»   » ಅಪ್ಪು ಸೆಂಚುರಿ, ಶಿವಣ್ಣ ಹಾಫ್ ಸೆಂಚುರಿ: ಗೆಲುವಿನ ಗುಟ್ಟೇನು.?

ಅಪ್ಪು ಸೆಂಚುರಿ, ಶಿವಣ್ಣ ಹಾಫ್ ಸೆಂಚುರಿ: ಗೆಲುವಿನ ಗುಟ್ಟೇನು.?

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸಿನಿಮಾ ನೂರು ದಿನ ಪೂರೈಸಿದೆ. ಇನ್ನೊಂದು ಕಡೆ ಶಿವಣ್ಣ ಕೂಡ ಅರ್ಧ ಶತಕ ಬಾರಿಸಿದ್ದಾರೆ. ಕ್ರಿಕೆಟ್ ಆಟದ ರೀತಿ ಅತ್ತ ಅಣ್ಣ ಮತ್ತು ಇತ್ತ ತಮ್ಮ ಇಬ್ಬರ ಜುಗಲ್ಬಂದಿಯಲ್ಲಿ ಸೆಂಚುರಿ ಮತ್ತು ಹಾಫ್ ಸೆಂಚುರಿ ದಾಖಲಾಗಿದೆ.

'ರಾಜಕುಮಾರ' 100 ಡೇಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿ

ಶಿವಣ್ಣ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ಈಗ ಐವತ್ತು ದಿನಗಳನ್ನು ಕಂಪ್ಲೀಟ್ ಮಾಡಿದೆ. ಅನ್ನದಾತ ರೈತರ ಬಗ್ಗೆ ಸಿನಿಮಾದ ಕಥೆ ಇದ್ದು, ನೋಡುಗರಿಗೆ ಕಥೆ ಬಹಳ ಇಷ್ಟ ಆಗಿತ್ತು. 'ರಾಜಕುಮಾರ' ಚಿತ್ರದ ಕಥೆ ಕೂಡ ಪ್ರೇಕ್ಷಕರ ಮನ ಗೆದ್ದಿತ್ತು.

ಚಿತ್ರಜಗತ್ತು ಮೆಚ್ಚುವ ಕೆಲಸಕ್ಕೆ ಮುಂದಾದ 'ರಾಜಕುಮಾರ' ನಿರ್ಮಾಪಕ

ಅಂದಹಾಗೆ, ಈ ವರ್ಷದ ದೊಡ್ಡ ಹಿಟ್ ಸಿನಿಮಾಗಳಾದ 'ರಾಜಕುಮಾರ' ಮತ್ತು 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾದ ಗೆಲುವಿನ ಪ್ರಮುಖ ಕಾರಣಗಳು ಇಲ್ಲಿದೆ ಓದಿ...

ಸಿನಿಮಾದಲ್ಲೊಂದು ಸಂದೇಶ

'ರಾಜಕುಮಾರ' ಮತ್ತು 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಎರಡು ಸಿನಿಮಾಗಳು ಬರಿ ರೆಗ್ಯುಲರ್ ಸಿನಿಮಾ ಅಷ್ಟೇ ಆಗಿರಲಿಲ್ಲ. ಎರಡು ಸಿನಿಮಾದಲ್ಲಿ ಒಂದೊಂದು ಅದ್ಭುತ ಸಂದೇಶ ಅಡಗಿತ್ತು.

ಅಣ್ಣಾವ್ರ ಆಶೀರ್ವಾದ

ಈ ಎರಡು ಸಿನಿಮಾಗಳಲ್ಲಿ ಡಾ.ರಾಜ್ ಕುಮಾರ್ ಅವರ ಅಭಿಮಾನ ತುಂಬಿತ್ತು. ಒಂದು ಸಿನಿಮಾದಲ್ಲಿ ಶಿವಣ್ಣ ರೂಪದಲ್ಲಿ ರಾಜ್ ಎಂಟ್ರಿ ಕೊಟ್ಟರೆ, ಇನ್ನೊಂದು ಸಿನಿಮಾದಲ್ಲಿ ಪುನೀತ್ ಅವರಲ್ಲಿ ಜನ ಅಣ್ಣಾವ್ರನ್ನು ಕಂಡರು.

ಸ್ಟೋರಿ ಲೈನ್

'ರಾಜಕುಮಾರ' ಚಿತ್ರದಲ್ಲಿ ತಂದೆ, ತಾಯಿ, ವೃದ್ಧಾಶ್ರಮ ಕಥೆ ಇತ್ತು. 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ರೈತರ ಮಹತ್ವವನ್ನು ಸಾರಿತ್ತು. ಈ ಎರಡು ಚಿತ್ರದ ಸ್ಟೋರಿ ಲೈನ್ ಒಬ್ಬ ಸಾಮಾನ್ಯ ವ್ಯಕ್ತಿಗೆ ತುಂಬ ಹತ್ತಿರವಾಗಿತ್ತು.

ಮನರಂಜನೆಗೆ ಮೋಸ ಇಲ್ಲ

ಸಿನಿಮಾ ಅಂದರೆ ಮನರಂಜನೆ ಇರಲ್ಲೇ ಬೇಕು. ಈ ಎರಡು ಸಿನಿಮಾಗಳಲ್ಲಿ ಸಂದೇಶದ ಜೊತೆಗೆ ಕಾಸು ಕೊಟ್ಟ ಪ್ರೇಕ್ಷಕನಿಗೆ ಬೋರ್ ಆಗದೆ ಇರುವ ರೀತಿ ಚಿತ್ರದ ನಿರೂಪಣೆ ಇತ್ತು.

ಬದಲಾವಣೆ ತಂದಿದೆ

''ಒಂದು ಒಳ್ಳೆಯ ಸಿನಿಮಾ ಅಂದರೆ ಅದು ಚಿತ್ರಮಂದಿರದಲ್ಲಿ ಶುರುವಾಗಿ ಅಲ್ಲಿಗೆ ಮುಗಿಯಬಾರದು, ಚಿತ್ರಮಂದಿರದ ಆಚೆ ಬಂದು ಅದು ಚರ್ಚೆ ಆಗಬೇಕು'' ಎನ್ನುವ ಮಾತಿದೆ. ಅದೇ ರೀತಿ ಈ ಎರಡು ಸಿನಿಮಾಗಳನ್ನು ನೋಡಿ ಬಂದ ಮೇಲೆ ಪ್ರೇಕ್ಷಕರು ಮನಸಿನಲ್ಲಿ ಯೋಚಿಸಿದರು... ಕೆಲವರು ಬದಲಾದರು...

English summary
Secrets Of 'Raajakumara' and 'Bangara Son Of Bangarada Manushya' Success. 'Raajakumara' movie completed 100days and Bangara Son Of Bangarada Manushya movie completed 50days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada