For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಮಹಿಮೆ, ಬಾಲಿವುಡ್ ಸೆಟ್‌ನಲ್ಲಿ 'ಲೀಲಾ', ಸಿಕ್ತು ಒಂದೊಳ್ಳೆ ಉಡುಗೊರೆ

  By ಫಿಲ್ಮಿಬೀಟ್ ಡೆಸ್ಕ್
  |

  ಒಂದು ಸಿನಿಮಾ ಹಿಟ್ ಆದರೆ ಆ ಸಿನಿಮಾದಿಂದ ಹಲವರ ಭವಿಷ್ಯ ಬದಲಾಗುತ್ತದೆ. ಒಂದೇ ಸಿನಿಮಾ ಸಾಕು ನಟನೊಬ್ಬ ಸ್ಟಾರ್ ಆಗಲು. ನಟರಿಗೆ ಅವಕಾಶಗಳ ಸುರಿಮಳೆಯಾಗಲು.

  'ಕಾಂತಾರ' ಸಿನಿಮಾ ಇದೀಗ ಸೂಪರ್-ಡೂಪರ್ ಹಿಟ್ ಆಗಿದ್ದು, ಸಿನಿಮಾದಲ್ಲಿ ನಟಿಸಿದ ಹಲವರ ಮೌಲ್ಯ ಹೆಚ್ಚಾಗಿದ್ದು, ಹಲವು ಹೊಸ ಅವಕಾಶಗಳು ಅರಸಿ ಬಂದಿವೆ. ಸಿನಿಮಾದ ನಿರ್ದೇಶಕ, ನಟ ರಿಷಬ್ ಶೆಟ್ಟಿಗಂತೂ ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಗಳಿಂದಲೂ ಅವಕಾಶಗಳು ಬಂದಿವೆ. ಆದರೆ ಯಾವುದನ್ನೂ ಒಪ್ಪಿಕೊಂಡಿಲ್ಲ ರಿಷಬ್.

  ಸಿನಿಮಾದ ನಾಯಕಿ ಸಪ್ತಮಿ ಗೌಡಗೆ ಸಹ ಅವಕಾಶಗಳ ಸುರಿಮಳೆಯೇ ಆಗುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಕೆಲವು ಸಿನಿಮಾಗಳಿಗೆ ಸಹಿ ಹಾಕಿರುವ ಸಪ್ತಮಿ ಬಾಲಿವುಡ್ ಸಿನಿಮಾ ಅವಕಾಶವನ್ನು ಸಹ ಬಾಚಿಕೊಂಡಿದ್ದಾರೆ.

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದು, ಇಂದು ಸಪ್ತಮಿ ಗೌಡ ಅವರು, ವಿವೇಕ್ ಅವರೊಟ್ಟಿಗೆ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸುತ್ತಿರುವ 'ದಿ ವ್ಯಾಕ್ಸಿನ್ ವಾರ್' ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ನಟಿಯೊಬ್ಬರು ಗಾಯಗೊಂಡಿದ್ದ ಕಾರಣ ಸಿನಿಮಾದ ಶೂಟಿಂಗ್ ನಿಲ್ಲಿಸಲಾಗಿತ್ತು. ಇದೀಗ ವಿವೇಕ್ ಅಗ್ನಿಹೋತ್ರಿಯೊಟ್ಟಿಗೆ ಸಪ್ತಮಿ ಗೌಡರ ಸೆಲ್ಫಿ ತೆಗೆಸಿಕೊಂಡು ಹಂಚಿಕೊಂಡಿದ್ದು, ಸಿನಿಮಾದ ಶೂಟಿಂಗ್ ಮತ್ತೆ ಪ್ರಾರಂಭವಾದಂತಿದೆ.

  ಸಿನಿಮಾ ಸೆಟ್‌ಗೆ ಆಗಮಿಸಿದ ಕರ್ನಾಟಕದ ಚೆಲುವೆ ಸಪ್ತಮಿ ಗೌಡಗೆ ಭರ್ಜರಿ ಸ್ವಾಗತ ದೊರೆತಂತಿದೆ. ಶೂಟಿಂಗ್‌ಗೆ ಆಗಮಿಸಿದ ಸಪ್ತಮಿಗೆ ನಟರಾಜನ ವಿಗ್ರಹವೊಂದನ್ನು ನೀಡಲಾಗಿದೆ. ಅದರ ಚಿತ್ರವನ್ನೂ ಸಹ ಸಪ್ತಮಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  Sapthami Gowda Shared photo with Vivek Agnihotri from The Vaccine War Shooting Set

  'ದಿ ವ್ಯಾಕ್ಸಿನ್ ವಾರ್' ಸಿನಿಮಾವು ಕೋವಿಡ್ ಸಮಯದಲ್ಲಿ ವ್ಯಾಕ್ಸಿನ್ ಸುತ್ತ ನಡೆದ ರಾಜಕೀಯ ಕುರಿತಾದ ಕತೆಯನ್ನು ಹೊಂದಿದೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿಯವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಈಗಾಗಲೇ ಕೆಲವು ದಿನಗಳಾಗಿದೆ. ಇತ್ತೀಚೆಗಷ್ಟೆ ಶೂಟಿಂಗ್ ಸೆಟ್‌ನಲ್ಲಿ ನಡೆದ ಅವಘಡದಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಪತ್ನಿ, ನಟಿ ಪಲ್ಲವಿ ಜೋಷಿಗೆ ಅಪಘಾತವಾಗಿ ಗಾಯಗೊಂಡ ಕಾರಣ ಚಿತ್ರೀಕರಣವನ್ನು ತಡೆ ಹಿಡಿಯಲಾಗಿತ್ತು. ಇದೀಗ ಚಿತ್ರೀಕರಣ ಮುಂದುವರೆದಂತಿದೆ.

  ಇನ್ನು ಸಪ್ತಮಿ ಗೌಡ ಅವರಿಗೆ 'ಕಾಂತಾರ' ಸಿನಿಮಾದ ಬಳಿಕ ಅದೃಷ್ಟ ಖುಲಾಯಿಸಿದಂತಿದೆ. 'ಕಾಂತಾರ'ಗೆ ಮುನ್ನ 'ಪಾಪ್‌ ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿ ನಟಿಸಿದ್ದ ಸಪ್ತಮಿ, ಇದೀಗ ನಟ ಅಭಿಷೇಕ್ ಅಂಬರೀಶ್‌ರ ಹೊಸ ಸಿನಿಮಾ 'ಕಾಳಿ'ಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾವನ್ನು ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆಗೆ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Sapthami Gowda shared photo with Bollywood director Vivek Agnihotri from The Vaccine War Shooting Set.
  Friday, January 20, 2023, 22:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X