For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ' ಕಲೆಕ್ಷನ್ ಬಗ್ಗೆ ಅವರಿವರ ಮಾತು ನಂಬಬೇಡಿ: ನಿರ್ದೇಶಕರು ಕೊಟ್ರು ಪಕ್ಕಾ ಲೆಕ್ಕ

  By Bharath Kumar
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಬಾಕ್ಸ್ ಆಫೀಸ್ ಧೂಳೆಬ್ಬಿಸಿ ಮುನ್ನುಗ್ಗುತ್ತಿದೆ. 6 ವಾರ ಕಳೆದರು ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಕಲೆಕ್ಷನ್ ನಲ್ಲೂ ಅಬ್ಬರಿಸುತ್ತಿರುವ 'ರಾಜಕುಮಾರ' 100 ಕೋಟಿ ಗಳಿಸಿದೆ ಎಂದು ಗಾಂಧಿನಗರ ಪಂಡಿತರು ಮಾತನಾಡಿಕೊಳ್ಳುತ್ತಿದ್ದರು.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

  ಆದ್ರೆ, ಕನ್ನಡದಲ್ಲಿ 100 ಕೋಟಿ ಗಳಿಸುವುದು ಸಾಧ್ಯನಾ ಎಂಬ ಪ್ರಶ್ನೆ ಹಲವರನ್ನ ಕಾಡಿತ್ತು. ಈಗ ಇದಕ್ಕೆಲ್ಲ 'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ತೆರೆ ಎಳೆದಿದ್ದಾರೆ. 6 ವಾರಗಳ ಅಂತ್ಯಕ್ಕೆ 'ರಾಜಕುಮಾರ' ಎಷ್ಟು ಗಳಿಸಿದ್ದಾನೆ ಎಂಬ ಪಕ್ಕಾ ಲೆಕ್ಕವನ್ನ ಹೇಳಿದ್ದಾರೆ.

  'ರಾಜಕುಮಾರ' ನಿಜವಾದ ಕಲೆಕ್ಷನ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.....

  'ರಾಜಕುಮಾರ'ನ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ?

  'ರಾಜಕುಮಾರ'ನ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ?

  ನಿರ್ದೇಶಕರೇ ಸ್ವಷ್ಟಪಡಿಸಿರುವ ಪ್ರಕಾರ 'ರಾಜಕುಮಾರ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ 50 ಕೋಟಿ ಗಳಿಸುವತ್ತ ಮುನ್ನುಗ್ಗುತ್ತಿದೆ. ಇಲ್ಲಿಯವರೆಗೂ ಸುಮಾರು 46 ಕೋಟಿ ಗಳಿಸಿರುವ 'ರಾಜಕುಮಾರ' ನಿರ್ಮಾಪಕರ ಕೈಗೆ 31 ಕೋಟಿ ಸೇರಿದೆಯಂತೆ .['ರಾಜಕುಮಾರ'ನ ನಿಜವಾದ ಕಲೆಕ್ಷನ್ ಗುಟ್ಟು ರಟ್ಟು ಮಾಡಿದ ನಿರ್ದೇಶಕ]

  ಕನ್ನಡದ ನಂಬರ್ 1 ಸಿನಿಮಾ!

  ಕನ್ನಡದ ನಂಬರ್ 1 ಸಿನಿಮಾ!

  ದಾಖಲೆಗಳ ಪ್ರಕಾರ 'ರಾಜಕುಮಾರ' ಕನ್ನಡದಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆಯನ್ನ ಮಾಡಿದೆ. ಈ ಹಿಂದೆ 'ಮುಂಗಾರು ಮಳೆ' ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಗಳ ಕಲೆಕ್ಷನ್ ದಾಖಲೆಯನ್ನ ಬ್ರೇಕ್ ಮಾಡಿ ಹೊಸ ಇತಿಹಾಸ ಸೃಷ್ಠಿಸಿದೆ.['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]

  50 ಕೋಟಿಯತ್ತ 'ರಾಜಕುಮಾರ'ನ ಹೆಜ್ಜೆ!

