು ಬಾಬ ಆರೋಗ್ಯವಾಗಿದ್ದಾರೆ

  ಸಂಜು ಬಾಬ ಆರೋಗ್ಯವಾಗಿದ್ದಾರೆ

  ಸಂಜಯ್ ದತ್ ಅವರಿಗೆ ಆಗಸ್ಟ್ 2020ರಲ್ಲಿ ಮೂರನೇ ಹಂತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಪ್ರಸ್ತುತ ಮುಂಬೈನಲ್ಲಿ ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ. ಈ ಚಿಕಿತ್ಸೆಯಿಂದ ದತ್ ಅವರ ದಿನಚರಿಗೆ ಮತ್ತು ಕೆಲಸಕ್ಕೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ, ತಮ್ಮ ಕೆಲಸಗಳಲ್ಲಿ ದತ್ ತೊಡಗಿಸಿಕೊಳ್ಳಲು ತಯಾರಾಗಿದ್ದಾರೆ.

  English summary
  Bollywood actor Sanjay Dutt finally Confirms, he will starts shooting for KGF Chapter 2 in November.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X