Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೋಟದಲ್ಲಿ ಪುತ್ರ ವಿನೀಶ್ ಜೊತೆ ದರ್ಶನ್ ಸಂಕ್ರಾಂತಿ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ದರ್ಶನ್ ಫಾರ್ಮ್‌ಹೌಸ್ ಅಂದರೆ, ಅಲ್ಲೊಂದು ಅಚ್ಚರಿ. ಪ್ರಾಣಿ-ಪಕ್ಷಿಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಿ ಸಲಹುತ್ತಿರುವ ಪರಿಯೇ ಅದ್ಭುತ ಅಂತ ಅನಿಸಿಬಿಡುತ್ತೆ. ದರ್ಶನ್ ಬಿಡುವು ಸಿಕ್ಕಾಗಲೆಲ್ಲಾ ಇದೇ ಫಾರ್ಮ್ ಹೌಸ್‌ನಲ್ಲಿ ಬಂದು ಉಳಿದುಕೊಳ್ಳುತ್ತಾರೆ. ಇಲ್ಲೇ ಕಾಲ ಕಳೆಯುತ್ತಾರೆ. ಅದರಲ್ಲೂ ಸಂಕ್ರಾಂತಿ ಹಬ್ಬದ ವೇಳೆ ಇವರ ತೋಟದಲ್ಲಿ ಸಿಂಗಾರಗೊಳ್ಳುವ ಹಸುಗಳನ್ನು ನೋಡುವುದೇ ಒಂದು ಸಂಭ್ರಮ.
Recommended Video
ಈ ಬಾರಿ ಸಂಕ್ರಾಂತಿ ಹಬ್ಬವನ್ನೂ ದರ್ಶನ್ ಎಂದಿನಂತೆ ಅದ್ಧೂರಿಯಾಗಿ ಆಚರಿಸಿದ್ದರು. ದರ್ಶನ್ ಪುತ್ರ ವಿನೀಶ್ ಕೂಡ ಈ ಸಂಕ್ರಾಂತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಅಪರೂಪದ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ, ದರ್ಶನ್ ಫಾರ್ಮ್ ಹೌಸ್‌ನಲ್ಲಿ ಏನು ಮಾಡಿದ್ದರು ಎಂದು ತಿಳಿಯಲು ಮುಂದೆ ಓದಿ.

ದರ್ಶನ್ ತೋಟದಲ್ಲಿ ಸಂಕ್ರಾಂತಿ
ಟಿ ನರಸಿಪುರದಲ್ಲಿರುವ ದರ್ಶನ್ ತೂಗುದೀಪ ಫಾರ್ಮ್‌ಹೌಸ್ ಎಂದಿನಂತೆ ಸಿಂಗಾರಗೊಂಡಿತ್ತು. ದರ್ಶನ್ ಜೊತೆ ಅವರ ಸ್ನೇಹಿತರೂ ಸೇರಿಕೊಂಡು ಸಂಕ್ರಾಂತಿ ಹಬ್ಬಕ್ಕೂ ಮುನ್ನ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ದರ್ಶನ್ ತಮ್ಮ ತೋಟದಲ್ಲಿ ನಾನಾ ತಳಿಯ ರಾಸುಗಳನ್ನು ಸಾಕಿದ್ದಾರೆ. ಈ ಎಲ್ಲಾ ರಾಸುಗಳಿಗೂ ಅರಿಶಿಣ ಹಚ್ಚಿ, ಮೈ ತೊಳೆದು ಶುಚಿಗೊಳಿಸಿದ್ದರು. ಸಂಕ್ರಾಂತಿ ಹಬ್ಬಕ್ಕಾಗಿಯೇ ರಾಸುಗಳನ್ನು ಪೂಜೆ ಮಾಡಲು ಸಜ್ಜಗೊಳಿಸಿದ್ದರು.

