For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿ 2022: ಹಬ್ಬದ ಸಂಭ್ರಮದಲ್ಲಿ ಸಿನಿಮಾ ತಾರೆಯರು!

  |

  ಕರ್ಫ್ಯೂ, ಕೊರೊನಾ ಹಾವಳಿ ನಡುವೆಯೂ ಸಂಕ್ರಾಂತಿ ಹಬ್ಬದ ಜೋರಾಗಿದೆ. ಸಿನಿಮಾ ತಾರೆಯರು ಭಿನ್ನ, ಭಿನ್ನವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾ ಇದ್ದಾರೆ. ತಮ್ಮ ಮನೆಯ ಹಬ್ಬದ ಸುಗ್ಗಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಂಡಿದ್ದಾರೆ.

  ಈ ಭಾರಿಯ ಹಬ್ಬಕ್ಕೆ ಒಂದಷ್ಟು ಸಿನಿಮಾಗಳ ರಿಲೀಸ್ ನಿರೀಕ್ಷೆ ಮಾಡಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಅದು ಸಾಧ್ಯ ಆಗಿಲ್ಲ. ಆದರೆ ಸಿನಿಮಾ ಮಂದಿ ತಮ್ಮ ಮನೆಯ ಮಟ್ಟಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಇದ್ದಾರೆ. ಸಾಕಷ್ಟು ಸಿನಿಮಾ ನಟಿ, ನಟಿಯರು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

  ಈ ಬಾರಿ ಹಬ್ಬ ಮಾಡಿ ಗಮನ ಸೆಳೆದ ತಾರೆಯರಲ್ಲಿ ಪ್ರಿಯಾಂಕ ಉಪೇಂದ್ರ ಕುಟುಂಬ, ರಾಗಿಣಿ ದ್ವಿವೇದಿ, ನಟಿ ಶ್ರುತಿ, ಮಾಳವಿಕ ಅವಿನಾಶ್, ಸುಧಾರಾಣಿ ಇದ್ದಾರೆ. ಈ ತಾರೆಯರು ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಿದ್ದಾರೆ. ಈ ಬ್ಗಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಚಾರ ಹಂಚಿಕೊಂಡಿದ್ದಾರೆ.

  ಶೃತಿ, ಮಾಳಾವಿಕ, ಸುಧಾರಾಣಿಯ ಸಂಕ್ರಾಂತಿ ಬಲು ಜೋರು!

  ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಶೃತಿ, ಮಾಳವಿಕ ಅವಿನಾಶ್, ಸುಧಾರಾಣಿ ಸದಾ ಒಟ್ಟಿಗೆ ಇರುತ್ತಾರೆ. ಇವರು ಮೂವರು ಸ್ನೇಹಿತರು ಆಗಿರುವ ಕಾರಣಕ್ಕೆ ಏನೇ ಶುಭ ಕಾರ್ಯ ಇದ್ದರು ಒಟ್ಟಿಗೆ ಸೇರಿ ಮಾಡುತ್ತಾರೆ. ಈಗ ಅಂತೆಯೇ ಸಂಕ್ರಾಂತಿ ಹಬ್ಬವನ್ನು ಕೂಡ ಮೂವರು ಕುಟುಂಬಸ್ಥರು ಸೇರಿ ವಿಶೇಷವಾಗಿ ಆಚರಿಸಿದ್ದಾರೆ. ಎತ್ತುಗಳ ಕೊಂಬುಗಳಿಗೆ ಬಣ್ಣ ಬೀಳುದು, ರಂಗೋಲಿ ಹಾಕಿ, ಕಬ್ಬು ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಈ ಬಗ್ಗೆ ವಿಶೇಷ ವಿಡಿಯೋವನ್ನು ಶೃತಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹಬ್ಬದ ಸಂಭ್ರಮ!

