»   » ಇದೆಂತಹ ವಿಪರ್ಯಾಸ: ಕನ್ನಡ ಚಿತ್ರಗಳಿಗೆ ರಾಜಧಾನಿಯಲ್ಲೇ ಚಿತ್ರಮಂದಿರ ಇಲ್ಲ

ಇದೆಂತಹ ವಿಪರ್ಯಾಸ: ಕನ್ನಡ ಚಿತ್ರಗಳಿಗೆ ರಾಜಧಾನಿಯಲ್ಲೇ ಚಿತ್ರಮಂದಿರ ಇಲ್ಲ

Posted By:
Subscribe to Filmibeat Kannada

ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಉಳಿಗಾಲ ಇಲ್ಲ ಅಂತ ಎಲ್ಲರೂ ಬೊಂಬಡ ಹೊಡಿಯುತ್ತಿರುವ ಸಮಯದಲ್ಲೇ ಕನ್ನಡ ಚಿತ್ರಗಳಿಗೆ ಥಿಯೇಟರ್ ಇಲ್ಲ, ರಿಲೀಸ್ ಮಾಡೋದು ಎಲ್ಲಿ ಅಂತ ಚಿತ್ರತಂಡದವರು ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಿದೆ.

ಒಂದೆಡೆ ಕಲೆಕ್ಷನ್ ಇಲ್ಲ ಅಂತ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಚಿತ್ರಮಂದಿರಗಳು ಒಂದೊಂದೇ ಉರುಳುತ್ತಿರಬೇಕಾದರೆ, ಇತ್ತ ಪರಭಾಷಾ ಸಿನಿಮಾಗಳ ಭರಾಟೆಯಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಲು ಚಿತ್ರಮಂದಿರಗಳೇ ಇಲ್ಲದಂತಾಗಿದೆ.[ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!]


Screen Kannada movie 'U Turn' at Bhoomika theatre says KFCC

ಹೌದು ಬೆಂಗಳೂರಿನ ಗಾಂಧಿನಗರದಲ್ಲಿರುವ 'ಭೂಮಿಕಾ' ಚಿತ್ರಮಂದಿರಕ್ಕಾಗಿ ಕನ್ನಡ ಮತ್ತು ತೆಲುಗು ಚಿತ್ರಗಳು ಕಿತ್ತಾಡುವಂತಾಗಿದೆ. 'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನಿರ್ದೇಶನ ಮಾಡಿರುವ 'ಯೂ ಟರ್ನ್' ಚಿತ್ರ 'ಭೂಮಿಕಾ' ಚಿತ್ರಮಂದಿರದಲ್ಲಿ ಮೇ 20ರಂದು ಬಿಡುಗಡೆಯಾಗಬೇಕಿತ್ತು.['ಐನಾಕ್ಸ್ ಗರುಡ' ಅನ್ಯಾಯದ ಬಗ್ಗೆ ಗುಡುಗಿದ ಕನ್ನಡ ಸಿನಿ ಪ್ರೇಕ್ಷಕ.!]


Screen Kannada movie 'U Turn' at Bhoomika theatre says KFCC

ಆದರೆ ಮಹೇಶ್ ಬಾಬು ನಟನೆಯ ತೆಲುಗು 'ಬ್ರಹ್ಮೋತ್ಸವಂ' ಚಿತ್ರ ಕೂಡ ಮೇ 20 ರಂದೇ ತೆರೆಕಾಣುತ್ತಿದ್ದು, 'ಭೂಮಿಕಾ'ದಲ್ಲೇ ಬಿಡುಗಡೆ ಮಾಡಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ.[ಮಹೇಶ್ ಬಾಬು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]


Screen Kannada movie 'U Turn' at Bhoomika theatre says KFCC

ಮೊದಲು ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್' ಚಿತ್ರ 'ಭೂಮಿಕಾ' ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದು ಜಾಹೀರಾತು ಪ್ರಕಟವಾಗಿತ್ತು. ಆದರೆ ಮಧ್ಯದಲ್ಲಿ 'ಬ್ರಹ್ಮೋತ್ಸವಂ' ಬಿಡುಗಡೆ ಅಂತ ಜಾಹೀರಾತು ನೀಡಿತ್ತು.


ಇದರಿಂದ 'ಯೂ ಟರ್ನ್' ಚಿತ್ರದ ನಿರ್ಮಾಪಕರು ಹಾಗೂ ವಿತರಕರಾದ ಮಂಜು ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿ ಲಿಖಿತ ದೂರು ಸಲ್ಲಿಸಿದ್ದರು. ಈ ವಿಷಯವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದ್ದು, ಕನ್ನಡ ಚಿತ್ರಕ್ಕೆ ಮೊದಲು ಪ್ರಾಶಸ್ತ್ಯ ನೀಡಬೇಕು ಎಂದು ನಿರ್ಧರಿಸಲಾಗಿದೆ.[ಬಿಡುಗಡೆಗೂ ಮುನ್ನ ದಾಖಲೆ ಸೃಷ್ಟಿಸಿದ ಪವನ್ ರ 'ಯು ಟರ್ನ್']


Screen Kannada movie 'U Turn' at Bhoomika theatre says KFCC

ಇದೇ ವಾರ (ಶುಕ್ರವಾರ ಮೇ 20) ಎರಡು ಸಿನಿಮಾಗಳು ಭರ್ಜರಿಯಾಗಿ ತೆರೆ ಕಾಣುತ್ತಿದ್ದು, ಕೊನೆಗೂ ಭೂಮಿಕಾ ಯಾರಿಗೆ ಅದೃಷ್ಟ ದೇವತೆಯಾಗಿ ಒಲಿಯುತ್ತಾಳೆ ಅನ್ನೋದನ್ನ ಕಾದು ನೋಡಬೇಕಿದೆ.

English summary
'Lucia' fame director Pawan Kumar directorial Kannada movie 'U Turn' which had faced problem getting 'Bhoomika' theatre issue has been solved by KFCC. ' U Turn movie was refused to screen at Bhoomika theater making way for Mahesh Babu Telugu movie Bramahotsavam. Theater is managed by Gnaneshwar Ital.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada