For Quick Alerts
  ALLOW NOTIFICATIONS  
  For Daily Alerts

  'ಬ್ರಹ್ಮಾಚಾರಿ'ಯಾಗ್ತಾರಂತೆ ನಟ ನೀನಾಸಂ ಸತೀಶ್

  |

  ನೀನಾಸಂ ಸತೀಶ್ ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 'ಅಯೋಗ್ಯ' ಮತ್ತು ಚಂಬಲ್ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ಇರುವ ಸತೀಶ್ ಈಗ 'ಬ್ರಹ್ಮಾಚಾರಿ'ಯಾಗ್ತಿದ್ದಾರಂತೆ. ಸತೀಶ್ ಯಾಕೆ ಬ್ರಹ್ಮಾಚಾರಿ ಆಗಲು ನಿರ್ಧರಿಸಿದ್ದಾರೆ ಅಂತ ಅಚ್ಚರಿ ಪಡಬೇಡಿ, ಇದು ರಿಯಲ್ ಅಲ್ಲ ರೀಲ್. ಸತೀಶ್ ಅಭಿನಯದ ಮುಂದಿನ ಸಿನಿಮಾದ ಹೆಸರು 'ಬ್ರಹ್ಮಾಚಾರಿ'

  ಹೌದು, ನೀನಾಸಂ ಸತೀಶ್ 'ಬ್ರಹ್ಮಾಚಾರಿ' ಎನ್ನುವ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಸತೀಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಬ್ರಹ್ಮಾಚಾರಿ' ಅಂತ ಟೈಟಲ್ ಇಟ್ಟಿರುವ ಚಿತ್ರತಂಡ '100 ಪರ್ಸೆಂಟ್ ವರ್ಜಿನ್' ಎನ್ನುವ ಸಬ್ ಟೈಟಲ್ ಇಟ್ಟಿದೆ.

  ಅಂದ್ಹಾಗೆ, 'ಬ್ರಹ್ಮಾಚಾರಿ' ಪಕ್ಕಾ ಕಾಮಿಡಿ ಸಿನಿಮಾ. ಈ ಸಿನಿಮಾಗೆ ನಿರ್ದೇಶಕ ಚಂದ್ರ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ 'ಬಾಂಬೆ ಮಿಠಾಯಿ' ಮತ್ತು 'ಡಬಲ್ ಇಂಜಿನ್' ಸಿನಿಮಾ ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ 'ಬ್ರಹ್ಮಾಚಾರಿ' ಸಿನಿಮಾ ಮೂಲಕ ಮೂರನೇ ಚಿತ್ರ ಕೈಗೆತ್ತಿಕೊಂಡಿದ್ದಾರೆ.

  'ಲವ್ ಇನ್ ಮಂಡ್ಯ' ಸಿನಿಮಾದ ನಂತರ ನಿರ್ಮಾಪಕ ಉದಯ್ ಮೆಹ್ತಾ ಮತ್ತು ಸತೀಶ್ ಎರಡನೇ ಬಾರಿಗೆ ಒಂದಾಗುತ್ತಿದ್ದಾರೆ. ಇನ್ನು ಈಗಾಗಲೆ ಎರಡು ದೊಡ್ಡ ಸಕ್ಸಸ್ ನೀಡಿರುವ ಸತೀಶ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

  ಹಾಗಾಗಿ, 'ಬ್ರಹ್ಮಾಚಾರಿ' ಸಿನಿಮಾ ಸತೀಶ್ ಪಾಲಿಗೆ ಬಹುಮುಖ್ಯವಾದ ಸಿನಿಮಾವಾಗಿದೆ. ಅದೇನೆ ಇದ್ದರು 'ಬ್ರಹ್ಮಾಚಾರಿ' ಆಗಲು ಹೊರಟಿರುವ ಸತೀಶ್ ಜೊತೆಗೆ ಸಿನಿಮಾದಲ್ಲಿ ಯಾರೆಲ್ಲ ಸಾಥ್ ನೀಡಲಿದ್ದಾರೆ ಎನ್ನುವುದು ಸದ್ಯದಲ್ಲೆ ಗೊತ್ತಾಗಲಿದೆ. ಯುಗಾದಿ ಹಬ್ಬಕ್ಕೆ ಸಿನಿಮಾ ಲಾಂಚ್ ಆಗಲಿದೆ.

  English summary
  Actor Satish Ninasam starrer next movie titled as 'Brahmachari'. Satisn and producer Uday Mehatha will collaborate for secend time after 'Love In Mandya Movie'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X