»   » 'ಯಶ್-ರಾಧಿಕಾ' ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಬಿಚ್ಚಿಟ್ಟ ಕಹಾನಿ!

'ಯಶ್-ರಾಧಿಕಾ' ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಬಿಚ್ಚಿಟ್ಟ ಕಹಾನಿ!

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಅವರದ್ದು ಸುಮಾರು 1 ದಶಕದ ಪರಿಚಯ. ಒಂದೇ ಧಾರವಾಹಿ ಮೂಲಕ ವೃತ್ತಿ ಜೀವನ ಆರಂಭಿಸಿದ ಇವರಿಬ್ಬರು, ಒಂದೇ ಸಿನಿಮಾದ ಮೂಲಕ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದರು. ಈಗ ಇವರಿಬ್ಬರು ಒಟ್ಟಿಗೆ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ.

ಈಗಾಗಲೇ ಇವರಿಬ್ಬರ ಲವ್ ಸ್ಟೋರಿಯನ್ನ ಸ್ವತಃ ಯಶ್-ರಾಧಿಕಾ ಅವರೇ ಬಿಚ್ಚಿಟ್ಟಿದ್ದಾರೆ. ಆದ್ರೆ, ಆ ಸಂದರ್ಭ ಹೇಗಿತ್ತು ಅಂತ ಹೇಳಿರಲಿಲ್ಲ. ಬಟ್, ಈ ಸನ್ನಿವೇಶವನ್ನ ನಟ ನೀನಾಸಂ ಸತೀಶ್ ಬಹಿರಂಗ ಪಡಿಸಿದ್ದಾರೆ.['ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್ ]

'ಯಶ್-ರಾಧಿಕಾ' ಲವ್ ಶರುವಾಗಿದ್ದು ಎಲ್ಲಿ?

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕಳೆದ 5 ವರ್ಷಗಳಿಂದ ಲವ್ ಮಾಡುತ್ತಿದ್ದರಂತೆ. ಆದ್ರೆ, ಆ ಪ್ರೀತಿ ಹೊರಬಿದ್ದಿದ್ದು 'ಡ್ರಾಮಾ' ಟೈಮ್ ನಲ್ಲಂತೆ.

ಯಶ್-ರಾಧಿಕಾ ಲವ್ ಗೆ ಸತೀಶ್ ಸಾಕ್ಷಿ!

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಪ್ರೀತಿ ಹೇಗಿತ್ತು ಅಂತ ನೋಡಿದವರಲ್ಲಿ ನಟ ನೀನಾಸಂ ಸತೀಶ್ ಪ್ರಮುಖರು. ಯಾಕಂದ್ರೆ, ಯಶ್-ರಾಧಿಕಾ ಅವರ ಪ್ರೀತಿಯ ಪರಿಚಯ ಮೊದಲಾಗಿದ್ದು ಸತೀಶ್ ಅವರಿಗಂತೆ.

ಇಬ್ಬರ ಪ್ರೀತಿಯನ್ನ ಆಲಿಸುತ್ತಿದ್ದ ಸತೀಶ್

ಯಶ್ ಗೆ ತಿಳಿಯದಂತೆ ರಾಧಿಕಾ, ರಾಧಿಕಾಗೆ ತಿಳಿಯದಂತೆ ಯಶ್, ಸತೀಶ್ ಅವರ ಬಳಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ರಂತೆ. ಆಗ ಅದನ್ನ ಮಹಾನ್ ಥ್ರಿಲ್ಲರ್ ಸ್ಟೋರಿ ಥರಾ ಕೇಳಿಸಿಕೊಂಡಿದ್ರಂತೆ ಸತೀಶ್.

ಡ್ರಾಮಾ ಚಿತ್ರೀಕರಣದ ವೇಳೆ ಪ್ರೊಪೋಸ್!

'ಡ್ರಾಮಾ' ಚಿತ್ರದ ಚಿತ್ರೀಕರಣದ ವೇಳೆ ಯಶ್, ರಾಧಿಕಾ ಪಂಡಿತ್' ಅವರಿಗೆ ಪ್ರೊಪೋಸ್ ಮಾಡಿದ್ದರಂತೆ.

ಪ್ರೊಪೋಸ್ ಹೇಗಿತ್ತು ಗೊತ್ತಾ?

'ಡ್ರಾಮಾ' ಚಿತ್ರೀಕರಣದ ಗ್ಯಾಪ್‌ನಲ್ಲೇ ಒಮ್ಮೆ ಕಾರಿನ ಮೇಲೆ ಹೂವಿಟ್ಟು ತಮ್ಮ ಪ್ರೀತಿಯನ್ನು ಹೇಳಿಯೇಬಿಟ್ರಂತೆ ರಾಕಿಂಗ್ ಸ್ಟಾರ್. ಇನ್ನೂ ಪ್ರೊಪೋಸ್ ಮಾಡಿದ್ದು, ತಮ್ಮ ಮನಸ್ಸಿನಲ್ಲೇ ಇದ್ದ ಹುಡುಗ ಅಂದ್ಮೇಲೆ, ರಾಧಿಕಾ ಪಂಡಿತ್ ಅವರು ಕೂಡ ಒಪ್ಪಿಗೆ ಸೂಚಿಸಿದ್ದರಂತೆ.

ಪ್ರೀತಿಯಿಂದ ಮದುವೆ

ಹೀಗೆ, ಯಶ್-ರಾಧಿಕಾ ಪಂಡಿತ್ ತಮ್ಮ ಅರ್ಥಪೂರ್ಣವಾದ ಪ್ರೀತಿಯನ್ನ, ಈಗ ಜೀವನದ ಉದ್ದಕ್ಕೂ ಮುಂದುವರೆಸಲಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ ನೀನಾಸಂ ಸತೀಶ್.

English summary
Kannada Actor Satish Neenasam Reveal The Love Story of kannada Actor Yash and Actress Radhika Pandit. both are loveing each other in the time of Drama Movie Shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada