»   » 'ಚಕ್ರವ್ಯೂಹ' ಭೇದಿಸಲಿರುವ ಪವರ್ ಸ್ಟಾರ್ ಪುನೀತ್

'ಚಕ್ರವ್ಯೂಹ' ಭೇದಿಸಲಿರುವ ಪವರ್ ಸ್ಟಾರ್ ಪುನೀತ್

Posted By:
Subscribe to Filmibeat Kannada

'ಚಕ್ರವ್ಯೂಹ'...ಈ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ರೆಬೆಲ್ ಸ್ಟಾರ್ ಅಂಬರೀಶ್. ಅದಕ್ಕೆ ಕಾರಣ 1983ರಲ್ಲಿ ತೆರೆಕಂಡ 'ಚಕ್ರವ್ಯೂಹ' ಸಿನಿಮಾ.

ವಿ.ಸೋಮಶೇಖರ್ ನಿರ್ದೇಶನದ 'ಚಕ್ರವ್ಯೂಹ' ಸಿನಿಮಾದಲ್ಲಿ ಡೇರಿಂಗ್ ಅಂಡ್ ಡ್ಯಾಶಿಂಗ್ ಆಗಿ ನಟಿಸಿದವರು ಮಂಡ್ಯದ ಗಂಡು ಅಂಬರೀಶ್. ಈಗ 'ಚಕ್ರವ್ಯೂಹ' ಚಿತ್ರದ ಬಗ್ಗೆ ನಾವು ಮಾತನಾಡುತ್ತಿರುವುದಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

Saravanan directorial Puneeth Rajkumar starrer movie titled as 'Chakravyuha'

ಕಾಲಿವುಡ್ ನ ಖ್ಯಾತ ನಿರ್ದೇಶಕ ಸರವಣನ್ ಆಕ್ಷನ್ ಕಟ್ ನಲ್ಲಿ ಅಪ್ಪು ನಟಿಸುತ್ತಿರುವ ವಿಷಯ ನಿಮಗೆ ಗೊತ್ತಿದೆ. ಈಗ ಈ ಚಿತ್ರಕ್ಕೆ 'ಚಕ್ರವ್ಯೂಹ' ಅಂತ ಶೀರ್ಷಿಕೆ ಇಡಲಾಗಿದೆ. [ಪುನೀತ್ ಮುಂದಿನ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕರು ಬರ್ತಾರೆ!]

ಈ ಚಿತ್ರದಲ್ಲಿ ಅಪ್ಪು ರೋಲ್ ಕೂಡ ರೆಬೆಲ್ ಆಗಿರುವ ಕಾರಣ 'ಚಕ್ರವ್ಯೂಹ' ಅಂತ ಟೈಟಲ್ ಫಿಕ್ಸ್ ಮಾಡಿದ್ದಾರಂತೆ ನಿರ್ದೇಶಕರು. ಅಸಲಿಗೆ, ವಿ.ರವಿಚಂದ್ರನ್ ತಂದೆ ವೀರಸ್ವಾಮಿ ಅವರ ಬಳಿ ಟೈಟಲ್ ರೈಟ್ಸ್ ಇತ್ತು. [ಪುನೀತ್ ಹೊಸ ಚಿತ್ರಕ್ಕೆ ಬಾಲಿವುಡ್ ಬೊಂಬೆ ಸೋನಂ]

ಈಗ ಅದೇ ಹೆಸರಲ್ಲಿ ಅಣ್ಣಾವ್ರ ಮಗ ಪುನೀತ್ ನಟಿಸುತ್ತಿರುವುದರಿಂದ ಕ್ರೇಜಿ ಸ್ಟಾರ್ ಕೂಡ ಖುಷಿಯಿಂದ ಟೈಟಲ್ ಬಿಟ್ಟುಕೊಟ್ಟಿದ್ದಾರೆ. ಸದ್ಯಕ್ಕೆ ಈ ಹೊಸ 'ಚಕ್ರವ್ಯೂಹ' ಶೂಟಿಂಗ್ ಹಂತದಲ್ಲಿದೆ.

English summary
Kollywood Director Saravanan directorial, Power Star Puneeth Rajkumar starrer movie is titled as 'Chakravyuha'. Rebel Star Ambareesh had also acted in the movie with the same name in 1983.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada