»   » ಮದುವೆ ತಯಾರಿಯಲ್ಲಿ ಸಂತೋಷ್ ಆನಂದ್ ರಾಮ್

ಮದುವೆ ತಯಾರಿಯಲ್ಲಿ ಸಂತೋಷ್ ಆನಂದ್ ರಾಮ್

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮದುವೆಗೆ ಸಿದ್ದತೆ ಶುರುವಾಗಿದೆ.

ಕಳೆದ ವರ್ಷದ ಅಂತ್ಯದಲ್ಲಿ ಸುರಭಿ ಹತ್ವಾರ್ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂತೋಷ್ ಇದೇ ತಿಂಗಳು ಮಧುಮಗನಾಗಿ ಹಸೆಮಣೆ ಮೇಲೆ ಕೂರಲಿದ್ದಾರೆ. ಇಬ್ಬರು ಮನೆಯವರು ನಿಶ್ಚಯ ಮಾಡಿರುವಂತೆ ಸಂಪ್ರದಾಯಬದ್ದವಾಗಿ ಮದುವೆ ಸಮಾರಂಭ ನಡೆಯಲಿದೆ.

ಸಂತೋಷ್ ಆನಂದ್ ರಾಮ್ ಬೆನ್ನು ತಟ್ಟಿದ ಕಿಚ್ಚ ಸುದೀಪ್

ಸಂತೋಷ್ -ಸುರಭಿ ಮದುವೆ ಎಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ ಆಗಿರುತ್ತಾರೆ. ಅಭಿಮಾನಿಗಳು ಮದುವೆ ಸಂಭ್ರಮದಲ್ಲಿ ಭಾಗಿ ಆಗಬಹುದಾ? ಇನ್ನೂ ಅನೇಕ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಸಂತೋಷ್- ಸುರಭಿ ವಿವಾಹಕ್ಕೆ ದಿನಾಂಕ ನಿಗದಿ

ಕನ್ನಡ ಸಿನಿಮಾದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮದುವೆ ಇದೇ ತಿಂಗಳು ನಡೆಯುತ್ತಿದೆ. ಫೆಬ್ರವರಿ 20 ರಂದು ಬೆಂಗಳೂರಿನಲ್ಲಿ ಸುರಭಿ ಹತ್ವಾರ್ ಅವರ ಕೈ ಹಿಡಿಯಲಿದ್ದಾರೆ ಸಂತೋಷ್.

ಸಂತೋಷ್ ಮದುವೆಯಲ್ಲಿ ಸ್ಟಾರ್ ಸಮಾಗಮ

ಸಂತೋಷ್ ಹಾಗೂ ಸುರಭಿ ಅವರ ಕಲ್ಯಾಣದಲ್ಲಿ ಕನ್ನಡದ ಬಹುತೇಕ ಸ್ಟಾರ್ ಕಲಾವಿದರು ಭಾಗಿ ಆಗಲಿದ್ದಾರೆ. ರಾಜ್ ಕುಮಾರ್ ಕುಟುಂಬಸ್ಥರು , ಯಶ್, ಸುದೀಪ್, ದರ್ಶನ್ ಹೀಗೆ ಇನ್ನೂ ಅನೇಕರು ಬಂದು ಇಬ್ಬರಿಗೂ ಶುಭ ಹಾರೈಸಲಿದ್ದಾರೆ.

ಬಳ್ಳಾರಿ ಬೆಡಗಿ ಕೈ ಹಿಡಿಯಲಿರುವ ನಿರ್ದೇಶಕ

ಸಂತೋಷ್ ಆನಂದ್ ರಾಮ್ ರನ್ನ ಕೈ ಹಿಡಿಯುತ್ತಿರುವ ಸುರಭಿ ಬಳ್ಳಾರಿ ಮೂಲದವರು. ಹತ್ವಾರ್ ಫ್ಯಾಮಿಲಿಯ ಸುರಭಿ ಈಗಷ್ಟೇ ತಮ್ಮ ಶಿಕ್ಷಣವನ್ನ ಮುಗಿಸಿದ್ದಾರೆ.

ಮದುವೆ ನಂತರ ಸಿನಿಮಾ

ಸದ್ಯ ಮದುವೆಯ ಸಂಭ್ರಮದಲ್ಲಿರುವ ಸಂತೋಷ್ ಆನಂದ್ ರಾಮ್ ಅಪ್ಪು ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದರಂತೆ ಅಪ್ಪು ಹುಟ್ಟುಹಬ್ಬಕ್ಕೆ ಟೈಟಲ್ ಲಾಂಚ್ ಮಾಡುತ್ತಾರೆ ಎನ್ನುವ ನಿರೀಕ್ಷೆ ಈಗಾಗಲೇ ಹುಟ್ಟಿಕೊಂಡಿದೆ.

English summary
Kannada director Santosh Anand Ram and Surabhi will be married on February 21. Marriage will be held in Bangalore, Santosh Anand Ram director of the Rajakumara and Raachari films

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada