For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಜೊತೆ 'ಯುವರತ್ನ' ನಿರ್ದೇಶಕ ಸಂತೋಷ್

  |
  Yuvaratna Movie: ಗೋಲ್ಡನ್ ಸ್ಟಾರ್ ಜೊತೆ 'ಯುವರತ್ನ' ನಿರ್ದೇಶಕ ಸಂತೋಷ್

  ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಅಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ ಈಗ ಪುನೀತ್ ಜೊತೆಯಲ್ಲಿ ಯುವರತ್ನ ಎಂಬ ಸಿನಿಮಾ ಮಾಡ್ತಿದ್ದಾರೆ.

  ಈಗಾಗಲೇ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಧನಂಜಯ್, ವಸಿಷ್ಠ ಸಿಂಹ, ಸಯೇಶಾ ಸೈಗಲ್, ರಾಧಿಕಾ ಶರತ್ ಕುಮಾರ್ ಅಂತಹ ಸ್ಟಾರ್ ಕಲಾವಿದರಿದ್ದಾರೆ. ಹೀಗೆ, ಒಬ್ಬೊಬ್ಬರ ಸ್ಟಾರ್ ಗಳು ಪುನೀತ್ ಸಿನಿಮಾ ಸೇರುತ್ತಿರುವ ಇಂತಹ ಸಮಯದಲ್ಲಿ ಸಂತೋಷ್ ಆನಂದ್ ರಾಮ್ ಸರ್ಪ್ರೈಸ್ ನೀಡಿದ್ದಾರೆ.

  ಗಣೇಶ್ ಅಭಿನಯದ 'ವೇರ್ ಈಸ್ ಮೈ ಕನ್ನಡಕ' ಚಿತ್ರಕ್ಕೆ ಚಾಲನೆ

  ಗೋಲ್ಡನ್ ಸ್ಟಾರ್ ಗಣೇಶ್ ಅವರ ಭೇಟಿ ಮಾಡುವ ಮೂಲಕ ಹೊಸ ಚರ್ಚೆಗೆ ಕಾರಣವಾಗಿದ್ದಾರೆ. ಹೌದು, ಗೀತಾ ಚಿತ್ರೀಕರಣ ಮಾಡುತ್ತಿರುವ ಗಣೇಶ್ ಅವರನ್ನ, ಗೀತಾ ಸೆಟ್ ನಲ್ಲಿ ಸಂತೋಷ್ ಭೇಟಿ ಮಾಡಿದ್ದಾರೆ.

  ಗೋಲ್ಡನ್ ಸ್ಟಾರ್ ಮನೆಯಲ್ಲಿಂದು ಸಂಭ್ರಮದ ದಿನ

  ಇದು ಸಹಜ ಭೇಟಿ ಎನ್ನಲಾಗುತ್ತಿದ್ದರೂ, ಏನಾದರೂ ಸಂಥಿಂಗ್ ಇರಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಯಾಕಂದ್ರೆ, ಗಣೇಶ್ ಅವರ ಜೊತೆ ಸಂತೋಷ್ ಆನಂದ್ ರಾಮ್ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.

  ಈ ಹಿಂದೆ ಸಂತೋಷ್ ಮನೆಗೆ ನಟ ಗಣೇಶ್ ಕೂಡ ಭೇಟಿ ನೀಡಿದ್ದರು. ಹೀಗೆ ಪದೇ ಪದೇ ಭೇಟಿಯಾಗುತ್ತಿರುವುದನ್ನ ನೋಡಿದ್ರೆ, ಬಹುಶಃ ಮುಂದಿನ ದಿನದಲ್ಲಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಬರಬಹುದು ಅಥವಾ ಪುನೀತ್ ಅವರ ಯುವರತ್ನ ಚಿತ್ರದಲ್ಲಿ ಗಣೇಶ್ ಸರ್ಪ್ರೈಸ್ ನಟನೆ ಮಾಡಬಹುದು. ಬಟ್, ಅಧಿಕೃತವಾಗಿ ಇದು ನಿಜ ಆಗುತ್ತಾ ಎಂದು ಕಾದುನೋಡೋಣ.

  English summary
  Kannada star Director Santhosh Ananddram visited the sets of Golden Star Ganesh's Romantic Entertainer Geetha Today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X