  50 ಕೋಟಿಯತ್ತ 'ರಾಜಕುಮಾರ'ನ ಹೆಜ್ಜೆ!

  ಸದ್ಯ ಕನ್ನಡದ ಆಲ್ ಟೈಮ್ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಿರುವ 'ರಾಜಕುಮಾರ' ಈಗ 50 ಕೋಟಿ ಸನಿಹದಲ್ಲಿದ್ದಾನೆ. ಆದಷ್ಟೂ ಬೇಗ ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ಮಾಡಲಿದ್ದಾನೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮೂಲಕ ಕನ್ನಡದಲ್ಲಿ 50 ಕೋಟಿ ಗಳಿಸಿದ ಮೊದಲ ಸಿನಿಮಾ ಎಂಬ ಖ್ಯಾತಿಗೆ 'ರಾಜಕುಮಾರ' ಪಾತ್ರವಾಗಲಿದೆ.

  'ಹೆಬ್ಬುಲಿ' ಕಲೆಕ್ಷನ್ ಎಷ್ಟಾಗಿದೆ?

  'ಹೆಬ್ಬುಲಿ' ಕಲೆಕ್ಷನ್ ಎಷ್ಟಾಗಿದೆ?

  ಮತ್ತೊಂದೆಡೆ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ 100 ಕೋಟಿ ಗಳಿಸಿದೆ ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದ್ರೆ, 'ಹೆಬ್ಬುಲಿ'ಯ ಒಟ್ಟಾರೆ ಕಲೆಕ್ಷನ್ ಬಿಟ್ಟು ನಿಮಾರ್ಪಕರಿಗೆ 20 ಕೋಟಿ ಸಿಕ್ಕಿದೆಯಂತೆ. 'ರಾಜಕುಮಾರ' ಚಿತ್ರವೇ ಕನ್ನಡದ ಮೊದಲ 50 ಕೋಟಿ ಸಿನಿಮಾ ಆಗುತ್ತೆ ಎನ್ನುವುದಾದರೇ, ನಿಜಕ್ಕೂ 'ಹೆಬ್ಬುಲಿ' ಗಳಿಕೆ ಎಷ್ಟು ಎಂಬ ಪ್ರಶ್ನೆ ಕಾಡುತ್ತಿದೆ.

  ಕನ್ನಡಕ್ಕೆ ಹೆಮ್ಮ ತಂದ ಚಿತ್ರಗಳು

  ಕನ್ನಡಕ್ಕೆ ಹೆಮ್ಮ ತಂದ ಚಿತ್ರಗಳು

  ಕಲೆಕ್ಷನ್ ವಿಚಾರದಲ್ಲಿ ಹಿಂದೆ ಮುಂದೆ ಇದ್ದರೂ, 'ರಾಜಕುಮಾರ', 'ಹೆಬ್ಬುಲಿ', 'ಕಿರಿಕ್ ಪಾರ್ಟಿ', ಅಂತಹ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ. ಯಾಕಂದ್ರೆ, ಸ್ಯಾಂಡಲ್ ವುಡ್ ಮಾರುಕಟ್ಟೆಯನ್ನ ವಿಶ್ವಜಗತ್ತಿನಲ್ಲಿ ವಿಸ್ತರಿಸುವಂತೆ ಮಾಡುವಲ್ಲಿ ಈ ಚಿತ್ರಗಳು ಪಾತ್ರ ಹೆಚ್ಚಿದೆ.

  English summary
  Director Santhosh Anandram Says Kannada Movie Raajakumara Collects 46 Crore+ in 6 Weeks. it Will be First Movie to Collect 50 Crores in Kannada Industry. The Raajakumara Movie Directed By Director Santhosh Anandram and starring Puneeth rajkumar and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X