ಸೆಂಚುರಿ ಬಾರಿಸಿದ 'ಅಯೋಗ್ಯ' : ಸೋಮವಾರ ಸಂಭ್ರಮಾಚರಣೆ
ಇಂದು ಸಿನಿಮಾಗಳು 25, 50 ದಿನ ಓಡೋದೆ ಹೆಚ್ಚು. ಇಂತಹ ಸಂದರ್ಭದಲ್ಲಿ ಒಂದು ಸಿನಿಮಾ 100 ದಿನಗಳ ಗಡಿ ದಾಟುತ್ತಿದೆ. ಹೌದು, ಸ್ಯಾಂಡಲ್ ವುಡ್ 'ಅಯೋಗ್ಯ' ಈಗ ಸೆಂಚುರಿ ಬಾರಿಸಿದ್ದಾನೆ.
ಇಂದಿಗೆ ಸರಿಯಾಗಿ ಸಿನಿಮಾ ನೂರು ದಿನಗಳನ್ನು ಪೂರೈಸಲಿದೆ. ಈ ಸಂಭ್ರಮಾಚರಣೆಯನ್ನು ಸೋಮವಾರ ಚಿತ್ರತಂಡ ಮಾಡುತ್ತಿದೆ. ಬೆಂಗಳೂರಿನ ಕಲಾವಿದರ ಸಂಘದ ಹಾಲ್ ನಲ್ಲಿ ಅದ್ಧೂರಿ ಕಾರ್ಯಕ್ರಮಗಳು ನಡೆಯಲಿದೆ.
ನೂರು ದಿನದ ಸಂಭ್ರಮದ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ದೇಶಕ ಮಹೇಶ್ ತಮ್ಮ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

ಮತ್ತೊಂದು ವಿಶೇಷ ಅಂದರೆ, ಸಿನಿಮಾದ ಟ್ರೇಲರ್ ಇಂದು ಸಂಜೆ 6 ಗಂಟೆಗೆ ರಿಲೀಸ್ ಆಗಲಿದೆ. ಇದುವರೆಗೆ ಯಾವುದೇ ಟ್ರೇಲರ್ ಇಲ್ಲದೆ, ಸಿನಿಮಾ ಗೆದ್ದ ಮೇಲೆ ಟ್ರೇಲರ್ ಬಿಡಲಾಗುತ್ತಿದೆ.
ಒಂದು ಕಡೆ ನೂರು ದಿನದ ಆಚರಣೆಯಾದ್ರೆ, ಮತ್ತೊಂದು ಕಡೆ ನಾಳೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 4.30ಕ್ಕೆ ಸಿನಿಮಾ ಪ್ರಸಾರ ಆಗುತ್ತಿದೆ.
ಅಂದಹಾಗೆ, ನಟಿ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಪಾಲಿಗೆ ಮತ್ತೊಂದು ಯಶಸ್ಸನ್ನು ಈ ಸಿನಿಮಾ ನೀಡಿದೆ. ನಿರ್ಮಾಪಕ ಚಂದ್ರಶೇಖರ್ ಅವರ ಜೇಬನ್ನೂ ತುಂಬಿಸಿದೆ.


Click it and Unblock the Notifications











