»   » ಸತೀಶ್ ನೀನಾಸಂ ತಮಿಳು-ಹಿಂದಿ ಸಿನಿಮಾ ಮಾಡಲು 'ಸ್ಪೂರ್ತಿ' ಯಾರು?

ಸತೀಶ್ ನೀನಾಸಂ ತಮಿಳು-ಹಿಂದಿ ಸಿನಿಮಾ ಮಾಡಲು 'ಸ್ಪೂರ್ತಿ' ಯಾರು?

Posted By:
Subscribe to Filmibeat Kannada

ಕನ್ನಡದಲ್ಲಿ ಯಶಸ್ಸಿನ ನಾಯಕನಾಗಿ ಮಿಂಚುತ್ತಿರುವ ಸತೀಶ್ ನೀನಾಸಂ ಅವರು, ಬಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆದ್ರೆ, ಆ ಚಿತ್ರಗಳ ಬಗ್ಗೆ ವಿವರ ಬಿಟ್ಟುಕೊಟ್ಟಿರಲಿಲ್ಲ.

ಇದೀಗ, ಸತೀಶ್ ನೀನಾಸಂ ಅವರ ಚೊಚ್ಚಲ ತಮಿಳು ಚಿತ್ರದ ಬಗ್ಗೆ ಬಹಿರಂಗವಾಗಿದೆ. ತಮಿಳಿನ ಯಶಸ್ವಿ ಯುವ ನಿರ್ದೇಶಕರೊಬ್ಬರು ಸತೀಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅಷ್ಟಕ್ಕೂ, ಸತೀಶ್ ನೀನಾಸಂ ಅಭಿನಯಿಸುತ್ತಿರುವ ತಮಿಳು ಚಿತ್ರ ಯಾವುದು? ಸತೀಶ್ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಲು ಸ್ಪೂರ್ತಿಯಾಗಿದ್ದು ಯಾರು? ಮುಂದೆ ಓದಿ......

ನೈಜಕಥೆಗೆ ನಾಯಕ

ಸತೀಶ್ ನೀನಾಸಂ ಅಭಿನಯಿಸಲಿರುವ ತಮಿಳು ಚಿತ್ರ ಥ್ರಿಲ್ಲರ್ ಸಬ್ಜೆಕ್ಟ್. ಮಧುರೈನಲ್ಲಿ ನಡೆದ ರೌಡಿಯೊಬ್ಬನ ನೈಜ ಘಟನೆಯೊಂದನ್ನ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.

ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಮಂಡ್ಯದ ಹುಡುಗ ಸತೀಶ್ ನೀನಾಸಂ!

ಅನಿಶ್ ಆಕ್ಷನ್ ಕಟ್

ಸತೀಶ್ ಅವರ ಮೊದಲ ತಮಿಳು ಚಿತ್ರಕ್ಕೆ ಅನಿಶ್ ಎಂಬ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅನಿಶ್ ಈ ಹಿಂದೆ 'ತಿರುಮನಂ ಎನುಮ್ ನಿಕ್ಕಾ' (Thirumanam Ennum Nikkah) ಎಂಬ ಯಶಸ್ವಿ ಚಿತ್ರವನ್ನ ನಿರ್ದೇಶನ ಮಾಡಿದ್ದರು.

ತಾಂತ್ರಿಕ ತಂಡ ಹೀಗಿದೆ

ಅನಿಶ್ ನಿರ್ದೇಶನದ ಈ ಚಿತ್ರಕ್ಕೆ ಗಿಬ್ರಾನ್ ಸಂಗೀತ ನೀಡಲಿದ್ದಾರೆ. ಶನ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ. ಮತ್ತು ಕಾಶಿ ವಿಶ್ವನಾಥ್ ಅವರು ಸಂಕಲನ ಚಿತ್ರಕ್ಕಿದೆ.

ಸತೀಶ್ ಅವರ ಚಿತ್ರಗಳನ್ನ ನೋಡಿ ಮೆಚ್ಚುಗೆ

ಅಂದ್ಹಾಗೆ, ನಿರ್ದೇಶಕ ಅನಿಶ್ ಅವರು, ಸತೀಶ್ ಅವರ 'ಲೂಸಿಯಾ', 'ಲವ್ ಇನ್ ಮಂಡ್ಯ', 'ಡ್ರಾಮಾ' ಸೇರಿದಂತೆ ಹಲವು ಸಿನಿಮಾಗಳನ್ನ ನೋಡಿ ಮೆಚ್ಚಿಕೊಂಡಿದ್ದಾರೆ. ಸುಮಾರು 2 ವರ್ಷದಿಂದ ಈ ಸ್ಕ್ರಿಪ್ಟ್ ಸಿದ್ದಪಡಿಸಿದ್ದಾರಂತೆ.

ಸತೀಶ್ ಗೆ ಸುದೀಪ್ ಸ್ಪೂರ್ತಿ.!

ಇನ್ನು ಕನ್ನಡದಲ್ಲಿ ಮಿಂಚುತ್ತಿರುವ ಸತೀಶ್ ಅವರು ಈಗ ಹಿಂದಿ ಮತ್ತು ತಮಿಳು ಚಿತ್ರಗಳನ್ನ ಮಾಡಲು, ಕನ್ನಡದ ಕಿಚ್ಚ ಸುದೀಪ್ ಅವರ ಸ್ಪೂರ್ತಿ ಅಂತೆ. ಯಾಕಂದ್ರೆ, ಸುದೀಪ್ ಕೂಡ ಕನ್ನಡ, ತೆಲುಗು, ತಮಿಳು, ಹಿಂದಿ ನಂತರ ಈಗ ಹಾಲಿವುಡ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.

English summary
Kannada Actor Sathish Ninasam's tamil debut with director Anees, fame of 'thirumanam ennum nikkah' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X