»   » ಸತೀಶನ ಲವ್ ಇನ್ ಮಂಡ್ಯ, ಇದು ಕರ್ಣನ್ ಕಥೆ

ಸತೀಶನ ಲವ್ ಇನ್ ಮಂಡ್ಯ, ಇದು ಕರ್ಣನ್ ಕಥೆ

Posted By:
Subscribe to Filmibeat Kannada

ಯೋಗರಾಜ್ ಭಟ್ ಅವರ ಡ್ರಾಮಾ ಚಿತ್ರ ಹಿಟ್ ಆಗಿದ್ದೇ ತಡ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದ ಸತೀಶ್ ನೀನಾಸಂ ಫುಲ್ ಬಿಜಿಯಾಗಿದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ ನಾಲ್ಕು ಚಿತ್ರಗಳಿವೆ. ಅವುಗಳಲ್ಲಿ ಲೂಸಿಯಾ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಇನ್ನುಳಿದ ಮೂರು ಚಿತ್ರಗಳಲ್ಲಿ ಕ್ವಾಟ್ಲೆ ಸತೀಶ ಚಿತ್ರದ ಶೂಟಿಂಗ್ ಮುಗಿದಿದೆ. ಅಂಜದ ಗಂಡು ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದೇ ಗ್ಯಾಪ್ ನಲ್ಲಿ ಸತೀಶ್ ಅವರು ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದ ಹೆಸರು 'ಲವ್ ಇನ್ ಮಂಡ್ಯ'.

Love in Mandya

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಸಿನಿ ಸಾಹಿತಿ ಅರಸು ಅಂತಾರೆ. ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಇನ್ನು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಬಚ್ಚನ್ ನಿರ್ಮಿಮಾಪಕ ಉದಯ್ ಕೆ ಮೆಹ್ತಾ.

ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಂಡ್ಯದಲ್ಲಿ ನಡೆಯುವ ಲವ್ ಸ್ಟೋರಿ. ಮಂಡ್ಯದಲ್ಲಿ ನಡೆಯುವ ಈ ಮಧುರ ಪ್ರೇಮ ಕಾವ್ಯದ ಅಡಿಬರಹ 'ಕರ್ಣನ್ ಕಥೆ' ಎಂಬುದು. ಚಿತ್ರದ ಪೋಸ್ಟರ್ ಸಹ ವಿಭಿನ್ನವಾಗಿದ್ದು ಎಲ್ಲರನ್ನೂ ಆಕರ್ಷಿಸುತ್ತಿದೆ.

ಇನ್ನು ನಾಯಕಿ ಆಯ್ಕೆ, ಉಳಿದ ಪಾತ್ರವರ್ಗ, ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕು. ಕಥೆ, ಚಿತ್ರಕಥೆ ಜವಾಬ್ದಾರಿಯನ್ನೂ ಅರಸು ಅಂತಾರೆ ಅವರೇ ಹೊತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
A new Kannada film titled as 'Love in Mandya'. Neenasam Satish plays a lead role in the film directed by Arasu Anthare and Produced by Uday K Mehtha. The cast and crew yet to be finalised.
Please Wait while comments are loading...