»   » 2ನೇ ನಿಟ್ಟೆ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಏಪ್ರಿಲ್ 16ರಂದು ಚಾಲನೆ

2ನೇ ನಿಟ್ಟೆ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಏಪ್ರಿಲ್ 16ರಂದು ಚಾಲನೆ

Posted By:
Subscribe to Filmibeat Kannada

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 2ನೇ ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಏಪ್ರಿಲ್ 16 ರಂದು ಚಾಲನೆ ದೊರೆಯಲಿದೆ. ನಾಲ್ಕು ದಿನಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ, ಜರ್ಮನ್, ಫ್ರೆಂಚ್, ಚೀನಾ, ನೇಪಾಳಿ ಚಿತ್ರಗಳು ಪ್ರದರ್ಶನವಾಗಲಿದೆ.

ಸದಾಶಿವ ಸುವರ್ಣ ಅವರು ಈ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಲಿದ್ದು, ಹಿಂದಿಯ 'ಮುಕ್ತಿ ಭವನ' ಚಿತ್ರವೋ ಮೊದಲ ಸಿನಿಮಾವಾಗಿ ಪ್ರದರ್ಶನವಾಗಲಿದೆ. ಏಪ್ರಿಲ್ 16ರಿಂದ 19ನೇ ತಾರೀಖಿನವರೆಗೂ ನಿಟ್ಟೆ ಚಿತ್ರೋತ್ಸವ ನಡೆಯಲಿದ್ದು, ಮಂಗಳೂರಿನ 'ಭರತ್ ಸಿನಿಮಾಸ್' ಭರತ್ ಮಾಲ್ ನಲ್ಲಿ ಎಲ್ಲ ಸಿನಿಮಾಗಳು ಪ್ರದರ್ಶನವಾಗಲಿದೆ.

Second Edition of Nitte International Film Festival

ಸುಮಾರು 13 ಕನ್ನಡ ಸಿನಿಮಾಗಳು ಈ ಚಿತ್ರೋತ್ಸದಲ್ಲಿ ಪ್ರದರ್ಶನವಾಗಲಿದೆ. 'ಒಂದು ಮೊಟ್ಟೆ ಕಥೆ', 'ಗೋಧಿಬಣ್ಣ ಸಾಧಾರಣ ಮೈಕಟ್ಟು', 'ದಯವಿಟ್ಟು ಗಮನಿಸಿ', 'ಪುಟ ತಿರುಗಿಸಿ ನೋಡಿ', 'ರಾಜು', 'ಶುದ್ಧಿ', 'ಜೀರ್ಜಿಂಬೆ', 'ಮೂಡಲ ಸೀಮೆಯಲಿ', 'ಮಾರಿಕೊಂಡವರು', 'ಮೂಕಹಕ್ಕಿ', 'ಉಪ್ಪಿನ ಕಾಗದ', 'ದೇವರ ನಾಡಲ್ಲಿ', 'ನಾನು ಅವನಲ್ಲ ಅವಳು' ಆಯ್ಕೆಯಾಗಿವೆ.

Second Edition of Nitte International Film Festival

ಇನ್ನುಳಿದಂತೆ ಮಲಯಾಳಂ ಭಾಷೆಯ 8, ಗುಜರಾತಿ-ಕೊಂಕಿಣಿ-ಮರಾಠಿಯ 12 ಚಿತ್ರಗಳು, ಬೆಂಗಾಳಿ-ಒಡಿಸ್ಸಾ-ಅಸ್ಸಾಂನ 6 ಚಿತ್ರಗಳು, ತಮಿಳಿನ 5 ಚಿತ್ರಗಳು, ಹಿಂದಿಯ 9 ಚಿತ್ರಗಳು ಪ್ರದರ್ಶನವಾಗಲಿದೆ. ಇದರ ಜೊತೆಗೆ 5 ಸಾಕ್ಷ್ಯ ಚಿತ್ರಗಳು ಹಾಗೂ 5 ವಿದೇಶಿ ಚಿತ್ರಗಳು ಕೂಡ ಸ್ಕ್ರೀನಿಂಗ್ ಆಗಲಿದೆ.

Second Edition of Nitte International Film Festival

ಈ ಎಲ್ಲ ಸಿನಿಮಾಗಳ ಜೊತೆ ಹಿರಿಯ ನಿರ್ದೇಶಕರಿಂದ ಚರ್ಚಾ ಕಾರ್ಯಕ್ರಮ ಕೂಡ ಇರಲಿದೆ. ಪ್ರಶಸ್ತಿ ವಿಜೇತ ನಿರ್ದೇಶಕರು ಹಾಗೂ ಅನುಭವಿ ಸಿನಿಮಾ ರಂಗಕರ್ಮಿಗಳು ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ದೇಶಗಳ ಸುಮಾರು 30 ಜನ ಗಣ್ಯರು ಈ ಚಿತ್ರೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

English summary
Nitte University will be hosting its second International Film Festival (NIFF) from April 16th to 19, 2018 at Bharath Cinemas, Bharath Mall, Mangaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X