ಸಂಕ್ರಾಂತಿ ಹಬ್ಬಕ್ಕೆ ಅಖಾಡಕ್ಕಿಳಿದ ದಚ್ಚು
ಸಂಕ್ರಾಂತಿ ಹಬ್ಬಕ್ಕಾಗಿ ಸ್ವತಃ ದರ್ಶನ್ ಅಖಾಡಕ್ಕೆ ಇಳಿದಿದ್ದರು. ತಾವೇ ಖುದ್ದಾಗಿ ನಿಂತು ಹಬ್ಬದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಗರಗಸ ಹಿಡಿದು ಹಸುಗಳನ್ನ ಕಟ್ಟಲು ಕಂಬಗಳನ್ನು ಸಿದ್ಧ ಪಡಿಸಿದ್ದರಿಂದ ಹಿಡಿದು, ತಾವೇ ಕೂತು ಹಸುಗಳಿಗೆ ಆಹಾರ ಸಿದ್ಧಪಡಿಸಿದ್ದರು. ಈ ವಿಡಿಯೋವನ್ನೇ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ದರ್ಶನ್‌ಗೆ ಅವರ ಸ್ನೇಹಿತರು ಹಾಗೂ ತೋಟದ ಕೆಲಸ ಮಾಡುವ ಜನರು ಜೊತೆಯಾಗಿದ್ದರು.

ತಂದೆ ಜೊತೆ ಸಂಕ್ರಾಂತಿ ಆಚರಿಸಿದ ವಿನೀಶ್
ದರ್ಶನ್ ಅವರ ತೂಗುದೀಪ ಫಾರ್ಮ್ ಹೌಸ್‌ನಲ್ಲಿ ಕೇವಲ ರಾಸುಗಳಷ್ಟೇ ಅಲ್ಲ. ಕುರಿಗಳು, ಬೇರೆ ಬೇರೆ ತಳಿಗಳ ಕುದುರೆಗಳು, ಕೋಳಿ, ಪಕ್ಷಿಗಳನ್ನು ನೋಡಬಹುದು. ಇದೇ ಫಾರ್ಮ್ ಹೌಸ್‌ನಲ್ಲಿ ದರ್ಶನ್ ತಮ್ಮ ಪುತ್ರನ ಹೆಸರಿನಲ್ಲಿ ವಿನೀಶ್ ದರ್ಶನ್ ಕಾಟೆವಾರಿ ಸ್ಟುಡ್ ಫಾರ್ಮ್ ನಿರ್ಮಾಣ ಮಾಡಿದ್ದಾರೆ. ದರ್ಶನ್ ಪುತ್ರನಿಗೂ ತೋಟದ ಮೇಲೆ ಬಲು ಪ್ರೀತಿ. ಈ ಕಾರಣಕ್ಕಾಗಿಯೇ ಸಂಕ್ರಾಂತಿ ಹಬ್ಬದಂತೂ ದರ್ಶನ್ ಅವರ ಪುತ್ರ ವಿನೀಶ್ ಕೂಡ ಕಾಣಿಸಿಕೊಂಡಿದ್ದಾರೆ.
ವಿಡಿಯೋ ಹಂಚಿ ದರ್ಶನ್ ಅಭಿಮಾನಿಗಳಿಂದ ಸಂಭ್ರಮ
ಸಂಕ್ರಾಂತಿ ಹಬ್ಬ ಕಳೆದು 15 ದಿನಗಳಾಗಿವೆ. ಈಗ ದರ್ಶನ್ ಅಭಿಮಾನಿಗಳ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯರಂತೆ ದರ್ಶನ್ ತಮ್ಮ ತೋಟದ ಮನೆಯಲ್ಲಿ ಹೇಗೆ ಸಂಕ್ರಾಂತಿ ಆಚರಿಸಿಕೊಂಡಿದ್ದಾರೆ ಎಂಬುವುದನ್ನು ಅಭಿಮಾನಿ ಬಳಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕ್ರಾಂತಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ 'ಯಜಮಾನ' ಸಿನಿಮಾ ಬಳಿಕ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ಶೈಲಜಾನಾಗ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಈ ವರ್ಷ ಬಿಡುಗಡೆ ಮಾಡಲು ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಬಿಡುಗಡೆಯಾಗಬಹುದು. ಈ ಚಿತ್ರಕ್ಕಾಗಿ ದರ್ಶನ್ ಫ್ಯಾನ್ಸ್ ಕಾದು ಕೂತಿದ್ದಾರೆ.