»   » ನಾಳೆ ಎರಡು ಕನ್ನಡ ಸಿನಿಮಾಗಳ ಬಿಡುಗಡೆ : ನಿಮ್ಮ ಆಯ್ಕೆ ಯಾವುದು?

ನಾಳೆ ಎರಡು ಕನ್ನಡ ಸಿನಿಮಾಗಳ ಬಿಡುಗಡೆ : ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಪ್ರತಿ ವಾರದಂತೆ ಈ ಶುಕ್ರವಾರವೂ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಕನ್ನಡದ ಎರಡು ಸಿನಿಮಾಗಳು ನಾಳೆ ರಿಲೀಸ್ ಆಗುತ್ತಿದೆ. ಅದರಲ್ಲಿಯೂ 30 ವರ್ಷದ ನಂತರ ಕನ್ನಡದಲ್ಲಿ ಒಂದು ಮೂಕಿ ಸಿನಿಮಾ ಬಂದಿದೆ. ಅದೇ 'ಮರ್ಕ್ಯುರಿ'.

'ಮರ್ಕ್ಯುರಿ' ಒಂದು ಸೈಲೆಂಟ್ ಸಿನಿಮಾ. ಈ ಕಾರಣದಿಂದ ಇದು ಒಂದು ಭಾಷೆಯ ಸಿನಿಮಾ ಅಲ್ಲ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಜಿಗರ್ ಥಂಡಾ', 'ಅರುವಿ' ಚಿತ್ರಗಳ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ವಿವಾದ ಹುಟ್ಟು ಹಾಕಿದ್ದ ರವಿಚಂದ್ರನ್ ಡೈಲಾಗ್ ಗೆ ಕತ್ತರಿ ಬಿತ್ತು

ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕರ್ನಾಟದಲ್ಲಿ ವಿತರಣೆ ಮಾಡುತ್ತಿದ್ದಾರೆ. ಇನ್ನು ಇಂದು ರಾತ್ರಿ 9.30 ಸಿನಿಮಾದ ಸೆಲಿಬ್ರಿಟಿ ಶೋವನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಮೂವಿಲ್ಯಾಂಡ್ ಸೇರಿದಂತೆ ನೂರು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

Seizer and mercury movies are releasing tomorrow

'ಮರ್ಕ್ಯುರಿ' ಜೊತೆಗೆ ಚಿರಂಜೀವಿ ಸರ್ಜಾ ನಟನೆಯ ಹೊಸ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಡೈಲಾಗ್ ವಿವಾದದ ಮೂಲಕ ಸುದ್ದಿ ಮಾಡಿದ್ದ 'ಸೀಜರ್' ಸಿನಿಮಾ ತೆರೆ ಮೇಲೆ ನಾಳೆ ಬರುತ್ತಿದೆ. ಈ ಚಿತ್ರದಲ್ಲಿ ನಟ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನು ಚಿತ್ರದಲ್ಲಿ ಇದ್ದ ''ಗೋ ಹತ್ಯೆ ಮಾಡುವುದು ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ'' ಎನ್ನುವ ಡೈಲಾಗ್ ವಿವಾದ ಹುಟ್ಟುಹಾಕಿತ್ತು. ಜೊತೆಗೆ ಇದೇ ಡೈಲಾಗ್ ನಿಂದ ಚಿತ್ರದಲ್ಲಿ ಅಭಿನಯಿದ್ದ ಪ್ರಕಾಶ್ ರೈ ನಿರ್ದೇಶಕ ವಿನಯ್ ಕುಮಾರ್ ಮೇಲೆ ಅಸಮಾದಾನ ವ್ಯಕ್ತಪಡಿಸದಿದ್ದರು . ಆದರೆ ಈಗ ಸಿನಿಮಾದ ಡೈಲಾಗ್ ಮ್ಯೂಟ್ ಆಗಿದೆ. ನರ್ತಕಿ ಚಿತ್ರಮಂದಿರ ಸೇರಿದಂತೆ ನಾಳೆ ಚಿತ್ರಮಂದಿರದಲ್ಲಿ 'ಸೀಜರ್' ಪ್ರದರ್ಶನ ಶುರು ಆಗುತ್ತಿದೆ.

English summary
Kannada actor Ravichandran's Seizer kannada movie and Prabhudeva's Mercury movies are releasing tomorrow April 13th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X