'ಕೆಜಿಎಫ್ 2' ಸರಣ್ ಪಾತ್ರದ ಬಗ್ಗೆ ಬಂದಿದ್ದು ಸುಳ್ಳು ಸುದ್ದಿ
ಇತ್ತೀಚಿಗಷ್ಟೆ 'ಕೆಜಿಎಫ್ 2' ಅಡ್ಡದಿಂದ ಒಂದು ಸುದ್ದಿ ಒಂತು. ತಮಿಳು ನಟ ಸರಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಈ ವಿಷಯದ ಬಗ್ಗೆ ನಿರ್ಮಾಪಕ ಹಾಗೂ ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.
ರಾಕಿ ಬಾಯ್ ಯುವಕನಾಗಿರುವ ಪಾತ್ರದಲ್ಲಿ ಸರಣ್ ನಟಿಸುತ್ತಾರೆ ಎನ್ನುವ ಮಾತಿತ್ತು. ಆದರೆ, ಈ ಪಾತ್ರದಲ್ಲಿ ಸರಣ್ ನಟಿಸುತ್ತಿಲ್ಲವಂತೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಕಾರ್ತಿಕ್ ಗೌಡ ಸ್ವಷ್ಟನೆ ನೀಡಿದ್ದಾರೆ.
'ಕೆಜಿಎಫ್ 2' ಚಿತ್ರದಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ, ಅವರು ರಾಕಿಯ ಯವ್ವನವಸ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. ಸರಣ್ ಬೇರೊಂದು ಪಾತ್ರಕ್ಕಾಗಿ ಚಿತ್ರತಂಡ ಸೇರಿಕೊಂಡಿದ್ದಾರಂತೆ. ಆದರೆ, ಆ ಪಾತ್ರ ಯಾವುದು ಎನ್ನುವುದು ಇನ್ನು ಸಸ್ಪೆನ್ಸ್ ಆಗಿಯೇ ಇದೆ.

ಸರಣ್ ಈ ಹಿಂದೆ ನಟ ಧನುಷ್ ಜೊತೆಗೆ 'ವಡ ಚೆನ್ನೈ' ಸಿನಿಮಾದಲ್ಲಿ ನಟಿಸಿದ್ದರು. 'ಕೆಜಿಎಫ್ 2' ಅವರ ಮೊದಲ ಸಿನಿಮಾವಾಗಿದೆ. ಸಂಜಯ್ ದತ್ ಹಾಗೂ ರವೀನಾ ಟಂಡನ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











