For Quick Alerts
  ALLOW NOTIFICATIONS  
  For Daily Alerts

  'ಶಶಿಲಲಿತಾ ದಿ ಸ್ಟಾರ್ಮ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

  |

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಜೀವನಾಧಾರಿತ ಸಿನಿಮಾ ಮಾಡಲು ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದೀಗ ನಿರ್ದೇಶಕರೊಬ್ಬರು ಜಯಲಲಿತಾ ಬಯೋಪಿಕ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

  ಈ ಸಿನಿಮಾಗೆ 'ಶಶಿಲಲಿತಾ ದಿ ಸ್ಟಾರ್ಮ್' ಎಂಬ ಹೆಸರನ್ನು ಇಡಲಾಗಿದೆ. ತಮಿಳುನಾಡಿನ ರಾಜಕಾರಣಿ ಹಾಗೂ ಜಯಲಲಿತಾ ಆಪ್ತ ಗೆಳತಿ ಶಶಿಕಲಾ ಹೆಸರನ್ನು ಕೊಂಚ ಬದಲಾವಣೆ ಮಾಡಿ 'ಶಶಿಲಲಿತಾ ದಿ ಸ್ಟಾರ್ಮ್' ಎಂದು ಸಿನಿಮಾಗೆ ನಾಮಕರಣ ಮಾಡಿದ್ದಾರೆ.

  ಜಯಲಲಿತಾ ಪಾತ್ರಕ್ಕೆ ಕಂಗನಾ ಪಡೆದ ಸಂಭಾವನೆ ಇಷ್ಟೊಂದಾ ಜಯಲಲಿತಾ ಪಾತ್ರಕ್ಕೆ ಕಂಗನಾ ಪಡೆದ ಸಂಭಾವನೆ ಇಷ್ಟೊಂದಾ

  ಚಿತ್ರದ ಫಸ್ಟ್ ಲುಕ್ ಬಹಳ ವಿಶೇಷವಾಗಿದೆ. ಜಯಲಲಿತಾ ಹಾಗೂ ಶಶಿಕಲಾ ಇಬ್ಬರ ಫೋಟೋ ಅರ್ಧ ಇದೆ. ಚಿತ್ರದ ಟೈಟಲ್ ಕೂಡ ಇಬ್ಬರ ಹೆಸರನ್ನು ಸೇರಿಸಿ 'ಶಶಿಲಲಿತಾ' ಎಂದು ಇಡಲಾಗಿದೆ.

  ಜಯಂ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕೆ ಜಗದೀಶ್ವರ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದ್ದಾರೆ. ರಿಯಲ್ ಸ್ಟೋರಿಯನ್ನು ಈ ಸಿನಿಮಾದ ಮೂಲಕ ಜಯಲಲಿತಾ ಅವರ ಅನ್ ನೌನ್ ಸ್ಟೋರಿಯನ್ನು ಹೇಳಲಿದ್ದಾರಂತೆ.

  Big News: ಜಯಲಲಿತಾ ಬಗ್ಗೆ ಇನ್ನೊಂದು ಬಯೋಪಿಕ್: 'ಅಮ್ಮ'ನ ಪಾತ್ರದಲ್ಲಿ ಖ್ಯಾತ ನಟಿ Big News: ಜಯಲಲಿತಾ ಬಗ್ಗೆ ಇನ್ನೊಂದು ಬಯೋಪಿಕ್: 'ಅಮ್ಮ'ನ ಪಾತ್ರದಲ್ಲಿ ಖ್ಯಾತ ನಟಿ

  ಜಯಲಲಿತಾ ಅವರ ಇಡೀ ಜೀವನ ಈ ಚಿತ್ರದಲ್ಲಿ ಇರಲಿದ್ದು, ಬಾಲ್ಯ ಸಿನಿಮಾ, ರಾಜಕೀಯ ಮತ್ತು ಸಾವು ಹೀಗೆ ಎಲ್ಲ ಫಟ್ಟಗಳು ಒಳಗೊಂಡಿರಲಿದೆಯಂತೆ. ಜಯಲಲಿತಾ ಹಾಗೂ ಶಶಿಕಲಾ ಎರಡು ಪಾತ್ರಗಳು ಇಲ್ಲಿ ಪ್ರಮುಖವಾಗಿವೆ.

  ಅಂದಹಾಗೆ, 'ಶಶಿಲಲಿತಾ ದಿ ಸ್ಟಾರ್ಮ್' ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

  English summary
  Sasi Lalithaa the storm movie first look out. The movie is a biopic of tamil nadu ex chief minister Jayalalitha. The movie is directing by Jagadishwar Reddy

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X