»   » ಕನ್ನಡಕ್ಕೆ ಬ್ರಿಟಿಷ್ ಹಾಟ್ ಬೆಡಗಿ ಸ್ಕಾರ್ಲೆಟ್ ವಿಲ್ಸನ್

ಕನ್ನಡಕ್ಕೆ ಬ್ರಿಟಿಷ್ ಹಾಟ್ ಬೆಡಗಿ ಸ್ಕಾರ್ಲೆಟ್ ವಿಲ್ಸನ್

Posted By:
Subscribe to Filmibeat Kannada

ಬ್ರಿಟಿಷ್ ಹಾಟ್ ಬೆಡಗಿ ಹಾಗೂ ರೂಪದರ್ಶಿ ಸ್ಕಾರ್ಲೆಟ್ ಮೆಲ್ಲಿಸ್ ವಿಲ್ಸನ್ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ. ಈಕೆ ಕನ್ನಡ ಚಿತ್ರದಲ್ಲಿ ಸೊಂಟ ಬಳುಕಿಸುವುದು ಬಹುತೇಕ ಖಚಿತವಾಗಿದೆ. ಐಟಂ ಡಾನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಸ್ಕಾರ್ಲೆಟ್ ಪಾದಾರ್ಪಣೆಯಾಗುತ್ತಿದೆ.

ಇಷ್ಟಕ್ಕೂ ಈಕೆ ಅಭಿನಯಿಸಲಿರುವ ಚಿತ್ರ ಯಾವುದು ಗೊತ್ತೇ? ಹೇ ಸುಮ್ಕಿರ್ರಿ ಎಷ್ಟು ಸಲ ಅಂತಾ ಕಿವಿಗೆ ಹೂವಿನ ಮೇಲೆ ಹೂವು ಇಡುತ್ತೀರಾ ಎಂದು ಅಂದುಕೊಂಡರೂ ಪರ್ವಾಗಿಲ್ಲ! ಖಂಡಿತ ನಿಮ್ಮ ಊಹೆ ಕರೆಕ್ಟ್, ಈಕೆ ಅಡಿಯಿಡುತ್ತಿರುವುದು ಅಡ್ಡಡ್ಡಡ್ಡಾ 'ಪ್ರೇಮ್ ಅಡ್ಡ' ಚಿತ್ರಕ್ಕಾಗಿ.

Actress Scarlett Mellish Wilson

'ಪ್ರೇಮ್ ಅಡ್ಡ' ಶೀರ್ಷಿಕೆ ವಿವಾದದಲ್ಲಿ ಸಿಕ್ಕಿಕೊಂಡಿದ್ದು ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಸದ್ಯಕ್ಕೆ ಶೀರ್ಷಿಕೆ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಅಷ್ಟರಲ್ಲಾಗಲೇ ಪ್ರೇಮ್ ಗಾಂಧಿನಗರಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅದು ಸ್ಕಾರ್ಲೆಟ್ ವಿಲ್ಸನ್ ಎಂಬ ಬೆಡಗಿಯನ್ನು ಕರೆತರುತ್ತಿರುವುದಾಗಿ.

ಈಗಾಗಲೆ ಆಕೆಯನ್ನು ಸಂಪರ್ಕಿಸಲಾಗಿದೆಯಂತೆ. ಆಕೆಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಜುಲೈ 20ರಿಂದ ಹಾಡಿನ ಚಿತ್ರೀಕರಣಕ್ಕೆ ಆಕೆ ಆಗಮಿಸುತ್ತಿರುವುದಾಗಿ 'ಪ್ರೇಮ್ ಅಡ್ಡ' ಚಿತ್ರದ ನಿರ್ಮಾಪಕ ಮೇಕಾ ಮುರಳಿಕೃಷ್ಣ ತಿಳಿಸಿದ್ದಾರೆ.

ಸ್ಕಾರ್ಲೆಟ್ ವಿಲ್ಸನ್ ಹಾಡಿನ ಜೊತೆಗೆ ಚಿತ್ರದಲ್ಲಿ ಮತ್ತೊಂದು ಐಟಂ ಸಾಂಗ್ ಕೂಡ ಇರುತ್ತದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಮಹೇಶ್ ಬಾಬು. 'ಪ್ರೇಮ್ ಅಡ್ಡ' ಚಿತ್ರದಲ್ಲಿನ ಐಟಂ ಹಾಡುಗಳಿಗಾಗಿಯೇ ಬರೋಬ್ಬರಿ ಒಂದು ಕೋಟಿ ಹಣ ಸುರಿಯುತ್ತಿರುವುದಾಗಿ ಸುದ್ದಿ ಇದೆ. ನಂಬುವುದು ಬಿಡುವುದು ನಿಮಗೇ ಬಿಟ್ಟಿದ್ದು!

'ಅಡ್ಡ' ಚಿತ್ರಕ್ಕಾಗಿ ವಯಸ್ಕರ ಚಿತ್ರಗಳ ತಾರೆ ಸನ್ನಿ ಲಿಯೋನ್ ಅವರನ್ನು ಕರೆತರುತ್ತಿರುವುದಾಗಿ ಈ ಹಿಂದೆ ಕಾಗೆ ಹಾರಿಸಲಾಗಿತ್ತು. ಇನ್ನೇನು ಸನ್ನಿ ಲಿಯೋನ್ ಬಂದೇ ಬಿಟ್ಟರು ಎಂದು ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ಕೂತಿದ್ದರು. ಆದರೆ ಕಡೆಗೆ ಇದು ಕಾಗಕ್ಕ ಗುಬ್ಬಕ್ಕನ ಕತೆ ಎಂಬುದು ಗೊತ್ತಾಗುವಷ್ಟರಲ್ಲಿ ಚಿತ್ರಕ್ಕೆ ಬೇಕಾದ ಪ್ರಚಾರ ಧಾರಾಳವಾಗಿ ಸಿಕ್ಕಿತ್ತು.

ಹಾಗಂತ ಪ್ರೇಮ್ ಅವರನ್ನು ತಳ್ಳಿ ಹಾಕುವಂತೆಯೂ ಇಲ್ಲ. ಈ ಹಿಂದೆ ಅವರು ಖತರ್ನಾಕ್ ಐಟಂ ಬೆಡಗಿಯರಾದ ಯಾನಾ ಗುಪ್ತಾ ಹಾಗೂ ಮಲ್ಲಿಕಾ ಶೆರಾವತ್ ಅವರನ್ನು ಕನ್ನಡಕ್ಕೆ ಕರೆತಂದಿದ್ದರು. ಈ ಬಾರಿ ಸ್ಕಾರ್ಲೆಟ್ ಕನ್ನಡಕ್ಕೆ ಬರುವುದು ಗ್ಯಾರಂಟಿ ಎನ್ನಲಾಗಿದೆ. ಆಕೆ ಬರುವವರೆಗೂ ಕಾಯ್ತಾ ಕೂತಿರಿ. ಅಂದಹಾಗೆ ಈಕೆ ಹಿಂದಿಯ 'ಶಾಂಘೈ' ಚಿತ್ರದಲ್ಲಿ ತಮ್ಮ ಮೈಮಾಟ ಪ್ರದರ್ಶಿಸಿದ್ದರು. (ಏಜೆನ್ಸೀಸ್)

English summary
British sizzling beauty and actress Scarlett Mellish Wilson to do item song in Kannada film Prem Adda. The song shoot to be held on 20th July said the producer of the movie, Meka Muralikrishna.
Please Wait while comments are loading...