For Quick Alerts
  ALLOW NOTIFICATIONS  
  For Daily Alerts

  'ಕಬಾಲಿ' ಬಿಡಿ, ಕನ್ನಡದಲ್ಲಿ 'ಕಬೀರ' ಬರ್ತಿದ್ದಾನೆ..ಕೃಪೆ ತೋರಿ

  By Harshitha
  |

  ಅಂದು (1962) ನಟ ಸಾರ್ವಭೌಮ ಡಾ.ರಾಜ್ ಕುಮಾರ್ ರವರ 'ಮಹಾತ್ಮ ಕಬೀರ'. ಇಂದು (2016) ನಾಟ್ಯ ಸಾರ್ವಭೌಮ ಡಾ.ಶಿವರಾಜ್ ಕುಮಾರ್ ರವರ 'ಸಂತೆಯಲ್ಲಿ ನಿಂತ ಕಬೀರ'.!

  ಹೌದು, 54 ವರ್ಷಗಳ ನಂತರ ಸ್ಯಾಂಡಲ್ ವುಡ್ ನಲ್ಲಿ 'ಕಬೀರ' ಸ್ಮರಣೆ ಜೋರಾಗಿ ನಡೆಯುತ್ತಿದೆ. ಇದೇ ಶುಕ್ರವಾರ (ಜುಲೈ 29) 'ಸಂತೆಯಲ್ಲಿ ನಿಂತ ಕಬೀರ' ಕರ್ನಾಟಕ ರಾಜ್ಯಾದ್ಯಂತ ತೆರೆ ಕಾಣಲಿದೆ. [ರೋಚಕ, ಕೌತುಕ, ಮನಮೋಹಕ 'ಸಂತೆಯಲ್ಲಿ ನಿಂತ ಕಬೀರ' ಟ್ರೈಲರ್]

  15ನೇ ಶತಮಾನದ ಸಂತ ಕಬೀರ್ ದಾಸ್ ಜೀವನಗಾಥೆಯನ್ನ ಇಂದಿನ ಕಾಲಘಟ್ಟಕ್ಕೆ ಸರಿಹೊಂದುವ ಹಾಗೆ 'ಸಂತೆಯಲ್ಲಿ ನಿಂತ ಕಬೀರ' ಚಿತ್ರವನ್ನ ತಯಾರು ಮಾಡಿದ್ದಾರೆ ನಿರ್ದೇಶಕ ಇಂದ್ರ ಬಾಬು (ನರೇಂದ್ರ ಬಾಬು). ಮುಂದೆ ಓದಿ....

  ಐತಿಹಾಸಿಕ ಸಿನಿಮಾ ಇದು.!

  ಐತಿಹಾಸಿಕ ಸಿನಿಮಾ ಇದು.!

  ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಐತಿಹಾಸಿಕ ಸಿನಿಮಾ ಎಂದು ಪ್ರಮಾಣ ಪತ್ರ ನೀಡಿದೆ. [ಆಡಿಯೋ ವಿಮರ್ಶೆ: 'ಸಂತೆಯಲ್ಲಿ ನಿಂತ ಕಬೀರ' ಹಾಡುಗಳು ಸೂಪರ್]

  ಸಮಾಜಕ್ಕೆ ಉತ್ತಮ ಸಂದೇಶ ಇದೆ.!

  ಸಮಾಜಕ್ಕೆ ಉತ್ತಮ ಸಂದೇಶ ಇದೆ.!

  ಶಾಂತಿ, ಸಹಬಾಳ್ವೆ, ಮಾನವೀಯತೆ ಗುಣಗಳನ್ನು ಸಾರುವ 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ. ['ಕಬೀರ' ಚಿತ್ರಕ್ಕೆ ಬಂದ ಸಪೂರ ಚೆಲುವೆ ಸನುಶಾ]

  ಶೂಟಿಂಗ್ ನಡೆದಿರುವುದು ಎಲ್ಲೆಲ್ಲಿ...

  ಶೂಟಿಂಗ್ ನಡೆದಿರುವುದು ಎಲ್ಲೆಲ್ಲಿ...

