For Quick Alerts
  ALLOW NOTIFICATIONS  
  For Daily Alerts

  ಸಂತೋಷ್ ಆನಂದರಾಮ್ ರಾತ್ರೋರಾತ್ರಿ ನಟ ಜಗ್ಗೇಶ್ ಗೆ ಫೋನ್ ಮಾಡಿ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಇತ್ತೀಚಿಗೆ ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ನಟ ಜಗ್ಗೇಶ್, ಅಧ್ಯಾತ್ಮದ ಬಗ್ಗೆ ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ.

  ಇತ್ತೀಚಿಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಅಧ್ಯಾತ್ಮದ ಬಗ್ಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದರು. ಇದೀಗ 'ರಾಜಕುಮಾರ' ಸಂತೋಷ್ ಆನಂದರಾಮ್ ಅಧ್ಯಾತ್ಮದ ಬಗ್ಗೆ ಮಾತನಾಡಲು ನಟ ಜಗ್ಗೇಶ್ ಗೆ ಫೋನ್ ಮಾಡಿದ್ದರಂತೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಚಿತ್ರರಂಗದಲ್ಲಿ ಹೆಸರು, ಹಣ ಗಳಿಸಿರುವ ನಟ ಜಗ್ಗೇಶ್ ಅಧ್ಯಾತ್ಮದತ್ತ ವಾಲುತ್ತಿರುವುದೇಕೆ?ಚಿತ್ರರಂಗದಲ್ಲಿ ಹೆಸರು, ಹಣ ಗಳಿಸಿರುವ ನಟ ಜಗ್ಗೇಶ್ ಅಧ್ಯಾತ್ಮದತ್ತ ವಾಲುತ್ತಿರುವುದೇಕೆ?

  "ರಾತ್ರಿ ಸಂತೋಷ್ ಆನಂದರಾಮ್ 1.45ರ ವರೆಗೆ ಸುಮಾರು 2 ಗಂಟೆಗಳ ಕಾಲ ಆಧ್ಯಾತ್ಮಿಕ ವಿಚಾರದ ಬಗ್ಗೆ ನನ್ನ ಜೊತೆ ಚರ್ಚೆ ಮಾಡುತ್ತಿದ್ದ. ಅದನಂತರ ಒಬ್ಬನೆ ಮೌನಕ್ಕೆ ಜಾರಿ ಕಣ್ಣುಮುಚ್ಚಿ ಕೂತು ಬಿಟ್ಟೆ. ಕಣ್ಣು ಬಿಟ್ಟಾಗ ಬೆಳಗಿನ ಜಾವ 4ಗಂಟೆ ಆಗಿತ್ತ. ಆಗ ನಿದ್ದೆಗೆ ಜಾರಿ 1 ಗಂಟೆಗೆ ಎದ್ದುಕೂತೆ." ಎಂದು ಬರೆದು ಫೋಟೋವನ್ನು ಶೇರ್ ಮಾಡಿದ್ದಾರೆ.

  "ಕಛೇರಿಯಿಂದ ಊಟಕ್ಕೆ ಮನೆಗೆ ಬಂದ ಪರಿಮಳ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದ ಚಿತ್ರ ಇದು. ಮನಸ್ಸನ್ನು ಕಟ್ಟಿಹಾಕಿ ಪಳಗಿಸಿಬಿಟ್ಟರೆ ದೇಹ ಪ್ರಶಾಂತವಾಗಿ ಮಲಗಿದಾಗ ರಾತ್ರಿ, ಎದ್ದಾಗ ಬೆಳಗು. ಒಟ್ಟಾರೆ ನಮ್ಮ ದೇಹ ದೇವಾಲಯದಂತೆ ಆಗಿಬಿಡುತ್ತದೆ. ಆಗ ದೇವರು ನಮ್ಮ ದೇಹವನ್ನೇ ವಾಸಸ್ಥಾನ ಮಾಡಿಕೊಳ್ಳುತ್ತಾನೆ. ನಂತರ ನಡೆಯುವುದೆಲ್ಲಾ ದೇವಮಯಂ." ಎಂದು ಬರೆದುಕೊಂಡಿದ್ದಾರೆ.

  ಅಂದ್ಹಾಗೆ ಸಂತೋಷ್ ಆನಂದರಾಮ್ ಸಹ ಅಧ್ಯಾತ್ಮದ ಕಡೆ ವಾಲುತ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸಂತೋಷ್ ಆನಂದರಾಮ್ ಸದ್ಯ ಯುವರತ್ನ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

  Bheemasena Nalamaharaja: ನನ್ನ ಸಿನಿಮಾದಲ್ಲಿ ನವರಸಗಳು ಇದೆ | Aravind Lyer | Rakshit | part 2 | Filmibeat

  ಇಂದು ಚಿತ್ರರಂಗದಲ್ಲಿ ದೊಡ್ಡ ಹೆಸರು, ಹಣಗಳಿಸಿರುವ ಜಗ್ಗೇಶ್ ಈ ಸ್ಥಾನಕ್ಕೆ ಬರಲು ಸಾಕಷ್ಟು ಶ್ರಮಿಸಿದ್ದಾರೆ. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಜಗ್ಗೇಶ್ ಅಸಾಧ್ಯವಾದ ಕನಸು ಕಂಡು, ಅದನ್ನು ನನಸಾಗಿಸಿಕೊಂಡು ಇಂದು ಸಾರ್ಥಕ ಬದುಕನ್ನು ಮುನ್ನಡೆಸುತ್ತಿದ್ದಾರೆ. ಇದನ್ನೆಲ್ಲಾಕೊಟ್ಟ ಕರ್ತನಿಗೆ ಧನ್ಯವಾದ ಅರ್ಪಿಸುವ ಕಾರ್ಯ ಮಾಡುತ್ತಿರುವುದಾಗಿ ಈ ಹಿಂದೆ ಹೇಳಿದ್ದರು.

  English summary
  Yuvarathnaa Director Santhosh Ananddram called Actor Jaggesh to talk about spirituality.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X