»   » ಗಾಂಧಿನಗರದ ಎಂಟನೇ ಅದ್ಭುತ ನೋಡಿದ್ದೀರಾ...

ಗಾಂಧಿನಗರದ ಎಂಟನೇ ಅದ್ಭುತ ನೋಡಿದ್ದೀರಾ...

Posted By:
Subscribe to Filmibeat Kannada

'ಗಂಡ ಹೆಂಡತಿ' ಚಿತ್ರದಲ್ಲಿ ನಟಿ ಸಂಜನಾ ಮತ್ತು ನಟ ತಿಲಕ್ ಕೆಮಿಸ್ಟ್ರಿ ನೋಡಿದವರು ಬಾಯಿ ಮೇಲೆ ಬೆರಳಿಟ್ಟಿದ್ದರು. ಸಿನಿಮಾ ರಿಲೀಸ್ ಆದ್ಮೇಲೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ಗಾಸಿಪ್ ಕೂಡ ಕೆಲವರು ಹಬ್ಬಿಸಿದ್ದರು.

ಇದನ್ನೆಲ್ಲಾ ಕೇಳಿದ ಸಂಜನಾ ಮಾತ್ರ ಬೇಸರಗೊಂಡಿದ್ದರು. ಸಾಲದಕ್ಕೆ ನಟ ತಿಲಕ್ ಕಂಡರೆ ಉರಿದು ಬೀಳುತ್ತಿದ್ದರು. ಬಿಗ್ ಬಾಸ್ ಮನೆಯಲ್ಲೂ ಆಗಿದ್ದು ಇದೇ. ಒಂದೇ ಮನೆಯಲ್ಲಿ ಸಂಜನಾ ಮತ್ತು ತಿಲಕ್ ಮುಖಾಮುಖಿ ಆದಾಗ, ಸಂಜನಾ ತಾಳ್ಮೆ ಕೆಟ್ಟಿತ್ತು. ಇದರ ಪರಿಣಾಮ ಬಿಗ್ ಬಾಸ್ ಮನೆಯಲ್ಲಾದ ರಾದ್ಧಾಂತ. [ಮತ್ತೆ ಒಂದಾದ ಸ್ಯಾಂಡಲ್ ವುಡ್ಡಿನ 'ಗಂಡ-ಹೆಂಡತಿ']

Sanjjanaa and Tilak watches IPL match together

ಇಷ್ಟೆಲ್ಲಾ ಕೋಲಾಹಲವಾದ ನಂತರ ಸಂಜನಾ ಮತ್ತು ತಿಲಕ್ ಸ್ನೇಹಿತರಾಗಿದ್ದಾರೆ. ಹಿಂದೆಂದಿಗಿಂತಲೂ ಆತ್ಮೀಯರಾಗಿದ್ದಾರೆ. ಇಬ್ಬರ ಅನ್ಯೋನ್ಯತೆ ಎಷ್ಟಿದೆ ಅಂದ್ರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮ್ಯಾಚ್ ನ ಸಂಜನಾ-ತಿಲಕ್ ಒಟ್ಟಿಗೆ ಕೂತು ವೀಕ್ಷಿಸಿದ್ದಾರೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜೊತೆಯಾಗಿ ಚಿಯರ್ ಮಾಡಿದ್ದಾರೆ.

ರಿಯಲ್ ನಲ್ಲಿ ಮಾತ್ರ ಅಲ್ಲ, ರೀಲ್ ನಲ್ಲೂ ಮತ್ತೊಮ್ಮೆ ಸಂಜನಾ-ತಿಲಕ್ ಒಂದಾಗುತ್ತಿದ್ದಾರೆ. ಹಿಮಾಯತ್ ನಿರ್ಮಾಣದ 'ಜಸ್ಟ್ ಆಕಸ್ಮಿಕ' ಚಿತ್ರದಲ್ಲಿ ಸಂಜನಾ ಮತ್ತು ತಿಲಕ್ ಅಭಿನಯಿಸುತ್ತಿದ್ದಾರೆ. ಅಂತೂ ಒಂದ್ಕಾಲದಲ್ಲಿ ಹಾವು-ಮುಂಗುಸಿಯಂತಿದ್ದವರು, ಈಗ ಗಳಸ್ಯ ಕಂಠಸ್ಯ ಆಗಿರುವುದು ಗಾಂಧಿನಗರದ ಎಂಟನೇ ಅದ್ಭುತ.

English summary
Kannada Actors Sanjjanaa and Tilak, are getting along quite well. After 'Ganda Hendathi', Both the stars are roped in to play lead for the movie 'Just Akasmika'. Meanwhile, the two watched IPL match that took place recently in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada