Just In
Don't Miss!
- News
ಕೋವಿಡ್ ಲಸಿಕೆ: ಉತ್ತರ ಕನ್ನಡಕ್ಕೆ ರಾಜ್ಯದಲ್ಲಿ 2ನೇ ಸ್ಥಾನ
- Sports
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅ, ಬ, ಪ, ಮ.... ಈ ಅಕ್ಷರಗಳಲ್ಲಿದೆ ಸ್ಟಾರ್ ನಿರ್ದೇಶಕರ ಶಕ್ತಿ
ಒಂದು ಸಿನಿಮಾಗೆ ಬಹು ಮುಖ್ಯವಾಗಿರುವುದು ಅದರ ಹೆಸರು. ಸಾಮಾನ್ಯವಾಗಿ ಒಂದು ಸಿನಿಮಾದ ಟೈಟಲ್ ನಿರ್ಧಾರ ಆಗುವುದು ಚಿತ್ರದ ಕಥಾ ವಸ್ತುವಿನ ಮೇಲೆ. ಕೆಲವು ಬಾರಿ ಕಥೆಯ ಜೊತೆಗೆ ನಾಯಕ ನಟ ಕೂಡ ಟೈಟಲ್ ಮೇಲೆ ಪರಿಣಾಮ ಬೀರುತ್ತಾರೆ.
ಆದರೆ, ಇದೆಲ್ಲವನ್ನು ಮೀರಿ ಕೆಲವು ನಿರ್ದೇಶಕರು, ಕೆಲವು ಅಕ್ಷರಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಆ ಅಕ್ಷರದಿಂದ ತಮ್ಮ ಸಿನಿಮಾ ಟೈಟಲ್ ಇಡುತ್ತಾರೆ. ಈ ರೀತಿಯಾದ ಟೈಟಲ್ ಗಳು, ಕೆಲವರ ಸಲ ನಿರ್ದೇಶಕರಿಗೆ ಯಶಸ್ಸಿ ನೀಡಿವೆ.
ಪರದೆ ಮೇಲೆ ಸ್ಟಾರ್ ನಟರ ಹೆಸರು ಮೊದಲ ಬಾರಿಗೆ ಮೂಡಿದ್ದು ಹೀಗೆ ನೋಡಿ!
ಅದೃಷ್ಟವೋ, ಅಕ್ಷರ ಮೇಲಿನ ಅಕ್ಕರೆಯೋ ಕೆಲ ನಿರ್ದೇಶಕರು ಮಾತ್ರ ಒಂದು ಅಕ್ಷರ ಮೇಲೆ ಒಲವು ಹೊಂದಿದ್ದಾರೆ. ನಿರ್ದೇಶಕ ಕಾಶೀನಾಥ್, ಎಸ್ ನಾರಾಯಣ್, ಸೀತಾರಾಮ್, ಯೋಗರಾಜ್ ಭಟ್, ಚೇತನ್ ಕುಮಾರ್ ತಮ್ಮ ಸಿನಿಮಾಗೆ ಕೆಲವು ಅಕ್ಷರಗಳಿಂದ ನಾಮಕರಣ ಮಾಡುತ್ತಿದ್ದರು. ಅವರ ವಿವರ ಇಲ್ಲಿದೆ.

'ಚ' ಅಂದ್ರೆ ಎಸ್ ನಾರಾಯಣ್ ರಿಗೆ ಇಷ್ಟ
'ಚ' ಅಕ್ಷರದ ಮೇಲೆ ಎಸ್ ನಾರಾಯಣ್ ಗೆ ವಿಶೇಷ ಪ್ರೀತಿ ಇದೆ. ಅವರ ಮೊದಲ ಸಿನಿಮಾ 'ಚೈತ್ರದ ಪ್ರೇಮಾಂಜಲಿ'. ಅಲ್ಲಿಂದ ನಾರಾಯಣ್ ಜೊತೆ ಸೇರಿದ 'ಚ' ನಂತರ, 'ಚಂದ್ರ ಚಕೋರಿ', 'ಚೆಲುವಿನ ಚಿತ್ತಾರ', 'ಚಂಡ', 'ಚೈತ್ರದ ಚಂದ್ರಮ', 'ಚೆಲುವಿನ ಚಿಲಿಪಿಲಿ', 'ಚೆಲ್ಲಿದರು ಸಂಪಿಗೆಯ', 'ಛತ್ರಿಗಳು ಸಾರ್ ಛತ್ರಗಳು' ಚಿತ್ರಗಳಲ್ಲಿ ಇತ್ತು.
ನಮ್ಮ ನಟ ನಟಿಯರ ರಿಯಲ್ ನೇಮ್ &ರೀಲ್ ನೇಮ್

'ಮ' ಅಕ್ಷರದ ಮೇಲೆ ಸೀತಾರಾಮ್ ಒಲವು
ನಿರ್ದೇಶಕ ಸೀತಾರಾಮ್ ಮೆಚ್ಚಿನ ಅಕ್ಷರ ಮ'. 'ಮಾನಸ ಸರೋವರ' ಅವರು ಸಂಭಾಷಣೆ ಬರೆದ ಮೊದಲ ಸಿನಿಮಾ. 'ಮತದಾನ' ಅವರ ನಿರ್ದೇಶನದ ಮೊದಲ ಸಿನಿಮಾ. 'ಮುಖಾಮುಖಿ', 'ಮಾಯಾಮೃಗ', 'ಮನ್ವಂತರ', 'ಮಳೆ ಬಿಲ್ಲು', 'ಮುಕ್ತ', 'ಮುಕ್ತ ಮುಕ್ತ', 'ಮಹಾ ಪರ್ವ', 'ಮಗಳು ಜಾನಕಿ' ಅವರ ನಿರ್ದೇಶನದಲ್ಲಿ ಬಂದ ಧಾರಾವಾಹಿಗಳು. ಇವೆಲ್ಲದರ ಹೆಸರು ಶುರು ಆಗುವುದು 'ಮ' ಅಕ್ಷರ ದಿಂದ.

'ಪ' ಹಾಗೂ 'ಮ' ಮೇಲೆ ಭಟ್ಟ್ರಿಗೆ ಪ್ಯಾರ್ ಆಗೈತೆ
ನಿರ್ದೇಶಕ ಯೋಗರಾಜ್ ಭಟ್ ಗೆ 'ಪ' ಹಾಗೂ 'ಮ' ಅಕ್ಷರ ಅಂದ್ರೆ ಬಲು ಪ್ರೀತಿ. 'ಮಣಿ' ಅವರ ಮೊದಲ ಸಿನಿಮಾ. 'ಮುಂಗಾರು ಮಳೆ' ಅವರ ಬದುಕು ಬದಲಿಸಿದ ಸಿನಿಮಾ. ಇದರ ಜೊತೆಗೆ ಬಂದ 'ಮನಸಾರೆ', 'ಮುಗುಳು ನಗೆ' ಕೂಡ ಶುರು ಆಗುವುದು 'ಮ'ದಿಂದ. ಇನ್ನು 'ಪಂಚರಂಗಿ', 'ಪರಮಾತ್ಮ', 'ಪರಪಂಚ' (ನಿರ್ಮಾಣದ ಚಿತ್ರ), 'ಪಂಚತಂತ್ರ' ಚಿತ್ರಗಳ ಹೆಸರು ಶುರು ಆಗುವುದು 'ಪ' ದಿಂದ.

'ಅ' ಕಾಶೀನಾಥ್ ರಿಗೆ ಹತ್ತಿರ
ನಿರ್ದೇಶಕ, ನಟ ಕಾಶೀನಾಥ್ ರಿಗೆ 'ಅ' ಹತ್ತಿರವಾದ ಅಕ್ಷರ. 'ಅಪರೂಪದ ಅತಿಥಿಗಳು' ಅವರ ಮೊದಲ ನಿರ್ದೇಶನದ ಸಿನಿಮಾ. 'ಅನುಭವ', 'ಅನಾಮಿಕ', 'ಅಜಗಜಾಂತರ', 'ಅನಂತನ ಅವಾಂತರ', 'ಅವಳೇ ನನ್ನ ಹೆಂಡ್ತಿ', 'ಅಪರಿಚಿತ', 'ಅದೃಷ್ಟ ರೇಖೆ', 'ಅವನೇ ನನ್ನ ಗಂಡ', 'ಅತಿ ಮಧುರ ಅನುರಾಗ', 'ಆಹಾ ನನ್ನ ತಂಗಿ ಮದುವೆ' ಈ ಎಲ್ಲ ಸಿನಿಮಾಗಳಲ್ಲಿ ಗಮನ ಸೆಳೆಯುವ ಅಕ್ಷರ 'ಅ'.

'ಬ' ಅಕ್ಷರ ಚೇತನ್ ಗೆ ಬಂಪರ್
ನಿರ್ದೇಶಕ ಚೇತನ್ ಕುಮಾರ್ 'ಬ' ಅಕ್ಷರ ಮೂಲಕ ಬಂಪರ್ ಹೊಡೆಯುತ್ತಿದ್ದಾರೆ. ಅವರ ಮೊದಲ ಸಿನಿಮಾ 'ಬಹದ್ದೂರ್' ದೊಡ್ಡ ಹಿಟ್ ಆಯ್ತು. ನಂತರ ಅದೇ ಅಕ್ಷರ ಮುಂದುವರೆಸಿ, 'ಭರ್ಜರಿ'ಯಲ್ಲಿಯೂ ಗೆದ್ದರು. ಇದೀಗ 'ಭರಾಟೆ' ಅವರ ಹ್ಯಾಟ್ರಿಕ್ ಸಿನಿಮಾವಾಗಿದೆ. ಮತ್ತೊಂದು ವಿಶೇಷ ಏನೆಂದರೆ, ಚೇತನ್ ಮೊದಲು ಬರೆದ ಹಾಡು 'ಬೈಟೆ ಬೈಟೆ..' ಕೂಡ 'ಬ' ದಿಂದ ಶುರು ಆಗುತ್ತದೆ.

ಉಪೇಂದ್ರ ಡಿಫರೆಂಟ್ ಟೈಟಲ್ ಗಳು
ನಟ, ನಿರ್ದೇಶಕ ಉಪೇಂದ್ರ ಯಾವುದೇ ಒಂದು ಅಕ್ಷರವನ್ನು ನಂಬಿಕೊಂಡಿಲ್ಲ. ಆದರೆ, ಸಿಂಬಲ್ ಹಾಗೂ ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಾರೆ. 'ಶ್', 'ಓಂ', 'A', 'H2O', 'ಸೂಪರ್' ಹೀಗೆ ಡಿಫರೆಂಟ್ ಟೈಟಲ್ ಗಳನ್ನು ನಾಮಕರಣ ಮಾಡುವುದರಲ್ಲಿ ರಿಯಲ್ ಸ್ಟಾರ್ ಎತ್ತಿದ ಕೈ.