»   » 'ರಾಜಕುಮಾರ' ನಿರ್ದೇಶಕ ಸಂತೋಷ್ ಗೆ ಒಲಿದು ಬಂತು ಕಂಕಣಭಾಗ್ಯ

'ರಾಜಕುಮಾರ' ನಿರ್ದೇಶಕ ಸಂತೋಷ್ ಗೆ ಒಲಿದು ಬಂತು ಕಂಕಣಭಾಗ್ಯ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗಕ್ಕೆ 'ರಾಮಾಚಾರಿ' ಹಾಗೂ 'ರಾಜಕುಮಾರ' ಸಿನಿಮಾ ನೀಡಿರುವ ಸ್ಟಾರ್ ನಿರ್ದೇಶಕ 'ಸಂತೋಷ್ ಆನಂದ್ ರಾಮ್' ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡಿರುವ ಸಂತೋಷ್ ಇದೇ ತಿಂಗಳು ಎಂಗೇಜ್ ಆಗಲಿದ್ದಾರೆ.

ಬಳ್ಳಾರಿ ಬೆಡಗಿ ಕೈ ಹಿಡಿಯುತ್ತಿರುವ ಸಂತೋಷ್ ಆನಂದ್ ರಾಮ್ ಇದೇ ಭಾನುವಾರ (ನವೆಂಬರ್ 26) ತಮ್ಮ ಕುಟುಂಬದ ಆಪ್ತರಾಗಿರುವ ಶ್ರೀನಿವಾಸ್ ಹತ್ವಾರ್ ರ ಪುತ್ರಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮುಂದೆ ಓದಿರಿ...

ಸಂತೋಷ್ ಆನಂದ್ ರಾಮ್ ಮದುವೆ

ಸಂತೋಷ್ ಆನಂದ್ ರಾಮ್ ರನ್ನ ಕೈ ಹಿಡಿಯುತ್ತಿರುವ ಹುಡುಗಿ ಬಳ್ಳಾರಿ ಮೂಲದ ಸುರಭಿ ಹತ್ವಾರ್. ಹತ್ವಾರ್ ಫ್ಯಾಮಿಲಿಯ ಸುರಭಿ ಶಿಕ್ಷಣ ಮುಗಿಸಿ ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ.

ಬಳ್ಳಾರಿಯಲ್ಲಿ ನಿಶ್ಚಿತಾರ್ಥ

ಬಳ್ಳಾರಿಯಲ್ಲಿ ಗುರು ಹಿರಿಯರು ನಿಶ್ಚಯ ಮಾಡಿರುವಂತೆ ಭಾನುವಾರ ಸಂಜೆ ನಿಶ್ಚಿತಾರ್ಥ ನಡೆಯಲಿದೆ. 'ಬಿ.ಇ' ಮಾಡಿ 'ಎಂ.ಟೆಕ್' ಮುಗಿಸಿರುವ ಸುರಭಿ, ಶ್ರೀನಿವಾಸ್ ಹಾಗೂ ಭಾವನಾ ಹತ್ವಾರ್ ರ ಏಕೈಕ ಪುತ್ರಿ.

ಫಿಕ್ಸ್ ಆಯ್ತು ಮದುವೆ ಡೇಟ್

ನವೆಂಬರ್ 26ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಸುರಭಿ ಮತ್ತು ಸಂತೋಷ್ ಆನಂದ್ ರಾಮ್ ಮುಂದಿನ ವರ್ಷದ ಪ್ರಾರಂಭದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಫೆಬ್ರವರಿ 20 ಹಾಗೂ 21 ರಂದು ಬೆಂಗಳೂರಿನಲ್ಲಿ ಮದುವೆ ಸಮಾರಂಭ ನಡೆಯಲಿದೆ

ಯಾರೆಲ್ಲಾ ಭಾಗಿ ಆಗ್ತಾರೆ ಮದುವೆಯಲ್ಲಿ?

ನಿರ್ದೇಶನ ಮಾಡಿರುವ ಎರಡು ಸಿನಿಮಾಗಳು ಬ್ಲಾಕ್ ಬಾಸ್ಟರ್. ಇಂತಹ ನಿರ್ದೇಶಕರ ನಿಶ್ಚಿತಾರ್ಥದಲ್ಲಿ ಚಿತ್ರರಂಗದ ಸಾಕಷ್ಟು ಜನರು ಭಾಗಿಯಾಗುವ ಸಾಧ್ಯತೆಗಳಿವೆ. ಎರಡು ಮನೆಯ ಸಂಬಂಧಿಕರು ಸೇರಿದಂತೆ 'ರಾಕಿಂಗ್ ಸ್ಟಾರ್ ಯಶ್' ಫ್ಯಾಮಿಲಿ ಹಾಗೂ ಚಿತ್ರರಂಗದ ದೊಡ್ಮನೆಯಿಂದ 'ಶಿವರಾಜ್ ಕುಮಾರ್' ಹಾಗೂ 'ಪುನೀತ್ ರಾಜ್ ಕುಮಾರ್ ನಿಶ್ಚಿತಾರ್ಥದಲ್ಲಿ ಭಾಗಿಯಾಗಲಿದ್ದಾರೆ.

English summary
Kannada Director Santhosh ananddram to get engaged on November 26th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada