For Quick Alerts
  ALLOW NOTIFICATIONS  
  For Daily Alerts

  ಹುಟ್ಟೂರಿನ ಜಾತ್ರೆಯಲ್ಲಿ ಭಾಗಿಯಾಗಿ ಪಲ್ಲಕ್ಕಿ ಹೊತ್ತ ಸರ್ಜಾ ಕುಟುಂಬ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಅರ್ಜುನ್ ಸರ್ಜಾ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತ ಚಿರಂಜೀವಿ ಸರ್ಜಾ ಇತ್ತೀಚಿಗೆ ಹುಟ್ಟೂರಿನ ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತು ಸಾಕಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

  ಈ ದಿನವನ್ನು ಯಶ್ ಮರೆಯೋದಿಲ್ಲ | Yash | KGF 2 | Filmibeat Kannada

  ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಸೇರಿದಂತೆ ಅನೇಕರು ಚಾಲನೆ ನೀಡಿದರು. ಜಾತ್ರೆ ಬೆಳಗ್ಗೆ ಹೋಮ ದಿಂದ ಪ್ರಾರಂಭಗೊಂಡಿತು. ರಥೋತ್ಸವಕ್ಕೂ ಮುನ್ನ ಗರುಡ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ತೇರು ಎಳೆಯಲಾಯಿತು. ಮಂದೆ ಓದಿ..

  ಹುಟ್ಟೂರಿನಲ್ಲಿ ಸರ್ಜಾ ಕುಟುಂಬ

  ಹುಟ್ಟೂರಿನಲ್ಲಿ ಸರ್ಜಾ ಕುಟುಂಬ

  ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ಅಹೋಬಲ ಲಕ್ಷ್ಮಿ ನರಸಿಂಹ ದೇವರ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣ, ಅರ್ಜುನ್ ಸರ್ಜಾ ದಂಪತಿ ಸಮೇತರಾಗಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮೊದಲು ದೇವರಿಗೆ ಪೂಜೆ ಸಲ್ಲಿಸಿ ನಂತರ ಪಲ್ಲಕ್ಕಿ ಹೊತ್ತು ಸಾಗಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

  ಸರ್ಜಾ ಕುಟುಂಬ ಪಲ್ಲಕ್ಕಿ ಹೊತ್ತು ಸಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ. ಅಹೋಬಲ ಲಕ್ಷ್ಮಿ ನರಸಿಂಹ ದೇವರ ಬ್ರಹ್ಮರಥೋತ್ಸ ಅದ್ದೂರಿಯಾಗಿ ನಡೆಯುತ್ತೆ. ರಾಜ್ಯದ ನಾನಾಭಾಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಾರೆ.

  ಸರ್ಜಾ ಕುಟುಂಬದ ಸರಳತೆಗೆ ಅಭಿಮಾನಿಗಳು ಫಿದಾ

  ಸರ್ಜಾ ಕುಟುಂಬದ ಸರಳತೆಗೆ ಅಭಿಮಾನಿಗಳು ಫಿದಾ

  ಜಾತ್ರೆಯಲ್ಲಿ ಪಾಲ್ಲೊಂಡಿದ್ದ ಅರ್ಜುನ್ ಸರ್ಜಾ ಮತ್ತು ಧ್ರುವ ದಂಪತಿಯ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಜನಸಾಮಾನ್ಯರಂತೆ ಜಾತ್ರೆಯಲ್ಲಿ ಭಾಗಿಯಾಗಿ ಪಲ್ಲಕ್ಕಿ ಹೊತ್ತು ಸಾಗುವ ದೃಶ್ಯ ನೋಡಿ ಅಲ್ಲಿ ನೆರೆದಿದ್ದ ಭಕ್ತಾದಿಗಳು ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ ನೆಚ್ಚೆನ ನಟನನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳು ಅಭಿಮಾನಿಗಳು ಮುಗಿಬಿದ್ದಿದ್ದರು.

  ಪೊಗರು ರಿಲೀಸ್ ಗೆ ಸಜ್ಜಾಗುತ್ತಿದೆ

  ಪೊಗರು ರಿಲೀಸ್ ಗೆ ಸಜ್ಜಾಗುತ್ತಿದೆ

  ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷೆಯ ಪೊಗರು ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಯಾವಾಗ ಎನ್ನುವುದು ಬಹಿರಂಗವಾಗಿಲ್ಲ. ಸದ್ಯ ಕೊನೆ ಹಂತದ ಚಿತ್ರೀಕರಣದಲ್ಲಿದೆ ಪೊಗರು ಸಿಸಿಮಾ. ಸೆನ್ಸಾರ್ ಆದಮೇಲೆ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಮಾಡುವ ಸಾಧ್ಯತೆ ಇದೆ.

  English summary
  Arjuna Sarja and Dhruva Sarja participated in Lakshmi Narasimha Brahmarathotsava at Madhugiri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X