For Quick Alerts
  ALLOW NOTIFICATIONS  
  For Daily Alerts

  ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ವ್ಯಕ್ತಿಯನ್ನು ಸ್ಮರಿಸಿದ ಸಂತೋಷ್ ಆನಂದ್ ರಾಮ್

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೂಲಕ ಸಂತೋಷ್ ಆನಂದ್ ರಾಮ್ ಚೊಚ್ಚಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಇಂಡಸ್ಟ್ರಿಗೆ ಪರಿಚಯವಾದರು. ಅದೂವರೆಗೂ ಕನ್ನಡ ಪ್ರೇಕ್ಷಕರಿಗೆ ಸಂತೋಷ್ ಬಗ್ಗೆ ತಿಳಿದಿರಲಿಲ್ಲ.

  ಅದಾದ ಬಳಿಕ ಪುನೀತ್ ರಾಜ್‌ಕುಮಾರ್ ಜೊತೆ 'ರಾಜಕುಮಾರ' ಸಿನಿಮಾ ಮಾಡಿ ಅಭೂತಪೂರ್ವ ಯಶಸ್ಸು ಕಂಡರು. ಮೊದಲೆರಡು ಚಿತ್ರಗಳಲ್ಲಿ ಸಕ್ಸಸ್ ಕಂಡ ನಿರ್ದೇಶಕ ಮತ್ತೆ ಪುನೀತ್ ಜೊತೆ 'ಯುವರತ್ನ' ಎಂಬ ಸಿನಿಮಾ ಮಾಡ್ತಿದ್ದಾರೆ. ಹೀಗೆ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ಡೈರೆಕ್ಟರ್ ಆಗುವುದಕ್ಕೂ ಮುಂಚೆ ಏನ್ ಮಾಡ್ತಿದ್ರು? ಅವರನ್ನು ಇಂಡಸ್ಟ್ರಿಗೆ ಪರಿಚಯ ಮಾಡಿದ್ದು ಯಾರು ಎಂಬ ಕುತೂಹಲಕ್ಕೆ ಅವರೇ ಉತ್ತರ ನೀಡಿದ್ದಾರೆ. ಮುಂದೆ ಓದಿ...

  ಹರ್ಷ ಮಾಸ್ಟರ್ ಗೆ ವಿಶ್ ಮಾಡಿದ ಸಂತೋಷ್

  ಹರ್ಷ ಮಾಸ್ಟರ್ ಗೆ ವಿಶ್ ಮಾಡಿದ ಸಂತೋಷ್

  ಬಹುಬೇಡಿಕೆಯ ನೃತ್ಯ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕ ಎ ಹರ್ಷ (ಹರ್ಷ ಮಾಸ್ಟರ್) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನ ನಿರ್ದೇಶಕ ಸಂತೋಷ್ ಆನಂದ್ ರಾಮ್ ತನ್ನನ್ನು ಇಂಡಸ್ಟ್ರಿಗೆ ಪರಿಚಯ ಮಾಡಿದ ನಿರ್ದೇಶಕನಿಗೆ ಶುಭಕೋರಿದ್ದಾರೆ.

  ದರ್ಶನ್ ಜೊತೆ ಈ ಮೊದಲೇ ಕೆಲಸ ಮಾಡಿದ್ರಂತೆ ಸಂತೋಷ್ ಆನಂದ್ ರಾಮ್.!ದರ್ಶನ್ ಜೊತೆ ಈ ಮೊದಲೇ ಕೆಲಸ ಮಾಡಿದ್ರಂತೆ ಸಂತೋಷ್ ಆನಂದ್ ರಾಮ್.!

  ಬೆನ್ನುತಟ್ಟಿದ ಹರ್ಷ ಮಾಸ್ಟರ್

  ಬೆನ್ನುತಟ್ಟಿದ ಹರ್ಷ ಮಾಸ್ಟರ್

  ''ನನ್ನನು ಚಿತ್ರರಂಗಕ್ಕೆ ಸಂಭಾಷಣೆಕಾರನಾಗಿ ಹಾಗು ಸಹಾಯಕ ನಿರ್ದೇಶಕನಾಗಿ ಪರಿಚಯಿಸಿ ಬೆನ್ನುತಟ್ಟಿದ ಹರ್ಷ ಮಾಸ್ಟರ್ ಗೆ ಹುಟ್ಟು ಹಬ್ಬದ ಶುಭಾಶಯಗಳು. ಭಜರಂಗಿ 2 ಅಭೂತಪೂರ್ವ ಯಶಸ್ಸು ಕಾಣಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ವಿಶ್ ಮಾಡಿದ್ದಾರೆ.

  ಚಿಂಗಾರಿಯಲ್ಲಿ ಕೆಲಸ ಮಾಡಿದ್ದ ಸಂತೋಷ್

  ಚಿಂಗಾರಿಯಲ್ಲಿ ಕೆಲಸ ಮಾಡಿದ್ದ ಸಂತೋಷ್

  ಗೆಳಯ, ಬಿರುಗಾಳಿ ನಂತರ ಹರ್ಷ ನಿರ್ದೇಶನ ಮಾಡಿದ್ದ ಮೂರನೇ ಚಿತ್ರ ಚಿಂಗಾರಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಸಹ ಬರಹಗಾರನಾಗಿ ಕೆಲಸ ಮಾಡಿದ್ದರು. ಯೋಗಾನಂದ್ ಮುದ್ಧಾನ್ ಪ್ರಮುಖ ಸಂಭಾಷಣೆಕಾರರಾಗಿದ್ದರು. ಅವರಿಗೆ ಸಹಾಯಕರಾಗಿ ಸಂತೋಷ್ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಸಂತೋಷ್ ಅವರ ಪ್ರತಿಭೆಯನ್ನು ಹರ್ಷ ಗುರುತಿಸಿದ್ದರು.

  ಭಜರಂಗಿ 2 ಚಿತ್ರದಲ್ಲಿ ಹರ್ಷ!

  ಭಜರಂಗಿ 2 ಚಿತ್ರದಲ್ಲಿ ಹರ್ಷ!

  ನೃತ್ಯ ನಿರ್ದೇಶಕನಾಗಿ ವೃತ್ತಿ ಆರಂಭಿಸಿದರೂ ನಿರ್ದೇಶಕನಾಗಿ ಬಡ್ತಿ ಪಡೆದು ಹಲವು ಪ್ರತಿಭೆಗಳನ್ನು ಪರಿಚಯ ಮಾಡಿರುವ ಖ್ಯಾತಿ ಹರ್ಷ ಅವರಿಗೆ ಸಲ್ಲುತ್ತದೆ. ಪ್ರಸ್ತುತ, ಭಜರಂಗಿ-2 ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವರಾಜ್ ಕುಮಾರ್ ಈ ಚಿತ್ರದ ನಾಯಕರಾಗಿದ್ದು, ಚಿತ್ರೀಕರಣ ಸಹ ನಡೆಯುತ್ತಿದೆ.

  English summary
  Kannada director Santhosh Ananddram has wish to a harsha's Birthday and he is grateful to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X