»   » ಡಿಕೆಶಿ ಮನೆ ಮೇಲೆ ಐಟಿ ದಾಳಿ: ಉಪೇಂದ್ರ ಮಾಡಿರುವ ಟ್ವೀಟ್ ನೋಡಿ

ಡಿಕೆಶಿ ಮನೆ ಮೇಲೆ ಐಟಿ ದಾಳಿ: ಉಪೇಂದ್ರ ಮಾಡಿರುವ ಟ್ವೀಟ್ ನೋಡಿ

Posted By:
Subscribe to Filmibeat Kannada

ಕಳೆದ ಎರಡ್ಮೂರು ದಿನಗಳಿಂದ ಯಾವುದೇ ಕನ್ನಡ ಸುದ್ದಿ ವಾಹಿನಿ ಹಾಕಿದರೂ, ಕಣ್ಣಿಗೆ ರಪ್ ಅಂತ ರಾಚುವುದೇ 'ಪವರ್' ಮಿನಿಸ್ಟರ್ ಡಿ.ಕೆ.ಶಿವಕುಮಾರ್.! ಡಿ.ಕೆ.ಶಿವಕುಮಾರ್ ರವರ ಮನೆ, ಕಛೇರಿ ಮೇಲೆ ನಡೆದಿರುವ ಐಟಿ ದಾಳಿ ಬಗ್ಗೆ ನ್ಯೂಸ್ ಚಾನೆಲ್ ಗಳು ನಿರಂತರವಾಗಿ ಸುದ್ದಿ ಬಿತ್ತರಿಸುತ್ತಲೇ ಇವೆ.

ಡಿಕೆಶಿ ಮನೆಯಲ್ಲಿ ಅಷ್ಟು ಕೋಟಿ ಸಿಕ್ಕಿದೆ, ಇಷ್ಟು ಕೋಟಿ ಸಿಕ್ಕಿದೆ ಎಂಬ ಬ್ರೇಕಿಂಗ್ ನ್ಯೂಸ್ ಆಗಾಗ ಬರುತ್ತಿದೆ. ಅದೇ ಗ್ಯಾಪ್ ನಲ್ಲಿ ಡಿಕೆಶಿ ಮನೆಯಲ್ಲಿ ಹಣ ಸಿಕ್ಕಿರುವ ಬಗ್ಗೆ ಐಟಿ ಅಧಿಕಾರಿಗಳು ಇನ್ನೂ ಸ್ಪಷ್ಟನೆ ನೀಡಿಲ್ಲ ಎಂದೂ ನ್ಯೂಸ್ ಚಾನೆಲ್ ಗಳು ವರದಿ ಮಾಡುತ್ತಿವೆ. ಹಾಗಾದ್ರೆ, ಇವರೆಡರಲ್ಲಿ ಜನ ಯಾವುದನ್ನ ನಂಬಬೇಕು.? ನಮಗಂತೂ ಗೊತ್ತಿಲ್ಲ.

ಆದರೆ...ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಸತ್ಯ ಗೊತ್ತಾಗಬೇಕು ಎಂದು ಟ್ವಿಟ್ಟರ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಒತ್ತಾಯಿಸಿದ್ದಾರೆ. ಅದಕ್ಕೆ ಅವರೊಂದು ಐಡಿಯಾ ಕೂಡ ನೀಡಿದ್ದಾರೆ. ಮುಂದೆ ಓದಿರಿ...

ವಿಡಿಯೋ ರೆಕಾರ್ಡ್ ಮಾಡಿ...

''ರಾಜಕಾರಣಿಗಳ ಮೇಲೆ ಐಟಿ ರೇಡ್ ಆದಾಗ, ವಿಡಿಯೋ ರೆಕಾರ್ಡ್ ಮಾಡಿ ಪ್ರಸಾರ ಮಾಡಿ. ಯಾಕಂದ್ರೆ, ಸತ್ಯ ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ'' ಎಂದು ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ರಾಜಕೀಯ ತೊಲಗಲಿ, ಪ್ರಜಾಕೀಯ ಬರಲಿ

''ರಾಜಕಾರಣ, ರಾಜಕೀಯ, ರಾಜನೀತಿ ತೊಲಗಲಿ. ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ಬರಲಿ'' ಎಂದು ಉಪೇಂದ್ರ ತಮ್ಮದೇ ಸ್ಟೈಲ್ ನಲ್ಲಿ ಟ್ವೀಟಿಸಿದ್ದಾರೆ.

ರಾಜರಿಗೆ 'ಕೀ' ಬೇಡ

''ರಾಜರ ಕೈಗೆ ಕೀಲಿ ಕೊಡುವ ಬದಲು, ಪ್ರಜೆಗಳ ಕೈಲಿ ಕೀಲಿ ಕೊಡಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಕೈಯಲ್ಲಿ ಕೀಲಿ ಇರಬೇಕು, ರಾಜರ ಕೈಯಲ್ಲಿ ಅಲ್ಲ'' ಎಂಬುದು ಉಪೇಂದ್ರ ರವರ ಅಭಿಪ್ರಾಯ.

ಉಪ್ಪಿ ಹೇಳುವುದರಲ್ಲಿಯೂ ಅರ್ಥ ಇದ್ಯಾ.?

ತಮ್ಮ ಟ್ವೀಟ್ ಗಳ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ವ್ಯಕ್ತ ಪಡಿಸಿರುವ ಅಭಿಪ್ರಾಯದಲ್ಲಿ ಅರ್ಥ ಇದೆ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
''Say no to Rajakaarana'' tweets Upendra regarding IT Raid on DK Shiva Kumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada