For Quick Alerts
  ALLOW NOTIFICATIONS  
  For Daily Alerts

  ಪುನೀತ್ ಅಭಿಮಾನಿಗಳಿಗೆ ಸಂಕ್ರಾಂತಿ ಕೊಡುಗೆ ನಿನ್ನಿಂದಲೇ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಬಹಳ ಕಾತುರತೆ ತೆರೆಬೀಳುವ ಸಮಯ ಹತ್ತಿರವಾಗಿದೆ. ಹೊಂಬಾಳೆ ಫಿಲಂಸ್ ಅವರ ಮೊದಲ ಕಾಣಿಕೆ 'ನಿನ್ನಿಂದಲೇ' ಚಿತ್ರ ಇದೇ ಗುರುವಾರ (ಜ.16) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ನಿರ್ದೇಶಕ ಜಯಂತ್ ಪರಂಜಿ ಅವರ ಮೊಟ್ಟ ಮೊದಲ ಕನ್ನಡ ಸಿನಿಮಾ ಇದಾಗಿದೆ.

  ಮೊಟ್ಟ ಮೊದಲ ಬಾರಿಗೆ ಎರಿಕ ಫರ್ನಾಂಡೀಜ್ ಅವರು ನಾಯಕಿ ಆಗಿ ಅಭಿನಯಿಸಿರುವ ಚಿತ್ರವನ್ನು ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಯಂತ್ ಪರಾಂಜೆ ಅವರು ನಿರ್ದೇಶನವನ್ನು ಮಾಡಿದ್ದಾರೆ. ವಿಜಯ್ ಕಿರಗಂದುರ್ ಈ ಚಿತ್ರದ ನಿರ್ಮಾಪಕರು. [ಪುನೀತ್ 'ನಿನ್ನಿಂದಲೇ' ಟಿವಿ ರೈಟ್ಸ್ ಗೆ ಭರ್ಜರಿ ರೇಟ್]

  ಪ್ರೇಮಿಂಚಿಕುಂದಾಮ್ ರಾ, ಬಾವಗಾರು ಬಾಗುನ್ನಾರಾ, ಪ್ರೇಮಾಂಟೆ ಇದೇರಾ, ಟಕ್ಕರಿ ದೊಂಗ, ಈಶ್ವರ್, ಲಕ್ಷ್ಮಿ ನರಸಿಂಹ, ಶಂಕರ ದಾದಾ ಎಂ ಬಿ ಬಿ ಎಸ್, ಸಖಿಯಾ, ಅಲ್ಲಾರಿ ಪಿಡುಗು, ತೀನ್ ಮಾರ್ ಅಂತಹ ದೊಡ್ಡ ಬಜೆಟ್ಟಿನ ಹಾಗೂ ದೊಡ್ಡ ನಟರುಗಳ ಚಿತ್ರಗಳ ನಿರ್ದೇಶನ ಮಾಡಿದವರು ಜಯಂತ್ ಪರಾಂಜೆ ಅವರು.

  ಅಮೆರಿಕ ದೇಶದಲ್ಲಿ ಕೆಲವು ಆಕ್ರಮಣಕಾರಿ ಸನ್ನಿವೇಶಗಳು ಹಾಗೂ ಮಾತಿನ ಭಾಗ, ಹಾಡುಗಳನ್ನು ಚಿತ್ರೀಕರಣ 40 ದಿವಸಗಳಲ್ಲಿ ಮಾಡುವುದಕ್ಕೂ ಮುಂಚೆ ನಿನ್ನಿಂದಲೇ' ಚಿತ್ರವು 20 ದಿವಸಗಳ ಚಿತ್ರೀಕರಣವನ್ನು ಕಂಠೀರವ ಸ್ಟುಡಿಯೋ, ಎಫ್ ಬಾರ್, ಒರಿಯನ್ ಮಾಲ್ ಕಾಫಿ ಶಾಪ್ ಹಾಗೂ ಮೂರು ದಿವಸಗಳ ಚಿತ್ರೀಕರಣ ಹೈದರಾಬಾದ್ ಅಲ್ಲಿ ಮುಗಿಸಿಕೊಂಡಿದೆ.

  ಚಿನ್ನಿ ಪ್ರಾಕಾಶ್, ಕಲ್ಯಾಣ್ ಮಾಸ್ಟರ್ ಹಾಗೂ ರಾಜು ಸುಂದರಂ ಈ ಚಿತ್ರದ ನೃತ್ಯ ನಿರ್ದೇಶಕರು. 'ನಿನ್ನಿಂದಲೇ' ನ್ಯೂ ಯಾರ್ಕ್ ಅಲ್ಲಿ ಚಿತ್ರೀಕರಣ ಮಾಡುವುದಕ್ಕಾಗಿ ಸ್ವದೇಶದ ಮೂರು ಹಾಗೂ ವಿದೇಶದ ಕೆಲವು ಕ್ಯಾಮರಗಳನ್ನು ಬಳಸಲಾಗಿದೆ.

  ಮಣಿ ಶರ್ಮ ಅವರ ಸಂಗೀತ ಇರುವ ಈ ಚಿತ್ರದ ಸಂಕಲನಕಾರ ಮಾರ್ತಾಂಡ ಕೆ ಪ್ರಕಾಶ್, ನಿರ್ದೇಶಕ ಜಯಂತ್ ಸಿ ಪರಂಜಿ ಅವರ ಜೊತೆ ಶಂಕರ್ ಅವರು ಚಿತ್ರಕಥೆ ನೆರವು ನೀಡಿದ್ದಾರೆ. ಪಿ ಜಿ ವಿಂಧಾ ಅವರು ಈ ಚಿತ್ರದ ಛಾಯಾಗ್ರಾಹಕರು.

  ಪೋಷಕ ಪಾತ್ರಗಳಲ್ಲಿ ಅವಿನಾಷ್ ಶೃಂಗೇರಿ (ಜುಗಾರಿ) ವಿನಾಯಕ್ ಜೋಷಿ, ಸೋನಿಯ ದೀಪ್ತಿ, ಆಲೋಕ್ ಬಾಬು, ಅವಿನಾಷ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಪ್ರತಾಪ್, ಶ್ರೀ ನಿವಾಸ್ ಪ್ರಭು, ಸಿಹಿಕಹಿ ಚಂದ್ರು, ರೋಹಿಣಿ ರಘುವರನ್ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  The much anticipated Kannada movie Ninnindale starring Power Star Puneet Rajkumar has finally confirmed its release date. The movie is all set to hit screens on January 16, which is considered as the biggest feast for Puneet's fans for Sankranthi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X