For Quick Alerts
  ALLOW NOTIFICATIONS  
  For Daily Alerts

  ಗಂಡು ಮಗುವಿಗೆ ತಂದೆಯಾದ ಸಂತೋಷ್ ಆನಂದ್ ರಾಮ್

  |

  ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಸ್ವತಃ ಸಂತೋಷ್ ಆನಂದ್ ಅವರೇ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  '17-08-2020 ರಂದು ಗಂಡು ಮಗು ಜನಿಸಿದೆ. ನಿಮ್ಮೆಲ್ಲರ ಶುಭಾಶಯಗಳಿಗಾಗಿ ನನ್ನ ಕುಟುಂಬದ ಪರವಾಗಿ ಧನ್ಯವಾದಗಳು. ಅಮ್ಮ-ಮಗ ಕ್ಷೇಮವಾಗಿದ್ದರೆ. ನಿಮ್ಮ ಆಶೀರ್ವಾದ ನಮ್ಮ ಶ್ರೀರಕ್ಷೆ' ಎಂದು ಸಂತಸ ಹಂಚಿಕೊಂಡಿದ್ದಾರೆ. 21 ಫೆಬ್ರವರಿ 2018 ರಂದು ಬೆಂಗಳೂರಿನಲ್ಲಿ ಸುರಭಿ ಅವರನ್ನು ವಿವಾಹವಾಗಿದ್ದರು.

  ಶುಭಕೋರಿದ ಒಡೆಯರ್-ಕಾರ್ತಿಕ್ ಗೌಡ

  ಶುಭಕೋರಿದ ಒಡೆಯರ್-ಕಾರ್ತಿಕ್ ಗೌಡ

  ಸಂತೋಷ್ ಆನಂದ್ ರಾಮ್ ಕುಟುಂಬಕ್ಕೆ ಗಂಡು ಆಗಮಿಸಿದ ವಿಚಾರ ತಿಳಿದ ನಿರ್ದೇಶಕ ಪವನ್ ಒಡೆಯರ್ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಶುಭ ಕೋರಿದ್ದಾರೆ.

  2018ರಲ್ಲಿ ವಿವಾಹವಾಗಿದ್ದ ನಿರ್ದೇಶಕ

  2018ರಲ್ಲಿ ವಿವಾಹವಾಗಿದ್ದ ನಿರ್ದೇಶಕ

  ಫೆಬ್ರವರಿ 21, 2018 ರಲ್ಲಿ ಸಂತೋಷ್ ಆನಂದ್ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜಯನಗರದಲ್ಲಿ ನಡೆದ ವಿವಾಹ ಮಹೋತ್ಸವ ಸಮಾರಂಭದಲ್ಲಿ ಸುರಭಿ ಅವರನ್ನ ಹಿಂದೂ ಸಂಪ್ರದಾಯದಂತೆ ವರಿಸಿದ್ದರು. ಆರತಕ್ಷತೆ ಕಾರ್ಯಕ್ರಮದಲ್ಲಿ ಹಲವು ಸ್ಟಾರ್ ಗಳು ಭಾಗಿಯಾಗಿದ್ದರು. ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ, ರೋರಿಂಗ್ ಸ್ಟಾರ್ ಶ್ರೀ ಮುರಳಿ, ಬಹುಭಾಷಾ ನಟ ಶರತ್ ಕುಮಾರ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

  ಸಂತೋಷ್ ಆನಂದ್ ರಾಮ್ ಪತ್ನಿ ಕುರಿತು

  ಸಂತೋಷ್ ಆನಂದ್ ರಾಮ್ ಪತ್ನಿ ಕುರಿತು

  ಬಳ್ಳಾರಿ ಮೂಲದ ಸುರಭಿ ಹತ್ವಾರ್ 'ಬಿ.ಇ' ಮಾಡಿ 'ಎಂ.ಟೆಕ್' ಮುಗಿಸಿದ್ದಾರೆ. ಶ್ರೀನಿವಾಸ್ ಹಾಗೂ ಭಾವನಾ ಹತ್ವಾರ್ ರ ಏಕೈಕ ಪುತ್ರಿ. 2017ರ ನವೆಂಬರ್‌ ತಿಂಗಳಲ್ಲಿ ಬಳ್ಳಾರಿಯಲ್ಲಿ ನಿಶ್ಚಿತಾರ್ಥ ನಡೆದಿತ್ತು. 2018ರಲ್ಲಿ ಬೆಂಗಳೂರಿನಲ್ಲಿ ವಿವಾಹ ಜರುಗಿತ್ತು.

  ಯುವರತ್ನ ಚಿತ್ರದಲ್ಲಿ ಬ್ಯುಸಿ

  ಯುವರತ್ನ ಚಿತ್ರದಲ್ಲಿ ಬ್ಯುಸಿ

  ಪ್ರಸ್ತುತ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಯುವರತ್ನ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜಕುಮಾರ ಬಳಿಕ ಮತ್ತೆ ಪುನೀತ್ ಸಿನಿಮಾ ಮಾಡುತ್ತಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ. ಪೋಸ್ಟರ್ ಹಾಗೂ ಕಲಾವಿದರ ಆಯ್ಕೆಯಿಂದ ಯುವರತ್ನ ನಿರೀಕ್ಷೆ ಹೆಚ್ಚಿಸಿದೆ.

  English summary
  Kannada film director Santhosh ananddram family welcomes baby boy on august 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X