  ಹಬ್ಬಗಳು ಬಂತು ಅಂದರೆ ಸಾಕು ಪ್ರಿಯಾಂಕಾ, ಉಪೇಂದ್ರ ಅವರ ಮನೆಯಲ್ಲಿ ಸಂಭ್ರಮ ಕಳೆಗಟ್ಟಿ ಬಿಡುತ್ತದೆ. ಉಪೆಂದ್ರ ಅವರ ಮನೆಯಲ್ಲಿ ಬಹುತೇಕ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ಅಂತೇ ಈ ಬಾರಿ ಸಂಕ್ರಾಂತಿ ಹಬ್ಬವನ್ನೂ ಕೂಡ ಅತ್ಯಂತ ವಿಜೃಂಭಣೆಯಿಂದ ಮಾಡಲಾಗಿದೆ. ಮಕ್ಕಳು, ಕುಟುಂಬಸ್ಥರ ಜೊತೆಗೆ ಸೇರಿ ಹಬ್ಬ ಆಚರಿಸಲಾಗಿದ್ದು, ಈ ಬಗ್ಗೆ ನಟಿ ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ, ಎಳ್ಳು ಬೆಲ್ಲ ಹಿಡಿದು ಮಿಂಚಿದ್ದಾರೆ.

  ಸಂಕ್ರಾಂತಿ ಖುಷಿಯಲ್ಲಿ ರಾಗಿಣಿ, ಕೃಷಿ ತಾಪಂಡ!

  ಸಂಕ್ರಾಂತಿ ಖುಷಿಯಲ್ಲಿ ರಾಗಿಣಿ, ಕೃಷಿ ತಾಪಂಡ!

  ಇನ್ನು ಕನ್ನಡದ ಹಲವು ತಾರೆಯರು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆ ತೊಟ್ಟು ಸಿದ್ಧವಾಗಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ನಟಿ ರಾಗಿಣಿ ದ್ವಿವೇದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಸೀರೆಯುಟ್ಟು ಹಬ್ಬಕ್ಕೆ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ. ನಟಿ ಕೃಷಿ ತಾಪಂಡ ಕೂಡ ರೇಷ್ಮೆ ಸೀರೆ ಉಟ್ಟು ಅಂಕಾರ ಮಾಡಿಕೊಂಡು ಹಬ್ಬ ಆಚರಿಸಿದ್ದು, ಫೋಟೋ ಅಪ್ಲೋಡ್ ಮಾಡಿ ಎಲ್ಲರಿಗೂ ಶುಭ ಸಂಕ್ರಾಂತಿ ಎಂದು ವಿಶ್ ಮಾಡಿದ್ದಾರೆ.

  ವೈಷ್ಣವಿ, ದೀಪಿಕಾ ದಾಸ್ ಬೊಂಬಾಟ್ ಲುಕ್!

  ವೈಷ್ಣವಿ, ದೀಪಿಕಾ ದಾಸ್ ಬೊಂಬಾಟ್ ಲುಕ್!

  ಅಗ್ನಿಸಾಕ್ಷಿ ವೈಷ್ಣವಿ ಕೂಡ ಹಬ್ಬಕ್ಕೆ ವಿಶೇಷವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಗಿಣಿ ಹಸಿರು ಮತ್ತು ನೇರಳೆ ಬಣ್ಣದ ರೇಷ್ಮೆ ಸೀರೆ ಉಟ್ಟು ಕೊಂಡು ಆಭರಣಗಳನ್ನು ತೊಟ್ಟು ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಹಾಗೆ ಸದಾ ಮಾಡ್ರನ್ ಲುಕ್‌ನಲ್ಲಿ ಇರುವ ನಟಿ ದೀಪಿಕಾ ದಾಸ್ ಕೂಡ ಹಬ್ಬಕ್ಕಾಗಿ ಸೀರೆಯುಟ್ಟು ಮಿಂಚಿದ್ದಾರೆ. ಕಡು ನೀಲಿ ಬಣ್ಣದ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಇಬ್ಬರೂ ಕೂಡ ಫೋಟೋಗಳನ್ನು ಹಾಕಿಕೊಂಡು ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

  English summary
  Sankranti festival Special Celebration In Actor Upendra, Shruthi, Sudha Rani, Ragini Dwivedi House

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X