For Quick Alerts
  ALLOW NOTIFICATIONS  
  For Daily Alerts

  ಮಗನ ನಾಮಕರಣ ಸಂಭ್ರಮದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್

  |

  ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇತ್ತೀಚಿಗಷ್ಟೆ ಮುದ್ದು ಮಗನ ನಾಮಕರಣ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಅಂದಹಾಗೆ ಸಂತೋಷ್ ಆನಂದ್ ರಾಮ್ ದಂಪತಿ ಆಗಸ್ಟ್ ತಿಂಗಳಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

  ಮನೆಗೆ ಮುದ್ದಾದ ಮಗು ಆಗಮಿಸಿದ ಬಗ್ಗೆ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. '17-08-2020 ರಂದು ಗಂಡು ಮಗು ಜನಿಸಿದೆ. ನಿಮ್ಮೆಲ್ಲರ ಶುಭಾಶಯಗಳಿಗಾಗಿ ನನ್ನ ಕುಟುಂಬದ ಪರವಾಗಿ ಧನ್ಯವಾದಗಳು. ಅಮ್ಮ-ಮಗ ಕ್ಷೇಮವಾಗಿದ್ದರೆ. ನಿಮ್ಮ ಆಶೀರ್ವಾದ ನಮ್ಮ ಶ್ರೀರಕ್ಷೆ' ಎಂದು ಸಂತಸ ಹಂಚಿಕೊಳ್ಳುವ ಮೂಲಕ ತಂದೆಯಾದ ಸುದ್ದಿ ಬಹಿರಂಗ ಪಡಿಸಿದ್ದರು. ಇದೀಗ ಮಗನ ನಾಮಕರಣ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಮುಂದೆ ಓದಿ...

  ಪುನೀತ್-ಸಂತೋಷ್ ಆನಂದ್ ರಾಮ್ 'ಹ್ಯಾಟ್ರಿಕ್' ಪ್ರಾಜೆಕ್ಟ್ ಖಚಿತ ಪಡಿಸಿದ ಕಾರ್ತಿಕ್ ಗೌಡ

  ಪ್ರಯಾಗ್ ರಾಮ್ ಎಂದು ನಾಮಕರಣ

  ಪ್ರಯಾಗ್ ರಾಮ್ ಎಂದು ನಾಮಕರಣ

  ಮಗು ಜನಿಸಿ 4 ತಿಂಗಳ ಬಳಿಕ ಸಂತೋಷ್ ಆನಂದ್ ರಾಮ್ ದಂಪತಿ ಮುದ್ದು ಮಗನಿಗೆ ನಾಮಕರಣ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಅಂದಹಾಗೆ ಮಗನಿಗೆ ಯುವರತ್ನ ನಿರ್ದೇಶಕ ಪ್ರಯಾಗ್ ರಾಮ್ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಸಂತೋಷ್ ಆನಂದ್ ರಾಮ್ ಪೋಸ್ಟ್

  ಸಂತೋಷ್ ಆನಂದ್ ರಾಮ್ ಪೋಸ್ಟ್

  'ಪ್ರಯಾಗ್ ರಾಮ್ ನನ್ನು (Prayaag Ram) ಹರಸಿ ಆಶೀರ್ವದಿಸಿ, ನಿಮ್ಮ ಆಶೀರ್ವಾದ ನಮಗೆ ಶ್ರೀರಕ್ಷೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪತ್ನಿ ಮತ್ತು ಮಗನ್ನು ಎತ್ತಿಕೊಂಡಿರುವ ಫೋಟೋವನ್ನು ಸಂತೋಷ್ ಆನಂದ್ ರಾಮ್ ಶೇರ್ ಮಾಡಿದ್ದಾರೆ. ಈ ಸುಂದರ ಫೋಟೋಗೆ ಅಭಿಮಾನಿಗಳು ಮತ್ತು ಗಣ್ಯರಿಂದ ಶುಭಾಶಯ ಹರಿದುಬರುತ್ತಿದೆ.

  ಸಂತೋಷ್ ಆನಂದರಾಮ್ ರಾತ್ರೋರಾತ್ರಿ ನಟ ಜಗ್ಗೇಶ್ ಗೆ ಫೋನ್ ಮಾಡಿ ಹೇಳಿದ್ದೇನು?

  2018ರಲ್ಲಿ ಮದುವೆ

  2018ರಲ್ಲಿ ಮದುವೆ

  ಸಂತೋಷ್ ಆನಂದ್ ರಾಮ್, ಸುರಭಿ ಎನ್ನುವವರ ಜೊತೆ ಫೆಬ್ರವರಿ 21, 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಸಂತೋಷ್ ಆನಂದ್ ರಾಮ್ ಆರತಕ್ಷತೆ ಕಾರ್ಯಕ್ರಮದಲ್ಲಿ ಹಲವು ಸ್ಟಾರ್ ಗಳು ಭಾಗಿಯಾಗಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ದಂಪತಿ, ರೋರಿಂಗ್ ಸ್ಟಾರ್ ಶ್ರೀ ಮುರಳಿ, ಬಹುಭಾಷಾ ನಟ ಶರತ್ ಕುಮಾರ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಹಲವರು ಪಾಲ್ಗೊಂಡು ಸಂತೋಷ್ ಆನಂದ್ ರಾಮ್ ಗೆ ಶುಭಹಾರೈಸಿದ್ದರು.

  ಯುವರತ್ನ ಸಿನಿಮಾದಲ್ಲಿ ಸಂತೋಷ್ ಆನಂದ್ ರಾಮ್ ಬ್ಯುಸಿ

  ಯುವರತ್ನ ಸಿನಿಮಾದಲ್ಲಿ ಸಂತೋಷ್ ಆನಂದ್ ರಾಮ್ ಬ್ಯುಸಿ

  ಸಂತೋಷ್ ಆನಂದ್ ರಾಮ್ ಸದ್ಯ ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮಾಡಿ ಮುಗಿಸಿರುವ ಸಿನಿಮಾತಂಡ ರಿಲೀಸ್ ಗೆ ಎದುರು ನೋಡುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಏಪ್ರಿಲ್ 1ರಂದು ರಿಲೀಸ್ ಆಗುತ್ತಿದೆ. ಅಪ್ಪು ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷ್ ನ ಎರಡನೇ ಸಿನಿಮಾ ಇದಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾ ಬಳಿಕ ಮತ್ತೆ ಪುನೀತ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Diector Santhosh Ananddram held a naming ceremony for his son, Named Prayaag Ram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X