For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಹಿಡಿದು ಓಡಾಡುತ್ತಿರುವ ಸತೀಶ್ ಮತ್ತು ಹರಿಪ್ರಿಯಾ

  |

  ನಟ ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಇಬ್ಬರು ಜಗಮಗಿಸೋ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಹಿಡಿದು ಓಡಾಡುತ್ತಿದ್ದಾರೆ. ಇಬ್ಬರು ಮೈಸೂರಿನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದ್ಹಾಗೆ ಇಬ್ಬರು ಮೈಸೂರು ದಸರಾಗೆ ಹೋಗಿದ್ದಾರೆ ಅಂತ ಯೋಚಿಸಬೇಡಿ, ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಸತೀಶ್ ಮತ್ತು ಹರಿಪ್ರಿಯಾ ಮೈಸೂರಿನಲ್ಲಿದ್ದಾರೆ.

  ಹೌದು, ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದೆ. ದಸರಾ ಸಂಭ್ರಮದ ನಡುವೆಯೂ ಪೆಟ್ರೋಮ್ಯಾಕ್ಸ್ ಟೀಂ ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ. ಮೊದಲ ದಿನದ ಚಿತ್ರೀಕರಣದ ಫೋಟೋವನ್ನು ಸತೀಶ್ ಮತ್ತು ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  'ಪೆಟ್ರೋಮ್ಯಾಕ್ಸ್'ನಲ್ಲಿ ಸತೀಶ್ ನೀನಾಸಂ ಜೊತೆ ಹರಿಪ್ರಿಯಾ ರೊಮ್ಯಾನ್'ಪೆಟ್ರೋಮ್ಯಾಕ್ಸ್'ನಲ್ಲಿ ಸತೀಶ್ ನೀನಾಸಂ ಜೊತೆ ಹರಿಪ್ರಿಯಾ ರೊಮ್ಯಾನ್

  ಅಂದ್ಹಾಗೆ ಚಿತ್ರಕ್ಕೆ ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಕ್ಟೋಬರ್ 19ರಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಮೊದಲ ಬಾರಿಗೆ ನಟಿ ಹರಿಪ್ರಿಯಾ, ಸತೀಶ್ ಜೊತೆ ನಟಿಸುತ್ತಿದ್ದಾರೆ. ಈ ಬಗ್ಗೆ ಸತೀಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ನಮ್ಮ ಪ್ರೀತಿಯ ವಿಜಯ್ ಪ್ರಸಾದ್ ಅವರ ನಿರ್ದೇಶನದ, ಪೆಟ್ರೋಮ್ಯಾಕ್ಸ್. ಹರಿಪ್ರಿಯಾ ಅವರು ಕನ್ನಡದ ಉತ್ತಮ ನಟಿಯರಲ್ಲಿ ಒಬ್ಬರು ಅವರ ಜೊತೆ ಮೊದಲ ಬಾರಿ ಕೆಲಸ ಮಾಡುತ್ತಿರುವುದು ಸಂತಸದ ವಿಷಯ' ಎಂದು ಹೇಳಿದ್ದಾರೆ.

  ಅಂದ್ಹಾಗೆ ಹರಿಪ್ರಿಯಾ ಈ ಮೊದಲು ವಿಜಯ್ ಪ್ರಸಾದ್ ನಿರ್ದೇಶನದ ನೀರ್ ದೋಸೆ ಸಿನಿಮಾದಲ್ಲಿ ನಟಿಸಿದ್ದರು. ಕುಮುದಾ ಪಾತ್ರದ ಮೂಲಕ ಚಿತ್ರಪ್ರಿಯ ನಿದ್ದೆಗೆಡಿಸಿದ್ದರು. ಇದೀಗ ವಿಜಯ್ ಪ್ರಸಾದ್ ನಿರ್ದೇಶನದ ಎರಡನೇ ಸಿನಿಮಾದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

  ಪ್ರೀತಿಯಲ್ಲಿ ಕೃಷ್ಣ, ನೀತಿಯಲ್ಲಿ ಶ್ರೀರಾಮಚಂದ್ರ ನಮ್ಮ ಚಿರು | Prashanth Sambargi | Chiru | Filmibeat Kannada

  ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಬರುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಈ ಹಿಂದೆಯೆ ಅನೌನ್ಸ್ ಆಗಿತ್ತು. ಸಿದ್ಲಿಂಗು ಸಿನಿಮಾ ರಿಲೀಸ್ ಆದ ಬಳಿಕ ಈ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಲ್ಲಿಗೆ ನಿಂತುಹೋಗಿತ್ತು. ಬಳಿಕ ವಿಜಯ್ ಪ್ರಸಾದ್ ಪರಿಮಳ ಲಾಡ್ಜ್ ಸಿನಿಮಾ ಅನೌನ್ಸ್ ಮಾಡಿದ್ರು. ಅಲ್ಲದೆ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಇದೀಗ 'ಪರಿಮಳ ಲಾಡ್ಜ್' ಟೇಕಾಫ್ ಆಗುವ ಮೊದಲೇ ಪೆಟ್ರೇಮ್ಯಾಕ್ಸ್ ಸಿನಿಮಾ ಪ್ರಾರಂಭಿಸಿದ್ದಾರೆ.

  English summary
  The shooting Of Satish Ninasam And Haripriya Starrer Petromax Is Going On In Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X