For Quick Alerts
  ALLOW NOTIFICATIONS  
  For Daily Alerts

  ಸರ್ವರ ವೀಕ್ಷಣೆಗೆ 'ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ' ಸಿದ್ಧ

  By Rajendra
  |

  ಅಚ್ಚುಕಟ್ಟಾಗಿ ನಿರ್ಮಾಣ ಆಗಿರುವ ಚಿತ್ರ 'ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ' ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಿ 'ಯು' ಅರ್ಹತಾ ಪತ್ರವನ್ನು ನೀಡಿದೆ. ಇದರೊಂದಿಗೆ 'ಸರ್ವಜ್ಞ' ಸರ್ವರು ವೀಕ್ಷಿಸಿ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವಂತಾಗಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಶಿವಕುಮಾರ್ ಅವರು ತಿಳಿಸುತ್ತಾರೆ.

  16ನೇ ಶತಮಾನದ ಸರ್ವಜ್ಞನ ನೆನಪು ಬುಲ್ ಟೆಂಪಲ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಂಭವಾಗಿ ಹಲವಾರು ಚಾರಿತ್ರಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ ಚಿತ್ರ. ಅಂದು ಅಣ್ಣಾವ್ರು 'ಸರ್ವಜ್ಞ' ಆಗಿ ಅಭಿನಯಿಸಿದ್ದರು. ಇಂದು ಸಂತೋಷ್ ಎಂಬ ನವಯುವಕ ಮಾತೃಭೂಮಿ ಲಾಂಛನದಲ್ಲಿ ಶಿವಕುಮಾರ್ ಅವರ ನಿರ್ಮಾಣ ನಿರ್ದೇಶನದಲ್ಲಿ ಮುಖ್ಯ ಪಾತ್ರವನ್ನು 'ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ' ಸಿನೆಮಾದಲ್ಲಿ ಅಭಿನಯಿಸಿದ್ದಾರೆ.

  ಬಾಲ ಸರ್ವಜ್ಞನಾಗಿ ಮಾಸ್ಟರ್ ಚಿರಾಗ್, ಸರ್ವಜ್ಞ ಆಗಿ ಸಂತೋಷ್, ಗುರುವಾಗಿ ಶ್ರೀನಿವಾಸಮೂರ್ತಿ. ಬಸವರಸ್ ಆಗಿ ರಾಮಕೃಷ್ಣ, ಮಾಲಿ ಆಗಿ ಪವಿತ್ರಾ ಲೋಕೇಶ್ ಹಾಗೂ ಇನ್ನಿತರರು ಅಭಿನಯಿಸಲಿದ್ದಾರೆ. ಡಾಕ್ಟರ್ ಬಿ ಎಸ್ ಸ್ವಾಮಿ ಅವರ ಸಂಭಾಷಣೆ, ರಾಜ್ ಭಾಸ್ಕರ್ ಅವರ ಸಂಗೀತ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

  1969ರಿಂದ ಸಿನಿಮಾ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶಿವಕುಮಾರ್ ಅವರು ಉತ್ತಂಗಿ ಚನ್ನಬಸಪ್ಪ ಅವರ ದಾಖಲಿಸಿರುವ 2500 'ಶ್ರೀ ಸರ್ವಜ್ಞ' ವಚನಗಳನ್ನು ಓದಿ ತಿಳಿದು ಈ ಸಿನಿಮಾಕ್ಕೆ 250 ವಚನಗಳನ್ನು ಐದು ಹಾಡುಗೊಳೊಂದಿಗೆ ಮುದುಕುತೋರೈ, ತಲಕಾಡ್, ಅಂಬಾಲಾ, ಗದಗ್, ಕಾಶಿ, ಗಯ, ಹಿಮಾಲಯ ಹಾಗೂ ಮೈಸೂರಿನ ಆನೆಗುಂದಿ ಯಲ್ಲಿ ಇರುವ ಪ್ರಾಚೀನ ಮನೆಯೊಂದರಲ್ಲಿ 42 ದಿವಸಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Sarvagna Mattomme Hutti Baa gets clean U certificate from censor board. The movie is about Kannada poet, pragmatist and philosopher Sarvagna. Shivakumar directed and produced the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X