»   » ಸೆನ್ಸಾರ್ ನಲ್ಲಿ 'ಸಂತು'ಗೆ ಕ್ಲೀನ್ ಚಿಟ್, ಅ.28ಕ್ಕೆ ಅಬ್ಬರ ಶುರು

ಸೆನ್ಸಾರ್ ನಲ್ಲಿ 'ಸಂತು'ಗೆ ಕ್ಲೀನ್ ಚಿಟ್, ಅ.28ಕ್ಕೆ ಅಬ್ಬರ ಶುರು

Posted By:
Subscribe to Filmibeat Kannada

ಭಾವಿ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕಾಣಿಸಿಕೊಂಡಿರುವ 'ಸಂತು Straight Forward' ಸಿನಿಮಾ, ದೀಪಾವಳಿ ಹಬ್ಬಕ್ಕೆ ತೆರೆ ಕಾಣುತ್ತೆ ಅಂತ ಈ ಮೊದಲು ಸುದ್ದಿಯಾಗಿತ್ತು.

ಮಾತ್ರವಲ್ಲದೇ ಚಿತ್ರತಂಡದವರು ಥಿಯೇಟರ್ ಲಿಸ್ಟ್ ಕೂಡ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಮತ್ತು ಇಡೀ ಕರ್ನಾಟಕದಾದ್ಯಂತ 'ಸಂತು Straight Forward' ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ.[ಸ್ಟಾರ್-ವಾರ್, ಮಣ್ಣು-ಮಸಿ ಅಂತ್ಹೇಳಿ ನಟರ ಮಧ್ಯೆ ಹುಳಿ ಹಿಂಡಬೇಡಿ: ಕಿಚ್ಚ]


'Santhu Straight Forward' gets 'U' certificate, releasing on October 28

ಇದೀಗ ಸೆನ್ಸಾರ್ ಮಂಡಳಿ ಕೂಡ ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದು, 'ಯು' ಪ್ರಮಾಣಪತ್ರ ನೀಡುವ ಮೂಲಕ ರಿಲೀಸ್ ಮಾಡಲು ಅಧೀಕೃತ ಘೋಷಣೆ ಮಾಡಿದೆ. 'ಮಾಸ್ಟರ್ ಪೀಸ್' ನಂತರ ಯಶ್ ಅವರ ಸಿನಿಮಾ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ 'ಸಂತು Straight Forward' ಉಡುಗೊರೆ ದೊರೆತಂತಾಗಿದೆ.[ಈ ಬಾರಿ ತೆರೆ ಮೇಲೆ 'ದೀಪಾವಳಿ' ಆಚರಿಸ್ತಾರಾ ಭಾವಿ ದಂಪತಿ?]


'Santhu Straight Forward' gets 'U' certificate, releasing on October 28

ಕೆ.ಮಂಜು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಮಹೇಶ್ ರಾವ್ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


'Santhu Straight Forward' gets 'U' certificate, releasing on October 28

ಸಿನಿಮಾದ ಕೆಲಸಗಳು ಅರ್ಧದಷ್ಟು ಬಾಕಿ ಇದೆ, ಸೆನ್ಸಾರ್ ಬೇರೆ ಆಗಿಲ್ಲ, ಆಗಲೇ ಥಿಯೇಟರ್ ಲಿಸ್ಟ್ ಬೇರೆ ಬಿಟ್ಟಿದ್ದಾರೆ ಅಂತ ಅಭಿಮಾನಿಗಳು ಈ ಮೊದಲು ಆತಂಕಪಟ್ಟಿದ್ದರು. ಆದರೆ ಇದೀಗ ಚಿತ್ರಕ್ಕೆ ಸೆನ್ಸಾರ್ ಕೂಡ ಆಗಿದ್ದು, ಅಕ್ಟೋಬರ್ 28, ಮುಂದಿನ ಶುಕ್ರವಾರ ಇಡೀ ವಿಶ್ವದಾದ್ಯಂತ ಅದ್ಧೂರಿಯಾಗಿ ಈ ಸಿನಿಮಾ ತೆರೆ ಕಾಣಲಿದೆ.['ಸಂತು' ಅಲಿಯಾಸ್ ಯಶ್ ಕಡೆಯಿಂದ ಅಭಿಮಾನಿಗಳಿಗೆ ಸರ್ ಪ್ರೈಸ್]


'Santhu Straight Forward' gets 'U' certificate, releasing on October 28

ಅದೇ ದಿನದಂದು ಸುದೀಪ್-ಉಪೇಂದ್ರ ಜುಗಲ್ ಬಂದಿಯ 'ಮುಕುಂದ ಮುರಾರಿ' ಕೂಡ ತೆರೆ ಕಾಣುತ್ತಿದ್ದು, ಮೂವರು ಸ್ಟಾರ್ ನಟರನ್ನು ಬಿಗ್ ಸ್ಕ್ರೀನ್ ನಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

English summary
Kannada Movie 'Santhu Straight Forward' all set to releasing on October 28th. And now the movie gets 'U' certificate from the Censor Board. 'Santhu Straight Forward' features Kannada Actor Yash, Kannada Actress Radhika Pandit in the lead role. The movie is directed by Mahesh Rao and produced by K Manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada