'ಬ್ರಹ್ಮಚಾರಿ'ಯಾದ ಸತೀಶ್ ಅವತಾರ ಹೀಗಿದೆ ನೋಡಿ

ಸತೀಶ್ ನೀನಾಸಂ ಬ್ರಹ್ಮಚಾರಿಯಾಗಿ ಸುಮಾರು ದಿನಗಳೆ ಆಗಿವೆ. ಆದ್ರೆ ಕ್ವಾಟ್ವೆ ಸತೀಶ್ ಅವರ ಬ್ರಹ್ಮಚಾರಿ ಜೀವನ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಆದ್ರೀಗ ಸತೀಶ್ ಹೊಸ ಅವತಾರದ ಒಂದು ಲುಕ್ ಬಹಿರಂಗವಾಗಿದೆ.

ಹೌದು, ಸತೀಶ್ ನೀನಾಸಂ ಅಭಿನಯದ ಬಹುನಿರೀಕ್ಷೆಯ ಬ್ರಹ್ಮಚಾರಿ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಮೊದಲ ಬ್ರಹ್ಮಚಾರಿ ಆಗಿರುವ ಸತೀಶ್ ನಾಯಕಿ ಅದಿತಿ ಪ್ರಭುದೇವ ಅವರಿಂದ ತಪ್ಪಿಸಿಕೊಂಡು ಹೋಗುತ್ತಿರುವ ಫೋಸ್ಟ್ ಇದಾಗಿದೆ.

ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಚಿತ್ರದಲ್ಲಿ ಸತೀಶ್ ರಾಮನ ಭಕ್ತನಾಗಿರುತ್ತಾರೆ. ಅದಿತಿ ಪ್ರಭುದೇವ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಚಿತ್ರದಲ್ಲಿ ಜ್ಯೂನಿಯರ್ ರಾಕಿ ಭಾಯ್ ಅನ್ಮೋಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಿರಿಯ ನಟ ದತ್ತಣ್ಣ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

sathish ninasam starrer brahmachari film first look released

ಅಂದ್ಹಾಗೆ ಚಿತ್ರಕ್ಕೆ ಚಂದ್ರ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಬ್ರಹ್ಮಚಾರಿ' ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಟೈಟಲ್ ಜೊತೆಗೆ 100 ಪರ್ಸೆಂಟ್ ವರ್ಜಿನ್ ಎನ್ನುವ ಸಬ್ ಟೈಟಲ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹಳ್ಳಿ ಮತ್ತು ನಗರ ಎರಡು ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯದಲ್ಲೆ ಚಿತ್ರಪ್ರಿಯ ಮುಂದೆ ಬರಲಿದ್ದಾರೆ.

More from Filmibeat

English summary
Kannada actor sathish ninasam starrer brahmachari film first look released. This movie is directed by chandra mohan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X