  ಬೆಂಗಳೂರು, ಕೆ.ಆರ್.ಎಸ್ ಹಿನ್ನೀರು, ಚಿಕ್ಕಮಗಳೂರು ಹಾಗೂ ಚಾಲಾಕುಡಿಯಲ್ಲಿ 'ಸಂತೆಯಲ್ಲಿ ನಿಂತ ಕಬೀರ' ಚಿತ್ರೀಕರಣ ನಡೆದಿದೆ. [ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ]

  ಇಸ್ಮೈಲ್ ದರ್ಬಾರ್ ಸಂಗೀತ

  ಇಸ್ಮೈಲ್ ದರ್ಬಾರ್ ಸಂಗೀತ

  ಬಾಲಿವುಡ್ ನಲ್ಲಿ 'ದೇವದಾಸ್', 'ಹಮ್ ದಿಲ್ ದೇ ಚುಕೆ ಸನಮ್' ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಗೀತ ನೀಡಿರುವ ಇಸ್ಮೈಲ್ ದರ್ಬಾರ್, 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. [ಹ್ಯಾಟ್ರಿಕ್ ಹೀರೋ 'ಕಬೀರ' ಫಸ್ಟ್ ಲುಕ್ ಔಟ್]

  ಕಬೀರನ ದೋಹಾಗಳು ಇವೆ.!

  ಕಬೀರನ ದೋಹಾಗಳು ಇವೆ.!

  ಕಬೀರ್ ದಾಸ್ ಜೀವನ ಚರಿತ್ರೆ ಸಾರುವ ಈ ಚಿತ್ರದಲ್ಲಿ ಕಬೀರ ದೋಹಗಳನ್ನು ಬಳಸಿಕೊಳ್ಳಲಾಗಿದೆ.

  ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ.?

  ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ.?

  'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್, ಅನಂತ್ ನಾಗ್, ಅವಿನಾಶ್, ಸಂಜನಾ ಸೇರಿದಂತೆ ದೊಡ್ಡ ತಾರಾಬಳಗ ಇದೆ.

  ನಾಯಕಿ ಸನುಷಾ

  ನಾಯಕಿ ಸನುಷಾ

  ಮಲೆಯಾಳಂ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿ ಸನುಷಾ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿ ಆಗಿದ್ದಾರೆ.

  ವಿಭಿನ್ನ ಗೆಟಪ್ ನಲ್ಲಿ ಶಿವಣ್ಣ

  ವಿಭಿನ್ನ ಗೆಟಪ್ ನಲ್ಲಿ ಶಿವಣ್ಣ

  'ಕಬೀರ'ನ ಪಾತ್ರ ನಿರ್ವಹಿಸುತ್ತಿರುವ ಶಿವರಾಜ್ ಕುಮಾರ್ ವಿಭಿನ್ನ ಗೆಟಪ್ ನಲ್ಲಿ ಮಿಂಚಿದ್ದಾರೆ.

  'ಕಬೀರ'ನಿಗೆ ಕೃಪೆ ತೋರಿ

  'ಕಬೀರ'ನಿಗೆ ಕೃಪೆ ತೋರಿ

  ಬಹಳ ದಿನಗಳ ನಂತರ ಕನ್ನಡ ಚಿತ್ರರಂಗದಲ್ಲಿ 'ಸಂತೆಯಲ್ಲಿ ನಿಂತ ಕಬೀರ' ದಂತಹ ಐತಿಹಾಸಿಕ ಸಿನಿಮಾ ತೆರೆಗೆ ಬರುತ್ತಿದೆ. ಕನ್ನಡ ಪ್ರೇಕ್ಷಕರು ಕೃಪೆ ತೋರಿ, ಕನ್ನಡ ಚಿತ್ರಗಳನ್ನ ಗೆಲ್ಲಿಸಿ....

  English summary
  Kannada Actor Shiva Rajkumar starrer 'Santheyalli Nintha Kabira' is all set to release on July 29th. The movie is directed by Indra Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X