»   » ಭರ್ಜರಿ 'ಫೇಸ್ ಬುಕ್ ಲೈವ್' ಮಾಡಿ ಸಿಕ್ಕಿಬಿದ್ದ ಯುವಕ ಕೊಟ್ಟ ಕಾರಣ.!

ಭರ್ಜರಿ 'ಫೇಸ್ ಬುಕ್ ಲೈವ್' ಮಾಡಿ ಸಿಕ್ಕಿಬಿದ್ದ ಯುವಕ ಕೊಟ್ಟ ಕಾರಣ.!

Posted By:
Subscribe to Filmibeat Kannada

ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ರಾಜ್ಯಾದ್ಯಂತ ತೆರೆ ಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ, ನಿನ್ನೆ ಫಸ್ಟ್ ಡೇ ಫಸ್ಟ್ ಶೋ ಭರ್ಜರಿ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿ, ಇಡೀ ಸಿನಿಮಾ ಫೇಸ್ ಬುಕ್ ನಲ್ಲಿ ಪ್ರಸಾರವಾಗಿದೆ.

ಸಂತೋಷ್ ಎಂಬ ಯುವಕನೊಬ್ಬ 'ಭರ್ಜರಿ' ಚಿತ್ರವನ್ನ ಫೇಸ್ ಬುಕ್ ಲೈವ್ ನಲ್ಲಿ ಬಿಟ್ಟಿ ಪ್ರಸಾರ ಮಾಡಿದ್ದಾನೆ. ಇದರಿಂದ ನೂರಾರು ಜನರು ಫೇಸ್ ಬುಕ್ ನಲ್ಲೇ ಸಿನಿಮಾ ನೋಡಿದಂತಾಯಿತು. ನಂತರ ಆ ಯುವಕನನ್ನ ಹಿಡಿದು ಯಾಕೆ ಹೀಗೆ ಮಾಡಿದೆ ಅಂತ ಕೇಳಿದ್ರೆ, ಆ ಯುವಕ ಕೊಡುವ ಕಾರಣನೇ ಬೇರೆ.

ಅಷ್ಟಕ್ಕೂ, ಫೇಸ್ ಬುಕ್ ಲೈವ್ ಮಾಡಿದ ಯುವಕ ಯಾರು? ಸಿಕ್ಕಿಬಿದ್ದ ನಂತರ ಆ ಯುವಕ ಏನು ಹೇಳಿದ? ಮುಂದೆ ಓದಿ.....

'ಭರ್ಜರಿ' ಪೈರಸಿ ಕಾಟ

ಹುಬ್ಬಳ್ಳಿ ಮೂಲದ ಸಂತೋಷ್ ಎಂಬ ಯುವಕ ಚಿತ್ರಮಂದಿರದಲ್ಲಿ ಕುಳಿತು ತನ್ನ ಫೇಸ್ ಬುಕ್ ಖಾತೆಯ ಮೂಲಕ 'ಫಸ್ಟ್ ಡೇ ಫಸ್ಟ್ ಶೋ' ಎಂದು 'ಭರ್ಜರಿ' ಸಿನಿಮಾವನ್ನು ಲೈವ್ ಮಾಡಿದ್ದರು. ಇದರಿಂದ ಅರ್ಧದಷ್ಟು ಸಿನಿಮಾ ಬಿಟ್ಟಿ ಪ್ರಸಾರ ಮಾಡಿದ್ದರು.

ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಸಿನಿಮಾ ಬಿಟ್ಟಿ ಪ್ರಸಾರ.!

ಪೈರಸಿ ಮಾಡಿದ ಯುವಕ ಹೇಳಿದ್ದು ಹೀಗೆ

''ನನಗೆ ಗೊತ್ತಿರಲಿಲ್ಲ. ಈ ಮಟ್ಟದ ವಿವಾದ ಉಂಟಾಗುತ್ತೆ ಎಂಬ ಅರಿವು ಬಂದಿಲ್ಲ. ನಾನು ಅವರ ದೊಡ್ಡ ಅಭಿಮಾನಿ. ನಮ್ಮದು ಹುಬ್ಬಳಿ. ಈ ನಮ್ಮ ಕಡೆ ಶೂಟಿಂಗ್ ಆಗಿತ್ತು. ಅದನ್ನ ಮಾತ್ರ ನಾನು ಲೈವ್ ಮಾಡಿದ್ದೆ. ಪೂರ್ತಿ ಸಿನಿಮಾ ಮಾಡಿಲ್ಲ, ಬರಿ 20 ನಿಮಿಷ ಮಾತ್ರ ಶೂಟ್ ಮಾಡಿದ್ದೆ'' - ಸಂತೋಷ್, ಪೈರಸಿ ಮಾಡಿದ ಯುವಕ

ಕ್ಷಮೆ ಕೇಳಿದ ಸಂತೋಷ್

ಫೇಸ್ ಬುಕ್ ಲೈವ್ ಮಾಡಿದ ಪೈರಸಿ ಮಾಡಿದ್ದ ಸಂತೋಷ್ 'ಭರ್ಜರಿ' ಚಿತ್ರದ ನಿರ್ದೇಶಕ, ನಿರ್ಮಾಪಕರಿಗೂ ಕ್ಷಮೆ ಕೇಳಿ, ಮತ್ತೊಮ್ಮ ಈ ರೀತಿಯ ತಪ್ಪುಗಳು ಮಾಡುವುದಿಲ್ಲ ಎಂದಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದೇನು?

''ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇಂತಹ ಸಮಯದಲ್ಲಿ ಈ ರೀತಿ ಫೇಸ್ ಬುಕ್ ಲೈವ್ ಮೂಲಕ ಪೈರಸಿ ಮಾಡಿದ್ದು ತುಂಬ ನೋವು ತಂದಿದೆ. 'ಸೈಬರ್ ಕ್ರೈಂ' ಇಲಾಖೆಗೆ ದೂರು ನೀಡಿದ್ವಿ. 'ಭರ್ಜರಿ' ಚಿತ್ರದ ಆಡಿಯೋ ಮತ್ತು ವಿಡಿಯೋ ಹಕ್ಕು ಹೊಂದಿರುವ 'ಡಿ-ಬೀಟ್ಸ್' ಸಂಸ್ಥೆಯ ಮಾಲೀಕ ಹರಿಕೃಷ್ಣ ಅವರು ಕೂಡ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಕಂಪ್ಲೆಂಟ್ ವಾಪಸ್ ಪಡೆದ 'ಭರ್ಜರಿ' ಚಿತ್ರತಂಡ

ಕೊನೆಗೆ, ಸಂತೋಷ್ ಅವರು ಮಾಡಿದ ತಪ್ಪನ್ನ ಕ್ಷಮಿಸಿ, ಅವರ ವಿರುದ್ಧ ನೀಡಲಾಗಿದ್ದ ದೂರನ್ನ 'ಭರ್ಜರಿ' ಚಿತ್ರತಂಡ ವಾಪಸ್ ಪಡೆದುಕೊಂಡಿದೆ.

'ವಿಷ ಕೊಟ್ಟು ಸಾಯಿಸಿ ಸಂತೋಷ ಪಡಿ': 'ವಿಕೃತ'ರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಜಗ್ಗೇಶ್!

English summary
Santosh asked apology to Bharjari Movie Director Chethan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada