twitter
    For Quick Alerts
    ALLOW NOTIFICATIONS  
    For Daily Alerts

    2012ರಿಂದ 2022; ಅತಿಹೆಚ್ಚು ಬಾರಿ ಸೈಮಾ ಅತ್ಯುತ್ತಮ ಕನ್ನಡ ನಿರ್ದೇಶಕ ಪ್ರಶಸ್ತಿ ಪಡೆದ ಏಕೈಕ ನಿರ್ದೇಶಕರಿವರು!

    |

    ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಚೊಚ್ಚಲ ಬಾರಿಗೆ 2012ರಲ್ಲಿ ನಡೆಯಿತು. ಈ ವರ್ಷ ಹನ್ನೊಂದನೇ ಸೈಮಾ ಪ್ರಶಸ್ತಿ ಪ್ರದಾನವಾಗಿದ್ದು, ಕನ್ನಡದ ಪರ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯುವರತ್ನ ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ಪಡೆದರು, ರಾಜ್ ಬಿ ಶೆಟ್ಟಿ ನಿರ್ದೇಶಿಸಿದ್ದ ಗರುಡ ಗಮನ ವೃಷಭ ವಾಹನ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು, ಆಶಿಕಾ ರಂಗನಾಥ್ ಹಾಗೂ ಅಮೃತಾ ಅಯ್ಯಂಗಾರ್ ಅತ್ಯುತ್ತಮ ನಾಯಕಿಯರೆನಿಸಿಕೊಂಡರು ಹಾಗೂ ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

    ಇನ್ನು ಈ ಬಾರಿ ಹತ್ತು ಕೆಟಗರಿಗಳಲ್ಲಿ ನಾಮಿನೇಟ್ ಆಗುವ ಮೂಲಕ ಕನ್ನಡದ ಪರ ಅತಿಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆದ ಚಿತ್ರ ಎನಿಸಿಕೊಂಡಿದ್ದ ರಾಬರ್ಟ್ ಕೇವಲ ಮೂರು ಪ್ರಶಸ್ತಿಗಳನ್ನು ಮಾತ್ರ ಪಡೆಯಿತು. ಇನ್ನು ಚೌಕ ಚಿತ್ರಕ್ಕಾಗಿ ಅತ್ಯುತ್ತಮ ಉದಯೋನ್ಮಯಖ ಪ್ರಶಸ್ತಿಯನ್ನು ಪಡೆದಿದ್ದ ತರುಣ್ ಸುಧೀರ್ ಇದೇ ಮೊದಲ ಬಾರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.

    ಹೀಗೆ ಈ ಬಾರಿಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ತರುಣ್ ಸುಧೀರ್ ಪಾಲಾಗಿದ್ದು, 2012ರಿಂದ 2022ರವೆರೆಗೆ ನಡೆದಿರುವ ಎಲ್ಲಾ ಸೈಮಾ ಅವಾರ್ಡ್ಸ್‌ನಲ್ಲಿಯೂ ಕನ್ನಡದ ಪರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದವರಾರು ಎಂಬ ಮಾಹಿತಿ ಈ ಕೆಳಕಂಡಂತಿದೆ.

    ಸೈಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದ ಕನ್ನಡಿಗರು

    ಸೈಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದ ಕನ್ನಡಿಗರು

    2012 - ನಾಗಶೇಖರ್ - ಸಂಜು ವೆಡ್ಸ್ ಗೀತಾ

    2013 - ಎ ಪಿ ಅರ್ಜುನ್ - ಅದ್ಧೂರಿ

    2014 - ಪವನ್ ಒಡೆಯರ್ - ಗೂಗ್ಲಿ

    2015 - ಸಂತೋಷ್ ಆನಂದ್‌ರಾಮ್ - ಮಿ & ಮಿ ರಾಮಾಚಾರಿ

    2016 - ಉಪೇಂದ್ರ - ಉಪ್ಪಿ 2

    2017 - ರಿಷಭ್ ಶೆಟ್ಟಿ - ಕಿರಿಕ್ ಪಾರ್ಟಿ

    2018 - ಸಂತೋಷ್ ಆನಂದ್‌ರಾಮ್ - ರಾಜಕುಮಾರ

    2019 - ಪ್ರಶಾಂತ್ ನೀಲ್ - ಕೆಜಿಎಫ್ ಚಾಪ್ಟರ್ 1

    2020 - ವಿ ಹರಿಕೃಷ್ಣ - ಯಜಮಾನ

    2021 - ಪನ್ನಾಗಭರಣ - ಫ್ರೆಂಚ್ ಬಿರಿಯಾನಿ

    2022 - ತರುಣ್ ಸುಧೀರ್ - ರಾಬರ್ಟ್

    ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಎರಡು ಬಾರಿ ಗೆದ್ದದ್ದು ಸಂತೋಷ್ ಆನಂದ್‌ರಾಮ್

    ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಎರಡು ಬಾರಿ ಗೆದ್ದದ್ದು ಸಂತೋಷ್ ಆನಂದ್‌ರಾಮ್

    ಇನ್ನು 2015 ಮಿ & ಮಿ ರಾಮಾಚಾರಿ ಚಿತ್ರವನ್ನು ನಿರ್ದೇಶಿಸಿ ಇಂಡಸ್ಟ್ರಿ ಹಿಟ್ ನೀಡಿದ್ದ ಸಂತೋಷ್ ಆನಂದ್‌ರಾಮ್ ಅದೇ ಮೊದಲ ಬಾರಿಗೆ ನೇರವಾಗಿ ಸೈಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದರು. ಹಾಗೂ 2018ರಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ರಾಜಕುಮಾರ ಚಿತ್ರ ನಿರ್ದೇಶಿಸಿ ಮತ್ತೊಮ್ಮೆ ಇಂಡಸ್ಟ್ರಿ ಹಿಟ್ ನೀಡಿ ಮತ್ತೊಮ್ಮೆ ಸೈಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಈ ಮೂಲಕ ಸೈಮಾ ಇತಿಹಾಸದಲ್ಲೇ ಎರಡು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದ ಕನ್ನಡದ ಏಕೈಕ ನಿರ್ದೇಶಕ ಎಂಬ ಖ್ಯಾತಿಯನ್ನು ಹೊಂದಿದ್ದಾರೆ.

    ಉದಯೋನ್ಮುಖ ಸೇರಿಸಿದರೆ ಈ ಮೂವರು

    ಉದಯೋನ್ಮುಖ ಸೇರಿಸಿದರೆ ಈ ಮೂವರು

    ಇನ್ನು ಒಮ್ಮೆ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಹಾಗೂ ಮತ್ತೊಮ್ಮೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪ್ರಶಾಂತ್ ನೀಲ್ ( ಉಗ್ರಂ ಹಾಗೂ ಕೆಜಿಎಫ್ ಚಾಪ್ಟರ್ 1 ), ಪವನ್ ಒಡೆಯರ್ ( ಗೋವಿಂದಾಯ ನಮಃ ಹಾಗೂ ಗೂಗ್ಲಿ ) ಮತ್ತು ತರುಣ್ ಸುಧೀರ್ ( ಚೌಕ ಹಾಗೂ ರಾಬರ್ಟ್ ) ಪಡೆದಿದ್ದಾರೆ.

    English summary
    Santhosh Ananddram is the only Kannada director who have won SIIMA Best director for 2 times. Read on. ಎರಡು ಬಾರಿ ಸೈಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಕನ್ನಡದ ಏಕೈಕ ನಿರ್ದೇಶಕ ಸಂತೋಷ್ ಆನಂದ್‌ರಾಮ್
    Tuesday, September 13, 2022, 19:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X