»   » ನೀನಾಸಂ ಸತೀಶ್ ನಟನೆಯ 'ಗೋದ್ರಾ' ಚಿತ್ರದ ಶೂಟಿಂಗ್ ವೇಳೆ ಅವಘಡ!

ನೀನಾಸಂ ಸತೀಶ್ ನಟನೆಯ 'ಗೋದ್ರಾ' ಚಿತ್ರದ ಶೂಟಿಂಗ್ ವೇಳೆ ಅವಘಡ!

Posted By:
Subscribe to Filmibeat Kannada

ಮೊನ್ನೆ ಮೊನ್ನೆ ತಾನೇ ನಟ ಲೂಸ್ ಮಾದ ಯೋಗಿ ಮತ್ತು ಕೋಮಲ್ ನಟನೆಯ 'ಕೆಂಪೇಗೌಡ 2' ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿತ್ತು. ಇದೀಗ ಸತೀಶ್ ನೀನಾಸಂ ಅಭಿನಯದ 'ಗೋದ್ರಾ' ಚಿತ್ರದ ಚಿತ್ರೀಕರಣದಲ್ಲಿ ಅಂಥದ್ದೇ ಘಟನೆ ನಡೆದಿದೆ.

'ಗೋದ್ರಾ' ಚಿತ್ರದ ಚಿತ್ರೀಕರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿತ್ತು. ಕೈಮ್ಯಾಕ್ಸ್ ದೃಶ್ಯದ ಶೂಟಿಂಗ್ ಇದಾಗಿದ್ದು, ಬಾಂಬ್ ಬ್ಲ್ಯಾಸ್ಟ್ ದೃಶ್ಯವನ್ನು ಚಿತ್ರತಂಡ ಸೆರೆಹಿಡಿಯುತ್ತಿತ್ತು. ಈ ವೇಳೆ ಜೀಪ್ ನಲ್ಲಿ ಕುಳಿತಿದ್ದ ನಟ ಸತೀಶ್ ಅವರ ಹೊಟ್ಟೆಯ ಭಾಗಕ್ಕೆ ಗಾಜು ಚುಚ್ಚಿಕೊಂಡು ಗಾಯ ಆಗಿದೆ.

Sathish Neenasam injured while shooting for godhra movie.

ಚಿತ್ರೀಕರಣದ ವೇಳೆ ಬಾಂಬ್ ರಿವರ್ಸ್ ಆಗಿ ಬ್ಲಾಸ್ಟ್ ಆದ ಕಾರಣ ಜೀಪ್ ನಲ್ಲಿ ಹೋಗುತ್ತಿದ್ದ ಸತೀಶ್ ಹೊಟ್ಟೆಯ ಭಾಗಕ್ಕೆ ಗಾಜು ಬಂದು ಬಿದಿದ್ದೆ. ಸತೀಶ್ ಜೊತೆ ಸಹ ಕಲಾವಿದರೂ ಸಹ ಜೀಪ್ ನಲ್ಲಿ ಕುಳಿತಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Sathish Neenasam injured while shooting for godhra movie.

ಗಾಯಗೊಂಡಿರುವ ನಟ ನೀನಾಸಂ ಸತೀಶ್ ಅವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಕ್ಕೆ ಹೊಲಿಗೆ ಹಾಕಿದ್ದು, ವೈದ್ಯರು ಒಂದು ವಾರದ ವಿಶ್ರಾಂತಿಯನ್ನು ಪಡೆಯಲು ಸೂಚಿಸಿದ್ದಾರೆ. 'ಗೋದ್ರಾ' ನಂದೀಶ್ ನಿರ್ದೇಶನದ ಚಿತ್ರವಾಗಿದ್ದು, ಚಿತ್ರದ ಕೊನೆ ದಿನದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ.

English summary
Kannada Actor Sathish Neenasam has suffered injuries while shooting for his movie 'Godhra'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada